•  
  •  
  •  
  •  
Index   ವಚನ - 881    Search  
 
ಶರಣನ ಭಕ್ತಸ್ಥಲ - ಶರಣರ ಸಂಗ
ಪರಮ ತತ್ತ್ವದ ನಿಜಸಂಯುಕ್ತರ, ಆನು ನೀನೆಂಬ ಶಬ್ದಸುಖಿಗಳ ತೋರಾ ಎನಗೆ, ಮಹಾನುಭಾವರ ತೋರಾ ಎನಗೆ. ಲಿಂಗೈಕ್ಯರ, ಲಿಂಗಸುಖಿಗಳ, ಲಿಂಗಗೂಡಾಗಿಪ್ಪವರ, ಲಿಂಗಾಭಿಮಾನಿಗಳ ತೋರಾ ಎನಗೆ. ಅಹೋರಾತ್ರಿಯಲ್ಲಿ ನಿಮ್ಮ ಶರಣರ ಸೇವೆಯಲ್ಲಿರಿಸು, ಕೂಡಲಸಂಗಮದೇವಾ.
Transliteration Parama tattvada nijasanyuktara, ānu nīnemba śabdasukhigaḷa tōra enage, mahānubhāvara tōra enage. Liṅgaikyara, liṅgasukhigaḷa, liṅgagūḍāgippavara, liṅgābhimānigaḷa tōrā enage. Ahōrātriyalli nim'ma śaraṇara sēveyallirisu, kūḍalasaṅgamadēvā.
Manuscript
English Translation 2 Show me the men who are absorbed Within the truth of the Supreme, Rejoicing in the words 'I' am Thou;' Show me the great experients; show me Those one with Liṅga , who rejoice in Him, Who nestle Liṅga , within them, Those who are proud of Him. Make me, O Kūḍala Saṅgama Lord, To live and serve Thy Śaraṇās Both night and day! Translated by: L M A Menezes, S M Angadi
Hindi Translation जो परमतत्व लीन हैं, जो ‘सोऽहं’ शब्द में सुखी हैं मुझे ऐसे महानुभावों को दिखाओ । जो लिंगैक्य हैं जो लिंगसुखी हैं जो लिंगाश्रयी हैं जो लिंगाभिमानि हैं मुझे उन्हें दिखाओ । कूडलसंगमदेव, अहोरात्रि मुझे निज शरणों की सेवा में रखो ॥ Translated by: Banakara K Gowdappa
Telugu Translation పరతత్త్వపు నిజ సంయుక్తుల; నేనే నీవను శబ్ద సుఖుల నాకు చూపు మా మహానుభావుల చూపుమా; లింగైక్యుల లింగముఖుల; లింగాలయుల లింగాభిమానుల చూపు మా నా కహోరాత్రుల నీ శరణుల సేవ కూర్పుమ కూడల సంగయ్య! Translated by: Dr. Badala Ramaiah
Tamil Translation இறைவனுட னிணைந்து இன்புறுவோரை நானே, நீ எனும் சம இன்ப உணர்வு உள்ளோரைக் காட்டுவாய் ஐயனே, பெரும் அனுபவத்தைப் பெற்றோரைக் காட்டுவாய், இலிங்கத்துடன் இணைந்தோரை, இலிங்க இன்பம் எய்தியோரை இலிங்கமே உடலாக உள்ளோரைக் காட்டுவாய் இலிங்க அபிமானிகளைக் காட்டுவாய் பகலிலும், இருளிலும் உம் சரணருக்குத் தொண்டாற்றுமாறு செய்வாய் கூடல சங்கனே Translated by: Smt. Kalyani Venkataraman, Chennai
Marathi Translation परम तत्त्वांचे निजज्ञानी, अहं ब्रह्मास्मी. मी-तू रुपी शब्दसुखीचे दर्शन करावे मजला. अशा महानुभावीचे दर्शन करावे मला. लिंगैक्य, लिंगसुखी, लिंगहृदयी, लिंगाभिमानीचे दर्शन करावे मजला कूडलसंगमदेवा. अहोरात्री तुमच्या शरणांच्या सेवेत मज ठेवावे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜೀವನದ ಪರಮ ಮೌಲ್ಯವೇನಿದೆ ಅದರಲ್ಲಿ ನಿಷ್ಠರಾದ, ತಾನೆಂದು ಅನ್ಯರೆಂದು ಭೇದವನ್ನು ಭಾವಿಸದೆ ತನ್ನಂತೆಯೇ ಇನ್ನೆಲ್ಲವನ್ನೂ ಕಾಣುವ, ಶಿವಭಾವವನ್ನು ನಿಜಾನುಭಾವಮಾಡಿಕೊಂಡಿರುವ, ಲಿಂಗದಲ್ಲಿಯೇ ಮಗ್ನವಾಗಿ ಆ ಮಗ್ನತೆಯಲ್ಲಿ ಸುಖವನ್ನು ಕಾಣುವ, ಲಿಂಗಾಭಿವ್ಯಕ್ತಿಗೆ ಪಾತ್ರಸ್ವರೂಪರಾಗಿ ಪರಶಿವಲಿಂಗ ಸಂಬಂಧವಾದುದೆಲ್ಲಕ್ಕೂ ಅಭಿಮಾನಿಸುವ, ಅವಮಾನವೆಂದರೆ ಆತ್ಮಾರ್ಪಣಮಾಡಿಕೊಳ್ಳಲೂ ಸಿದ್ಧರಿರುವ ಶಿವಶರಣರನ್ನು ತಮ್ಮ ಕಣ್ಣು ಸದಾಕಾಲ ಕಾಣುತ್ತಿರಲಿ, ಕಂಡು ಅವರ ಸೇವೆಯಲ್ಲಿ ತಾವು ನಿರತವಾಗಿರುವಂತಾಗಲಿ ಎಂದು ಪ್ರಾರ್ಥಿಸುತ್ತಿರುವರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು