•  
  •  
  •  
  •  
Index   ವಚನ - 885    Search  
 
ಶರಣನ ಭಕ್ತಸ್ಥಲ - ಪ್ರಸಾದ
ಮೀಸಲು ಬೀಸರವಾದ ಪರಿಯ ನೋಡಾ: ಕಾಲು ತಾಗಿದ ಅಗ್ಘವಣಿ, ಕೈಮುಟ್ಟಿದ ಅರ್ಪಿತ, ಮನಮುಟ್ಟಿದ ಆರೋಗಣೆಯನೆಂತು ಘನವೆಂಬೆನಯ್ಯಾ? ಬಂದ ಪರಿಯಲ್ಲಿ ಪರಿಣಾಮಿಸಿ, ನಿಂದ ಪರಿಯಲ್ಲಿ ನಿಜವ ಮಾಡಿ, ಆನೆಂದ ಪರಿಯಲ್ಲಿ ಕೈಕೋ, ಕೂಡಲಸಂಗಮದೇವಾ.
Transliteration Mīsalu bīsaravāda pariya nōḍā: Kālu tāgida agghavaṇi, kaimuṭṭida arpita, manamuṭṭida ārōgaṇeyanentu ghanavembenayyā? Banda pariyalli pariṇāmisi, ninda pariyalli nijavamāḍi, ānenda pariyalli kaikō, kūḍalasaṅgamadēvā.
Manuscript
English Translation 2 Behold the way of laying offerings waste: Can I say, how that they are great- The water that the feet have touched. The offering that the hand has touched. The food the heart has touched? When I'm content with what has come, When I make true the way you are, Receive it as I mean it, Lord Kūḍala Saṅgama! Translated by: L M A Menezes, S M Angadi
Hindi Translation देखो यों मन्नत दूषित हुई - पैरों से स्पृष्ट अर्घ्य को हस्त से स्पृष्ट अर्पण को मन से स्पृष्ट भोजन को, मैं कैसे श्रेष्ट मानूँ? प्राप्त रीति से तृप्त होकर यथा स्थिति रीति से सत्य मान मेरी कथित रीति से ग्रहण करो कूडलसंगमदेव ॥ Translated by: Banakara K Gowdappa
Telugu Translation కట్టిన ముడుపు చెడనట్లు చూచుకొనుమా; కాళ్ళు కడిగిన పాద్యము; కేలు తాకిన అర్హ్యము; మనసు కె+N898క్కిన ప్రసాద మెట్లు ఘనమందునయ్యా? వచ్చినట్లు పరిణమించి నిల్చినట్లు నిజము తెలిసి నే బల్కినట్లు బరిగ్రహింపుమో సంగయ్యా! Translated by: Dr. Badala Ramaiah
Tamil Translation காணிக்கை பயனற்றுப் போன முறையைக் காணாய் பாதம் தொட்ட நீர், கைதொட்ட காணிக்கை மனம் விரும்பிய உணவை எப்படி உயர்ந்ததென்பேன்? வந்த முறையில் நிறைவடைந்து, உள்ளதைப் போன்றே அவற்றைப் புனிதமாக்கி அளிக்க வேண்டும். Translated by: Smt. Kalyani Venkataraman, Chennai
Marathi Translation नैवेद्य व्यर्थ गेल्याची रीत पहा. चरणस्पर्शाने पाणी मलिन, हस्तस्पर्शाने पदार्थ मलिन, मनस्पर्शाने भोजन मलिन, यांना पवित्र कसे मानू ? मला मिळालेले प्रेमाने आपणास अर्पण करतो. कृपया स्वीकारावे कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದೇವರ ಪೂಜೆಯೆಂದೊಡನೆ ಮೊದಲಿಗೆ ಬರುವ ಮಾತೆಂದರೆ –ಮಡಿ ಮತ್ತು ಮೀಸಲು, ಕಾಲು ತಾಕಬಾರದು, ಕೈ ಮುಟ್ಟಬಾರದು, ಮನಸ್ಸು ವೇದಿಸಬಾರದು. ಹೀಗೆ ಎಲ್ಲೆಲ್ಲೂ –ಇದು ಬಾರದು, ಇದೇ ಬೇಕೆಂಬ ನಿರ್ಬಂಧ. ಈ ದ್ವಂದ್ವದಲ್ಲಿ ಲಿಂಗದ ಪೂಜೆ ಹೇಗೆ ತಾನೇ ನೈಜವಾಗಿ ನಡೆದೀತು ಎಂಬುದು ಬಸವಣ್ಣನವರ ಪ್ರಶ್ನೆ. ತೊರೆಯ ನೀರನ್ನೋ ಕೆರೆಯ ನೀರನ್ನೋ ಕಾಲಿಂದ ತುಳಿದೇ ತಂದು ಅಭಿಷೇಕಕ್ಕೆ ಅಣಿಮಾಡಬೇಕು, ಹೂವನ್ನೋ ಪತ್ರೆಯನ್ನೋ ಕೈಯಿಂದಲೇ ಬಿಡಿಸಿ ತಂದು ಜೋಡಿಸಿಡಬೇಕು ; ನೈವೇದ್ಯಕ್ಕೆಂದು ಅಟ್ಟ ಅನ್ನವೋ ಅಂಬಲಿಯೋ ಅಘ್ರಾಣಿಸಲ್ಪಟ್ಟು ಮನಕ್ಕೆ ಸೋಕುವುದಾಗಲೇಬೇಕು –ಅಂದ ಮೇಲೆ ಮೀಸಲೆಂಬುದು ಹೇಗೆ ಸಾಧ್ಯ ? ಈ ಪರಿಸ್ಥಿತಿಯಲ್ಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಮಾಡಿ –ದೇವರೇ ಒಪ್ಪಿಸಿಕೋ ಎನ್ನುತ್ತ ನಿರಾಳವಾಗಿರುವುದೊಂದೇ ಮುಕ್ತಿಮಾರ್ಗ. ದೇವರು ಕೊಟ್ಟಿದ್ದನ್ನು ಭಕ್ತನೂ, ಭಕ್ತನು ಕೊಟ್ಟಿದ್ದನ್ನು ದೇವರೂ ಪ್ರೀತಿಯಿಂದ ಕೈಗೊಳ್ಳಬೇಕು –ಇದು ದೇವ-ಭಕ್ತರಿಬ್ಬರ ನಡುವಣ ಒಪ್ಪಂದ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು