ಶುದ್ಧವಾಯಿತ್ತೆಂಬೆನೆ? ಸುಯಿಧಾನಿ ನಾನಲ್ಲ;
ಅನುವಾಯಿತ್ತೆಂಬೆನೆ? ಅವಧಾನಿ ನಾನಲ್ಲ.
ಸುಯಿಧಾನಿ ಅವಧಾನಿ ಅರ್ಪಿತವ ನಾನರಿಯೆ:
ಇದ್ದ ಪರಿಯಲ್ಲಿ ನೀಡಿದರೆ, ಬಂದ ಪರಿಯಲ್ಲಿ ಕೈಕೊ,
ಕೂಡಲಸಂಗಮದೇವಾ.
Transliteration Śud'dhavāyittembene? Suyidhāni nānalla;
anuvāyittembene? Avadhāni nānalla.
Suyidhāni avadhāni arpitava nānariye:
Idda pariyalli nīḍidare, banda pariyalli kaiko,
kūḍalasaṅgamadēvā.
Manuscript
English Translation 2 Shall I claim it to be pure?
I am not so particular!
Shall I claim it to be perfect?
Such niceness is not mine!
Nothing I know of offerings
So scrupulously picked.
So when I serve it as it is,
Accept is as it comes,
O Kūḍala Saṅgama Lord!
Translated by: L M A Menezes, S M Angadi
Hindi Translation शुद्ध हुआ कहूँ? मैं सावधानी नहीं हूँ ।
सदुपयोग हुआ कहूँ? मैं अवधानी नहीं हूँ ।
सावधान, अवधान का अर्पण मैं नहीं जानता
जैसे मैं अर्पित करता हूँ वैसे ले लो कूडलसंगमदेव॥
Translated by: Banakara K Gowdappa
Telugu Translation శుచినైతి యందు నా జాగరూకుడగాను;
అనువుడనై తి యందునా అవధానినే గాను;
అవధాన జాగరూకల నర్పించు చెట్టులో తెలియ
ఉన్నట్లే వడ్డింతు వలసినట్లు చేకొనుమా దేవా ?
Translated by: Dr. Badala Ramaiah
Tamil Translation தூய்மையாக உள்ளது என்பேனோ?
விழிப்புணர்வு உள்ளவன் நான் அன்று
முறையாக உள்ளது என்பேனோ?
விழிப்புணர்வு உள்ளவன் நான் அன்று
விழிப்புணர்வோடு அர்ப்பிப்பதை நான் அறியேன்
உள்ளவாறு அளிப்பின் வந்தவாறு ஏற்பாய்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
शुध्द झाले म्हणू ? मी सर्वज्ञ नाही.
परिपूर्ण झाले म्हणू ? मी मर्मज्ञ नाही.
सर्वज्ञ, मर्मज्ञाप्रमाणे अर्पण करणे जाणत नाही.
जे आहे त्यास अर्पितो, त्यास आहे तसे स्वीकारा कूडलसंगमादेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪಂಚೇಂದ್ರಿಯಗಳ ಬಾಗಿಲಲ್ಲಿ ಕಾವಲು ನಿಂತು ಅಲ್ಲದುದನ್ನು ಒಳಗೆ ಬಿಡದೆ ಸಲ್ಲುವುದನ್ನೇ ನಿನಗೆ ಅರ್ಪಿಸೋಣವೆಂದರೆ ಆ ಜಿತೇಂದ್ರಿಯತ್ವ(ಸುಯಿಧಾನ)ವು ನನಗಿಲ್ಲ. ಎಲ್ಲವನ್ನೂ ಮನದ ಮೂಲಕವಾದರೂ ಸೋಸಿ ಅಣಿಮಾಡಿ ನಿನಗರ್ಪಿಸುವೆನೆಂದರೆ ಆ ಅವಧಾನಿ(ಮನಶ್ಯುದ್ಧಿ)ತನವೂ ನನಗಿಲ್ಲ.
ಆದ್ದರಿಂದ ನಾನು ಅರ್ಪಿಸುವ ಪದಾರ್ಥವಾಗಲಿ ನನ್ನ ಮನವಾಗಲಿ ಶುದ್ಧವಿಲ್ಲವಾಗಿ -ನನ್ನ ಶಿವಾರ್ಪಣವಿಧಾನ ನಿಷ್ಕಳಂಕವಾಗಿಲ್ಲ. ಈ ನಾನಿರುವ ರೀತಿಯಲ್ಲೇ ನನ್ನನ್ನು ನಿನಗೆ ಸಮರ್ಪಿಸಿಕೊಳ್ಳುತ್ತೇನೆ-ನನ್ನನ್ನು ನಿನ್ನವನನ್ನಾಗಿ ಸ್ವೀಕರಿಸು ಎಂದು ಬಸವಣ್ಣನವರು ಶಿವನಲ್ಲಿ ಮೊರೆಯಿಡುತ್ತಿರುವರು.
ವಿ : ಸುಯಿಧಾನ(<ಸುವಿಧಾನ ?)ವೆಂದರೆ ಹೊರಗಣ ಸಜ್ಜು, ಅವಧಾನವೆಂದರೆ ಒಳಗಣ ಸಜ್ಜು. ನೋಡಿ : ಚಿತ್ತಶುದ್ಧದಿಂ ಜ್ಞಾನದೀಪವ ಸುಯಿಧಾನವಾಗಿ ಬೆಳಗೆಯಮ್ಮ (ಶಿವದಾಸಗೀತಾಂಜಲಿ 792ವ), ಅದೆಂಥಾ ಸುಯಿಧಾನವೆ ತಾಯಿ ? ಒಂಭತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬರನು ಬಿಡದಿರೆ (ಅದೇ -801ವ), ಗುಣಕಮಳಕುಸುಮ ಪರಿಮಳ ನಿಳಯನು ಸುಳುಹು ಸುಯ್ದಾನಿ ಮಹಿಮ ಶರಣ (ಅದೇ 250), ಅವಧಾನಭಕ್ತಿಯಿಂ ಪ್ರಸಾದಿಯನರಿದು ನಿರಹಂಕಾರ ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ (ಅದೇ 804ವ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು