ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ;
ʼಶರಣಾರ್ಥಿʼ ಎಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ!
ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು, ನೋಡಾ, ಭಕ್ತಿ!
ಕೂಡಲಸಂಗನ ಶರಣರ ನಿಲವನರಿಯದೆ,
ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ!
Transliteration Pādārcaneya māḍuvenayyā, pādōdakada haṅgige;
ʼśaraṇārthiʼyembenayyā okkuda komba haṅgige!
Eḍeyāṭa kaḍabaḍḍiya koṭṭu keṭṭittu, nōḍā, bhakti!
Kūḍalasaṅgana śaraṇara nilavanariyade,
muyyige muyyi keṭṭittayyā enna bhakti!
Manuscript
English Translation 2 I worship at Thy feet
ForPādōdaka 's sake.
I say Hail, O hail!
To take what Thou giv'st back!
Behold! my piety
Is bankrupt, paying interest
Upon this mutual debt!
Being ignorant of the worth
Of Kūḍala Saṅga's Śaraṇās,
My piety was frittered away
In this game of give and take.
Translated by: L M A Menezes, S M Angadi
Hindi Translation पादार्चन करता हूँ, पादोदक से ।
‘शरणार्थि’ कहता हूँ शेष प्रसाद से ।
भक्ति इस आवागमन तथा लेन देन में नष्ट हुई ।
कूडलसंगमदेव के शरणों की स्थिति न जानकर
मेरी भक्ति लेन-देन में नष्ट हुई ॥
मेरी भक्ति लेन-देन में नष्ट हुई॥
Translated by: Banakara K Gowdappa
Telugu Translation పాదార్చన చేతునయ్యా పాదోదకము గోరి;
శరణార్థి అనియందు నయ్యా: ప్రసాదము చేపట్టి;
దురాశచే వడ్డీ కీయ చెడెరా నాభక్తి శరణుల నిల్వు; తెలియక
సరిసరిjైు వడ్డీకి వడ్డిjైు చెడిపోయెరా నాభక్తి
Translated by: Dr. Badala Ramaiah
Tamil Translation திருவடியை அர்ச்சிப்பேன் ஐயனே
திருவடித் திருநீரின் தொடர்பிற்காக
தஞ்சம் என்பேன் ஐயனே, பிரசாதத்தைப்
பெறும் தொடர்பிற்காக ஐயனே
அங்குமிங்கும் அலைந்து, கடன் வட்டியை
அளித்து பக்தி கெட்டது காணாய்
கூடல சங்கனின் சரணரின் நிலையை அறியாது
மொய்க்கு, மொய்யாகி கெட்டது ஐயனே என் பக்தி.
Translated by: Smt. Kalyani Venkataraman, Chennai
Marathi Translation
पादार्चना करतो देवा पादोदका प्राप्तीसाठी,
शरणागत राहतो देवा शेषप्रसादासाठी.
या देण्या-घेण्यामध्ये नष्ट झाली पहा भक्ती,
कूडलसंगाच्या शरणांचे व्यक्तीत्त्व न जाणल्याने
करणे, करुन घेण्यात नष्ट झाली माझी भक्ती.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪಾದೋದಕಬೇಕೆಂದು ನಿನ್ನ ಪಾದಪೂಜೆ ಮಾಡುತ್ತೇನೆ, ಶೇಷಪ್ರಸಾದಬೇಕೆಂದು ನಿನಗೆ ಶರಣಾರ್ತಿಯೆನ್ನುತ್ತೇನೆ. ಕಡಕೊಟ್ಟು ಬಡ್ಡಿಯ ಆಶೆಗಾಗಿ ಅಲ್ಲಿಂದಿಲ್ಲಿಗೆ ಓಡಾಡಿದಂತೆ ನನ್ನ ಲೌಕಿಕ ಲಾಭಕ್ಕಾಗಿ ನಿನ್ನಲ್ಲಿಗೆ ನಿನ್ನ ಶರಣರಲ್ಲಿಗೆ ಓಡಾಡುತ್ತಿದ್ದೇನೆ –ಇದು ಭಕ್ತಿಯಲ್ಲ.
ಜನರೇನೆಂದಾರೆಂಬ ಅಳುಕಿಂದ, ಅಥವಾ ಜನಮನ್ನಾಣೆ ನನಗೆ ದೊರಕೀತೆಂಬ ಪ್ರತ್ಯಾಶೆಯಿಂದ ಮಾತ್ರ ನಿನ್ನ ಪಾದಪೂಜೆ ಮಾಡುತ್ತಿರುವೆನೇ ಹೊರತು ಮತ್ತು ನಿನಗೆ ಶರಣಾರ್ತಿಯೆನ್ನುತ್ತಿರುವೆನೇ ಹೊರತು -ಶಿವ ಶರಣರ ಪಾದಗಳಿಗೆ ಸಮವಾದ ವಸ್ತುವಿನ್ನಿಲ್ಲ ಮತ್ತು ಅವರ ಪ್ರಸಾದಕ್ಕಿಂತ ಮಿಗಿಲಾದ ಪರಮಪರಿಣಾಮವಿನ್ನಿಲ್ಲ ಎಂಬ ಭಕ್ತಿಯಿಂದಲ್ಲ.
ತಂಬಿಗೆಯನ್ನು ಮುಯ್ಯಿಮಾಡಿ ತಟ್ಟೆಯನ್ನು ನಿರೀಕ್ಷಿಸುವ ಈ ಭಂಡವ್ಯವಹಾರ ಪ್ರತಿಫಲಾಪೇಕ್ಷಕವಲ್ಲದೆ ಆಧ್ಯಾತ್ಮಿಕವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು