ಶರಣನ ಭಕ್ತಸ್ಥಲ - ಭಕ್ತಿಮಾರ್ಗ
ಯಸ್ಯ ಕ್ರಿಯಾ ತಸ್ಯ ಭವತಿ ಎಂದು ಕಟ್ಟಾಚಾರದಲ್ಲಿದ್ದು
ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ.
ಉತ್ಪತ್ತಿ-ಸ್ಥಿತಿ-ಭೋಗ-ಭಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ.
ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು:
ಪರತತ್ತ್ವವನರಿದೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ.
ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ:
ಇಂತೀ ತ್ರಿವಿಧದಲ್ಲಿ ವಂಚಕನಾದರೆ
ಈಸು ವಿಧದೊಳಗೆ ಅಂಗವಿಲ್ಲ, ಮೇಲೆ ಸತ್ಪುರುಷರ ಸಂಗವಿಲ್ಲ,
ಯುಕ್ತಿ ಇಲ್ಲಾ, ಎನಗೆ ಭಕ್ತಿಯೆಂತಹುದಯ್ಯಾ?
ಬಲ್ಲವರ ಬೆಸಗೊಂಡರೆ ಎನ್ನ ಬಿಮ್ಮು ಕೆಟ್ಟಿಹುದೆಂದು
ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ!
ಕೂಡಲಸಂಗಮದೇವಾ, ಎನ್ನವಗುಣವ ನೋಡದೆ
ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ
ಎನಗೆ ಕೃಪೆ ಮಾಡಯ್ಯಾ.
Transliteration ʼyasya kriyā tasya bhavatiʼ endu kaṭṭācāradalliddu
nānu anusarisikoṇḍu naḍevannakka karmakāṇḍiyalla.
Utpatti-sthiti-bhōga-bhuktivuḷḷannakka bhaktikāṇḍiyalla.
Paravu sādhyavāyittendu kriyeyellava mīri naḍevenu:
Paratattvavanaridehenembannakka jñānakāṇḍiyalla.
Innu karmakāṇḍa, bhaktikāṇḍa, jñānakāṇḍa:
Intī trividhadalli van̄cakanādare
īsu vidhadoḷage aṅgavilla, mēle satpuruṣara saṅgavilla,
yuktiyillā, enage bhaktiyentahudayyā?
Ballavara besagoṇḍare enna bim'mu keṭṭihudendu
mellane prasaṅgadinda tiḷidu nōḍuve!
Kūḍalasaṅgamadēvā, ennavaguṇava nōḍade
śivarātriya saṅkaṇṇagaḷige karuṇisidante
enage kr̥pe māḍayya.
Manuscript
English Translation 2 So long as I accept
The rigid discipline which says
'As you sow, so you reap,'
And follow it in my life,
I'm not a ritualist.
So long as I possess
A body subject to
Birth, life, enjoyment, piety,
I'm not a pietist.
I live transcending all actions, so
It may be possible to find the Highest:
So long as I claim to know
The highest principle, I'm not a Seer.
Henceforward, titual, vision, piety-
Should I be cheating in these three
My body is not in all these ways
And over and above, this is
No fellowship with virtuous men.
If I'm not worthy, how can I have
Devotion? I try to understand
Quietly, as time fits, lest to ask of those
Who know, might pluck
A feather from my crown!
O Kūḍala Saṅgama Lord, wink at my faults,
Vouchsafing me the grace you showed
ŚivasarātriyaSarakaṇṇa !
Translated by: L M A Menezes, S M Angadi
Hindi Translation यस्य क्रिया तस्य भवति इस कठोर नियम का
अनुसरण करने तक मैं कर्मकांडी नहीं हूँ
उत्पत्ति-स्थिति-भोग-भुक्तियुत काया के रहने तक
मैं भक्तिकांडी नहीं हूँ ।
परम पद की सिद्धि की आशा से
सभी कर्मों का अतिक्रमण कर चलता हूँ ;
पर तत्वज्ञान होने तक
मैं ज्ञानकांडी नहीं हूँ ।
अब से कर्मकांड, भक्तिकांड, ज्ञानकांड-
इन त्रिविधों में छल करुँ, तो
इन विधानों में मेरा अंग नहीं
सत्पुरुषों का संग नहीं, युक्ति नहीं,
मुझमें भक्ति कैसे होगी?
ज्ञानीयों से पूछने से मेरा अभिमान भंग होगा
समझ मैं क्रमशः प्रसंगानुसार जान लेता हूँ ।
कूडलसंगमदेव, मेरे गुण न देखकर,
जैसे तुमने शिवरात्रि के संकण्णा पर कृपा की
वैसे मुझ पर करो ॥
Translated by: Banakara K Gowdappa
Telugu Translation యస్సక్రియాతస్య భవతి అని ఉగ్రాచారమున నిలిచి
అనుసరించి నడచుదాకనే కర్మిగాను
ఉత్పత్తి స్థితి భక్తికాయక మొప్ప నందాకనే భక్తుడగాను
పరము సాధ్యమయ్యెనని క్రియలేక మీరి నడతు కాని
పరతత్త్వము తెలియ నందాక జ్ఞానికాను మఱి
కర్మ; భక్తి; జ్ఞాన కాండల నిట్లే మూడు విధముల
వంచకుడైనచో నిక అంగములేదు; ఆ పై సజ్జన సంఘములేదు
యుక్తి లేదు భక్తి యెట్లల వడునయ్యా! ప్రాజ్ఞుల జూచి
నా బింకము చెడునంచు మెల్లగ మాటలచే తెలిసితిపో! సంగా!
నాయవగుణ మెంచక శివరాత్రి సంకన్నను కరుణించినట్లె నన్నుకరుణిపుమా
Translated by: Dr. Badala Ramaiah
Tamil Translation “யஸ்ய க்ரியா தஸ்ய பவதி” என்று
முறையான நெறியிலிருந்து கொண்டு, நான்
அனுசரித்து ஒழுகும் வரையில் கர்மமன்று
தோற்றம், இருப்பு, போகம், உணவு என
உடல் உள்ளவரையில் பக்திப் பயணியன்று
பரத்தை உணர்ந்தேன்என செயல்களை மீற நடப்பேன்
பரதத்துவத்தை அறிந்தவன் என்பது உள்ளவரை
ஞானப்பயணியன்று இன்னும் கர்ம, பக்தி
ஞானகாண்டம் என்னும் இம்மூன்றில்
வஞ்சனை செயின் பெறவியலாது
அதன்பிறகு மேலோரின் தொடர்பில்லை
யுக்தியில்லை, பக்தி எங்ஙனம் அரும்பும்?
வல்லோரைக் கேட்பின் என் செருக்கு அகலுமென
மெல்ல, பிறர் தொடர்பால் அறிந்து காண்பேன்
கூடல சங்கம தேவனே, என் இயல்பைக் காணாது
சிவராத்திரி சங்கண்ணருக்கு அருளியதைப் போல
எனக்கும் அருள்வாய் ஐயனே.
Translated by: Smt. Kalyani Venkataraman, Chennai
Marathi Translation
यस्य क्रिया तस्य भवीत` या अनुरुपाने आचरण
मी त्यानुसार आचरण करेपर्यंत कर्मकांडी नाही.
उत्पत्ती-स्थिती-भोग-भुक्ती अनुसार देह असे पर्यंत भक्तीकांडी नाही.
परमतत्त्व जाणण्यासाठी क्रियारहित भावात राहतो.
परमतत्त्व जाणेपर्यंत ज्ञानकांडी नाही.
कर्मकांड, भक्तीकांड, ज्ञानकांड
या त्रिविधाची वंचना केली तर त्या विधीत तनू नाही.
सत्पुरुषाचा सत्संग नाही.
युक्ती नसेल तर भक्ती कशी होईल देवा?
ज्ञानीच्या संगाने माझा अहं नष्ट व्हावा म्हणून
हळूच तशा समयी-प्रसंगी जाणून पाहतो.
कूडलसंगमदेवा, माझे गुण न पाहता
शिवरात्री संकण्णांच्या करुणेप्रमाणे
माझ्यावर कृपा करावी देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಅರ್ಥಸ್ಪಷ್ಟತೆಯಿಲ್ಲ. ವಾಕ್ಯರಚನೆ-ಇಡಿಯಾಗಿ ಬಂಧವೇ ಗೊಂದಲಮಯವಾಗಿದೆ. ಅದರ ಸರಳಾನುವಾದ ಈ ಮುಂದಿನಂತಿದೆ :
ಯಾವನು ಮಾಡುವನೋ ಅವನಿಗೆ ಇಷ್ಟಾರ್ಥ ಸಿದ್ಧಿಸುವುದು ಎನ್ನುತ್ತ ಕರ್ಮಗಳನ್ನ ಮಾಡುತ್ತಿರುವ ತನಕ ನಾನು ಕರ್ಮಕಾಂಡಿಯಲ್ಲ. ಹುಟ್ಟಿದೆ ಜೀವಿಸುವೆ ಭೋಗಗಳನ್ನು ಭೋಗಿಸುವೆನೆಂದು ದೇಹ ಧರಿಸಿರುವ ತನಕ ಭಕ್ತಿಕಾಂಡಿಯಲ್ಲ. ಜೀವನ್ಮುಕ್ತಿ ಸಾಧ್ಯವಾಯಿತು, ಇನ್ನೇನು ಮಾಡುವುದಿದೆ, ಪರತತ್ತ್ವವನ್ನೇ ನಾನು ತಿಳಿದಿರುವೆನೆನ್ನುವ ತನಕ ಜ್ಞಾನಕಾಂಡಿಯಲ್ಲ. ಹೀಗೆ ಕರ್ಮ-ಭಕ್ತಿ-ಜ್ಞಾನವೆಂಬ ಮೂರನ್ನು ವಂಚಿಸುವ ನನಗೆ ಯಾವುದೂ ಮೈಗೂಡದೆ, ಸತ್ಪುರುಷರ ಸಹವಾಸವಾಗದೆ, ಅನ್ವಯಿಕ ಪರಿಯೇರ್ಪಡದೆ-ಭಕ್ತಿಯಾದರೂ ಹೇಗೆ ಸಿದ್ಧಿಸೀತು? ಆ ಭಕ್ತಿಯೇನೆಂದು ಪ್ರಶ್ನೆಮಾಡಿಯಾದರೂ ತಿಳಿಯೋಣವೆಂದರೆ ಅಹಂಕಾರ ಅಡ್ಡಬರುತ್ತದೆ. ಶಿವಾನುಭಾವಪ್ರಸಂಗಗಳಲ್ಲಿ ಬಿಮ್ಮನೆ ಕುಳಿತು ವ್ಯರ್ಥ ಪ್ರಯತ್ನ ಮಾಡುತ್ತೇನೆ. ಶಿವನೇ ಈ ನನ್ನ ಅವಗುಣಗಳನ್ನು ಗಣನೆ ಮಾಡದೆ-ಶಿವರಾತ್ರಿಯ ಸಂಕಣ್ಣನಿಗೆ ಒಲಿದಂತೆ ನಿರಾಯಾಸವಾಗಿ ನನಗೆ ಒಲಿ ಎಂದು ಬಸವಣ್ಣನವರು ಪ್ರಾರ್ಥಿಸುತ್ತಿರುವಂತಿದೆ.
ಈ ವಚನದ ಕೊನೆಗೆ ಬರುವ ಸಂಕಣ್ಣನ ಕಥೆಯು ಕಣ್ಣಪ್ಪನ ಕಥೆಯನ್ನೇ ಹೋಲುವುದು : ಸಂಕಣ್ಣನೂ ಬೇಟೆಯಾಡುವ ಒಬ್ಬ ಬೇಡನೇ. ಒಂದು ಸಲ ಇವನು ಬೇಟೆಗೆ ಹೋದಾಗ ಅಡ್ಡ ಬಂದ ಹುಲಿಗೆ ಹೆದರಿ ಬಿಲ್ವಪತ್ರೆಯ ಮರವೊಂದನ್ನು ಏರಿ ಕುಳಿತಿರುತ್ತಾನೆ. ರಾತ್ರಿಯಾಯಿತು. ಅವನ ಪರದಾಟದಿಂದ ಉದುರಿದ ಬಿಲ್ವಪತ್ರೆ ಆ ಮರದ ಕೆಳಗೇ ಇದ್ದ ಶಿವಲಿಂಗದ ಮೇಲೆ ಬೀಳುತ್ತದೆ. ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾನೆ. ಇಷ್ಟರಿಂದಲೇ ಸುಲಭವಾಗಿ ಶಿವನು ಸಂಕಣ್ಣನಿಗೆ ಒಲಿದು ಮುಕ್ತಿಯನ್ನು ಕರುಣಿಸುತ್ತಾನೆ. ಅಲ್ಲಿಂದಾಚೆಗೆ ಸಂಕಣ್ಣನು ಶಿವರಾತ್ರಿಯ ಸಂಕಣ್ಣನೆಂದು ಹೆಸರುವಾಸಿಯಾಗುತ್ತಾನೆ. (ನೋಡಿ ಬೈ.ಕಾ.ಕ ಸೂತ್ರ ರತ್ನಾಕರ, ಸಂಪುಟ 1, ಪುಟ 224).
ಶಿವರಾತ್ರಿಯ ಸಂಕಣ್ಣನಿಗೆ ಒಲಿದಂತೆ ನನಗೂ ಒಲಿಯೆಂದು ಬಸವಣ್ಣನವರು ಪ್ರಾರ್ಥಿಸುತ್ತಿರುವಂತಿದೆ ಈ ವಚನದಲ್ಲಿ. ಆದರೆ ಈ ವಚನವನ್ನೇ ಬಸವಣ್ಣನವರದಲ್ಲವೆನಿಸುತ್ತದೆ. ಜ್ಞಾನಕಾಂಡ ಕರ್ಮಕಾಂಡಗಳನ್ನು ಭಕ್ತಿಕಾಂಡದೊಡನೆ ಸಾಟಿ ಮಾಡಿ ಬೆರಸಲಾಗಿದೆ ಮತ್ತು ಆ ಭಕ್ತಿಕಾಂಡವೂ ತಮಗಲ್ಲವೆನ್ನುತ್ತಿರುವಂತಿದೆ. ಬಸವಣ್ಣನವರು ಈ ಸಂಕಣ್ಣನನ್ನು ಯಾವ ರೀತಿಯಲ್ಲಾಗಲಿ ಪ್ರಸ್ತಾಪಿಸುತ್ತಿರುವುದು ಈ ವಚನದಲ್ಲಿ ಮಾತ್ರ. ಮತ್ತು ಈ ವಚನದಲ್ಲಿ ಬಸವಣ್ಣನವರ ಸಾರಸಂಗ್ರಹ ಉಕ್ತಿ ರೂಪವಾಗಲಿ ಅರ್ಥವ್ಯಕ್ತಿಯಾಗಲಿ ಭಾವದ ಬಿಸಿಯಾಗಲಿ ಇಲ್ಲ.
ಆದರೂ ಇದೇ ಸಂದರ್ಭದಲ್ಲಿ ಶರಣಧರ್ಮದ ಪ್ರಕಾರ ಕರ್ಮ-ಜ್ಞಾನ-ಭಕ್ತಿಕಾಂಡಗಳ ಸ್ವರೂಪವನ್ನು ತಿಳಿಯುವುದು ಒಳ್ಳೆಯದು : ಕರ್ಮಕಾಂಡದವನು ಮಾಡಿದ ಕರ್ಮ ಶಿಲೆಯ ಮೇಲೆ ಬರೆದ ಶಾಸನದಂತೆ ನೆಲೆಯೂರಿ. ಚಿಪ್ಪಿನಲ್ಲಿ ಬಿದ್ದ ಮುತ್ತಿನಂತೆ ಘಟ್ಟಿಗೊಳ್ಳುವುದರಿಂದ ಪಾಪಪುಣ್ಯಗಳುಂಟಾಗಿ ಆತ್ಮಕ್ಕೆ ಬಂಧವುಂಟಾಗುವುದು. ಜ್ಞಾನಕಾಂಡದವನು ಮಾಡಿದ ಕರ್ಮ ಮರಳ ಮೇಲೆ ಬರೆದ ಅಕ್ಷರದಂತೆ ಮೂಡಿ, ಪದ್ಮಪತ್ರದ ಮೇಲಣ ಜಲಬಿಂದುವಿನಂತೆ ರೂಪ ಧರಿಸಿದರೂ ಘಟ್ಟಿಯಾಗಿ ನಿಲ್ಲದಿರುವುದರಿಂದ ಉಂಟಾದ ಪಾಪ ಪುಣ್ಯಗಳು ಆತ್ಮಕ್ಕೆ ಅಂಟಿಯೂ ಅಂಟದೆ ಜಾರಿಹೋಗುವವು. ಭಕ್ತಿಕಾಂಡದವನಾದರೋ ಮಾಡಿದ ಕರ್ಮ ನೀರಿನ ಮೇಲೆ ಬರೆದ ಗೆರೆಯಂತೆ, ಕಾದ ಕಬ್ಬಿಣದ ಮೇಲೆ ಬಿದ್ದ ನೀರಿನ ಹನಿಯಂತೆ ಅಸ್ತಿತ್ವವನ್ನೇ ಪಡೆಯದೆ –ಆ ಕರ್ಮಫಲಗಳಾದ ಪುಣ್ಯಪಾಪಗಳು ಆತ್ಮಕ್ಕೆ ತೊಡಕುವುದೇ ಇಲ್ಲವಾಗಿ ಭಕ್ತನು ಸ್ವಯಂಭುವಾಗಿರುವನು.
ಅಂದರೆ ಕರ್ಮಕಾಂಡದಲ್ಲಿ ಬಂಧವುಂಟು ಬಿಡುಗಡೆಯಲ್ಲ, ಜ್ಞಾನಕಾಂಡದಲ್ಲಿ ಬಂಧವೂ ಉಂಟು –ಆ ಮೇಲೆ ಅದರಿಂದ ಬಿಡುಗಡೆಯೂ ಉಂಟು, ಭಕ್ತಿಕಾಂಡದಲ್ಲಿಯಾದರೋ ಬಂಧವೇ ಇಲ್ಲ –ಆದ್ದರಿಂದ ಬಿಡುಗಡೆ (ಮೋಕ್ಷ)ಯೆಂಬ ಫಲಪದವಿಯೂ ಇಲ್ಲ. ಭಕ್ತನದು ನಿತ್ಯಮುಕ್ತಸ್ಥಿತಿ. (ನೋಡಿ ಡಾ. ಎಲ್. ಬಸವರಾಜು ಸಂಪಾದಿಸಿರುವ ‘ವೀರಶೈವ ತತ್ತ್ವ ಮತ್ತು ಆಚರಣೆ, ಪುಟ 96).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು