•  
  •  
  •  
  •  
Index   ವಚನ - 890    Search  
 
ಶರಣನ ಭಕ್ತಸ್ಥಲ - ಜಾತಿ
ಕಳಾಬಿಂದು ವಟಾಮುಖಿಯೆಂಬ ಹೆಂಗೂಸಿನ ಕೈಯಲು ಜಲಾಕಾರವೆಂಬ ಗಡಿಗೆ ಇದ್ದಿತ್ತು, ಆ ಗಡಿಗೆಯಲ್ಲಿ ಚೆನ್ನಬಸವಣ್ಣ ನೀರ ತಂದ, ಮಡಿವಾಳಯ್ಯ ಸಯಿದಾನವ ತಂದ, ಇದರೊಲೆಯಡಿಯನುರುಹಿ ಕೊಡಾ, ಕೂಡಲಸಂಗಮದೇವಾ.
Transliteration Kaḷābindu vaṭāmukhiyemba heṅgusina kaiyalu jalakāravemba gaḍigeyittu, ā gaḍigeyalli cennabasavaṇṇa nīra tanda, maḍivāḷayya sāyidānava tanda, idaroleyaḍiyanuruhi koḍa, kūḍalasaṅgamadēvā.
Manuscript
English Translation 2 A female child Called Kāḷabinduvaṭāmukhi Had in her hands a pot Called form-of-water: thereto Chennabasavaṇṇa brought water, and Madīvallayya ingredients; Beneath its oven light the fire. O Lord, Kūḍala Saṅga Translated by: L M A Menezes, S M Angadi
Hindi Translation कलाबिंदु वटामुखी नामक बालिका के हाथों में जलाकार नामक कुंभ था । उस कुंभ में चन्नबसवण्णा जल लाया । मडिवाळय्या सामग्री लाया । इसके चूल्हे तले आग सुलगाओ, कूडलसंगमदेव ॥ Translated by: Banakara K Gowdappa
Telugu Translation కళా బిందువటాముఖి యనుకన్నె చంకలో జలాకారమను కుండయుండె; ఆ కుండతో చెన్న బనవన్న నీరు దెచ్చె; మాచయ్య సామగ్రిగొని తెచ్చె ఈ పొయ్యి నిక ముట్టింపుమయ్యా సంగయ్యా! Translated by: Dr. Badala Ramaiah
Tamil Translation கலை, பிந்து ஆலமரப்பரப்பனைய உடைய பெண்ணின் கையில் உடல் என்னும் பானை உள்ளது அப்பானையில் சென்ன பசவண்ணல் நீரை நிறைத்தனன், மடிவாளய்யன் பொருளை இட்டனன், இதனை உலையின் மீது இட்டு அருள்வாய் கூடல சங்கமதேவேன. Translated by: Smt. Kalyani Venkataraman, Chennai
Marathi Translation कलाबिंदू वटामुखी नावाच्या कन्येच्या हातात जलकाररूपी घडा होता. त्या घड्यात चन्नबसवण्णांनी पाणी भरले मडिवाळय्यांनी त्यात सामुग्री घातली. त्यासाठी चूल पेटवा प्रभूदेव, कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಿಂದುವೆಂದರೆ ಶಕ್ತಿ, ಕಳೆಯೆಂದರೆ ಸೃಷ್ಟಿ –ವಟಾಮುಖಿಯೆಂದರೆ ಈ ಸೃಷ್ಟಿಗೆ ಪ್ರಮುಖೆಯಾದ ಮಾಯೆ. ಈ ಮಾಯೆ ಬಿಂದುವಿಂದ ಉದ್ಭವಿಸಿ ಕಳೆಯಲ್ಲಿ ವಿಸ್ತೃತಗೊಂಡವಳಾಗಿ ಕಳಾಬಿಂದುವಟಾಮುಖಿ, ಇವಳ ಕೈಯಲ್ಲಿ ಒಂದು ಗಡಿಗೆಯೆಂದರೆ ಜೀವಜಲಕ್ಕಾಧಾರವಾದ ದೇಹ. ಈ ದೇಹವು ಶುಕ್ಲಶೋಣಿತಗಳ ಸಂಘಾತದಿಂದ ರೂಪಧರಿಸಿತಾಗಿ “ಜಲಾಕಾರ”ವೆಂದು ಅನ್ವರ್ಥವಾಗಿ ಕರೆಯಲ್ಪಡುವುದು. ಈ (ಜಲಾಕಾರ) ದೇಹವೆಂಬ ಗಡಿಗೆಯಲ್ಲಿ ನಿರ್ಮಲವಾದ ಮನಸ್ಸೆಂಬ ನಿರ್ಮಲೋದಕ ಚೆನ್ನಬಸವಣ್ಣನಿಂದ ತುಂಬಲಾಯಿತೆಂದೂ, ಹಸನಾದ ಜೀವಚೈತನ್ಯವೆಂಬ ಅಕ್ಕಿಬೇಳೆ ವಗೈರೆ ಮಡಿವಾಳ ಮಾಚಯ್ಯನಿಂದ ಸುರಿಯಲಾಯಿತೆಂದೂ –ಈಗ ಅದನ್ನು ಪಕ್ವಮಾಡಿ ಗುರುಲಿಂಗ ಜಂಗಮ ದಾಸೋಹದಲ್ಲಿ ವಿನಿಯೋಗ ಮಾಡಲು ಅನುವಾಗಲೋಸುಗ ಜ್ಞಾನಾಗ್ನಿಯನ್ನು ಹೊತ್ತಿಸಿಕೊಡೆಂದು ಕೂಡಲಸಂಗಮದೇವರನ್ನು ಬಸವಣ್ಣನವರು ಪ್ರಾರ್ಥಿಸುತ್ತಿರುವರು. ಬಸವಣ್ಣನವರಿಗೆ ಪ್ರಾಣಲಿಂಗೋಪದೇಶ ಮಾಡಿದವರು ಚೆನ್ನಬಸವಣ್ಣನವರೆಂದೂ, ದಂಡಿಸಿ ಶಿಕ್ಷಿಸಿ ಸರ್ವಸಂಪನ್ನತೆಯನ್ನು ಒದಗಿಸಿದವರು ಮಡಿವಾಳಮಾಚಿದೇವರೆಂದೂ ಬಸವಪುರಾಣಗಳಲ್ಲಿ ಹೇಳಿರುವುದು ಪ್ರಸಿದ್ಧವೇ ಇದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು