ದಿಟವ ಮಾಡಿ ಪೂಜಿಸಿದರೆ ಸಟೆಯ ಮಾಡಿ ಕಳೆವೆ,
ಸಟೆಯ ಮಾಡಿ ಪೂಜಿಸಿದರೆ ದಿಟವ ಮಾಡಿ ಕಳೆವೆ!
ಏನೆಂಬೆ, ಎಂತೆಂಬೆ? ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ
ಆನು ಮಾಡಿದ ಭಕ್ತಿ ಎನಗಿಂತಾಯಿತ್ತು,
ಕೂಡಲಸಂಗಮದೇವಾ!
Transliteration Diṭava māḍi pūjisidare saṭeya māḍi kaḷeve,
saṭeya māḍi pūjisidare diṭava māḍi kaḷeve!
Ēnembe, entembe? Sukhakke tumbida dīvige maneyellava suttante
ānu māḍida bhakti enagintāyittu,
kūḍalasaṅgamadēvā!
Manuscript
English Translation 2 If I should worship making it the truth,
I mar it, making it untrue;
If I should worship, making it untrue,
I mar it and making it the truth!
What shall I say? and how?
O Kūḍala Saṅgama Lord, my piety
Has come into this plight for me,
As if a lamp that,filled for brightness'sake,
Should set the entire house on fire!
Translated by: L M A Menezes, S M Angadi
Hindi Translation सत्य मानकर पूजूँ, तो असत्य मानकर खोता हूँ,
असत्य मानकर पूजूँ, तो सत्य मानकर खोता हूँ,
क्या कहूँ, कैसे कहूँ? जैसे सुख के लिए भरा हुआ दीप
सारा घर जलाता है वैसे हुई मेरी भक्ति कूडलसंगमदेव ॥
Translated by: Banakara K Gowdappa
Telugu Translation నిజమని పూజింప తప్పని విడ ద్రోతువు,
తప్పని పూజింప నిజమని పడద్రోతువు,
ఏమందు నెట్లందునయ్యా? వెల్గుకని వెల్గించిన దీపము
ఇల్లెల్ల కాల్చినట్లయ్యె: నాభక్తి నన్నింతకు దెచ్చెనయ్యా సంగయ్యా!
Translated by: Dr. Badala Ramaiah
Tamil Translation உண்மையோடு பூசிப்பின் பொய்யாக்கிக் களைவாய்
பொய்யாக பூசிப்பின் உண்மையாக்கிக் களைவாய்
என்னென்பேன்? எப்படி என்பேன்? ஒளியின்
இன்பத்தைத் துய்க்க ஏற்றிய விளக்கு வீட்டைச் சுட்டதனைய
நான் செய்த பக்தி என்னையே விழுங்கியது
கூடல சங்கம தேவனே.
Translated by: Smt. Kalyani Venkataraman, Chennai
Marathi Translation
सत्याची पूजा केली तर त्याला असत्य करून नष्ट केले.
असत्याची पूजा केली तर त्याला सत्य करून नष्ट केले.
याला काय म्हणू ? कसे म्हणू ?
प्रकाशासाठी लावलेल्या दिव्याने घर जाळल्यासम
मी केलेली भक्ती झाली कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಕೈಯಲ್ಲಿರುವ ಇಷ್ಟಲಿಂಗವೇ ದಿಟವೆಂದು ಅದನ್ನು ಪೂಜಿಸಹೋದರೆ ಅದು ಲಿಂಗವಲ್ಲವೆಂದು ಆ ಪೂಜೆಯನ್ನು ಎಲೆ ಶಿವನೇ ನೀನು ತಿರಸ್ಕರಿಸುತ್ತಿಯೇ. ಕೈಯಲ್ಲಿರುವುದು ಲಿಂಗವಲ್ಲವೆನ್ನುತ್ತ ಕೈಯಲ್ಲಿಲ್ಲದ ಪ್ರಾಣಲಿಂಗ(ಜಂಗಮ)ವನ್ನು ಪೂಜಿಸಹೋದರೆ ಅದೇ ದಿಟವೆಂದು ನೀನು ಮೆಚ್ಚುತ್ತೀಯೆ! ಎಲೆ ಶಿವನೇ ನಿನ್ನ ಆಂತರ್ಯ ಅದ್ಭುತ.
ಮತ್ತು ಇಷ್ಟಲಿಂಗೋಪಾಸನೆ ಸುಕರವೆಂದು ಉತ್ಸಾಹದಿಂದ ಪ್ರಾರಂಭವಾದ ನನ್ನ ಭಕ್ತಿಸಾಧನೆ ಆ ಪ್ರಾಣಲಿಂಗೋಪಾಸನೆಯಂಥ ಕಠಿಣಮಾರ್ಗದಲ್ಲಿ ತಡವರಿಸುತ್ತಿದೆ. ಲಿಂಗಪೂಜಾ ಮಾರ್ಗವಾಗಿ ಹೊರಟ ನನಗೆ ಬೇಡುವ ಕಾಡುವ ಜಂಗಮಲಿಂಗವನ್ನು ತೃಪ್ತಿಪಡಿಸಬೇಕಾದ ಕಠಿಣ ಪರಿಸ್ಥಿತಿ ಎದುರಾಗಿದೆ. ಬೆಳಕಿಗಾಗಿ ಹಚ್ಚಿದ ದೀಪ ಬೆಳಕಿಗಾಗಿ ನಿಲ್ಲದೆ ಬೆಂಕಿಯೂ ಆದಂತೆ -ಲಿಂಗವು ಲಿಂಗವಾಗಿರದೆ ಜಂಗಮವಾಗಿ ನನ್ನನ್ನೂ ನನ್ನದೆಂಬುದೆಲ್ಲವನ್ನೂ ಸುಟ್ಟು ಭಸ್ಮ ಮಾಡುವಂತಾಗಿದೆ. ಎಂದು ಬಸವಣ್ಣನವರು ಮೇಲ್ನೋಟಕ್ಕೆ ಪೇಚಾಡಿದಂತೆ ಕಂಡರೂ-ಅವರ ಆ ಮಾತಿನ ಮರೆಯಲ್ಲಿ –ತಾವು ಮಾಡಿದ ಲಿಂಗಭಕ್ತಿಯಿಂದ ಜಂಗಮಲಿಂಗಸೇವೆ ಏರ್ಪಟ್ಟು ತಮ್ಮ ಅಹಂಮಮತೆಗಳೆಲ್ಲವೂ ಆ ಜಂಗಮಲಿಂಗದ ಪಾದದೆಡೆ ಅರ್ಪಿಸಿದ ಹೂವುಗಳಂತೆ ಸಫಲವಾದುವೆಂದೂ, ಅದೊಂದು ಶಿವಚಮತ್ಕಾರವೇ ಆಯಿತೆಂದೂ ಹರ್ಷಪಡುತ್ತಿರುವರು ಬಸವಣ್ಣನವರು.
ಇಷ್ಟಲಿಂಗಪೂಜೆಯು ಪ್ರಾಣಲಿಂಗೋಪಾಸನೆಯಲ್ಲಿ ಬೇರು ಬಿಡದೆ, ಜಂಗಮಲಿಂಗೋಪಾಸನೆಯಲ್ಲಿ ಪಲ್ಲವಿಸದೆ –ಒಂದು ವ್ಯರ್ಥ ವಿಲಾಸವಾಗುವುದೆಂಬುದು ಬಸವಣ್ಣನವರ ಪ್ರಿಯವಾದ ಉಪದೇಶ. (ನೋಡಿ ವಚನ 220).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು