•  
  •  
  •  
  •  
Index   ವಚನ - 893    Search  
 
ಶರಣನ ಭಕ್ತಸ್ಥಲ - ಭಕ್ತ
ಭಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ; ಯುಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ; ಸಾರಿ ಶರಣನೆನಿಸುವೆನಯ್ಯಾ ಮೆಲ್ಲಮೆಲ್ಲನೆ! ಎಡಹುಗುಳಿಗಳ ದಾಂಟಿ ಬರಬರ ಲಿಂಗೈಕ್ಯನೆನಿಸುವೆನಯ್ಯಾ; ಕೂಡಲಸಂಗಮದೇವಾ, ನಿಮ್ಮಿಂದಧಿಕನೆನಿಸುವೆನಯ್ಯಾ!
Transliteration Bhaktanenisuvenayyā mellamellane; yuktanenisuvenayyā mellamellane; sāri śaraṇanenisuvenayyā mellamellane! Eḍahuguḷigaḷa dāṇṭi barabara liṅgaikyanenisuvenayyā; kūḍalasaṅgamadēvā, nim'mindadhikanenisuvenayyā!
Manuscript
English Translation 2 Gradually I make Myself Reputed as a devotee; Gradually I make myself Reputed as a worthy man; Gradually I make myself Reputed as a wandering Śaraṇa ! By clearing hurdles gradually I make myself Reputed as a man at one with Liṅga. O Kūḍala Saṅgama Lord, I make myself Reputed as a greater one than Thou! Translated by: L M A Menezes, S M Angadi
Hindi Translation भक्त कहलाऊँगा शनैः शनैः, युक्त कहलाऊँगा शनैः शनैः, शरण कहलाऊँगा शनैः शनैः, विघ्न बाधाओं को पारकर क्रमशः “लिंगैक्य”कहलाऊँगा शनैः शनैः, कूडलसंगमदेव तुमसे भी श्रेष्ट कहलाऊँगा ॥ Translated by: Banakara K Gowdappa
Telugu Translation భక్తుడనిపించు కొందునయ్యా, మెల్ల మెల్లగ; యోగ్యుడనిపించుకొందు నయ్యా మెల్ల మెల్లగ! చాటి శరణుడనిపించు కొందునయ్యా మెల్ల మెల్లగ! నెట్టెగురుటల దాటి మెల్లగవచ్చి లింగై క్యుడనిపించుకొందు సంగయ్యా నీకంటే అధికుడనిపించుకొందునయ్య Translated by: Dr. Badala Ramaiah
Tamil Translation மெல்ல மெல்ல பக்தன் என நினைவேன் ஐயனே மெல்ல மெல்ல யுக்தன் என நினைவேன் ஐயனே பொருத்தமுற சரணன் என நினைவேன் ஐயனே இடறி வீழும் குழிகளைத் தாண்டி வரவர இலிங்கத்துடன் ஒன்றியவன் என நினைவேன் கூடல சங்கமதேவனே, உம்மிலும் மிக்கவன் என நினைவேன் ஐயனே. Translated by: Smt. Kalyani Venkataraman, Chennai
Marathi Translation भक्त म्हणवून घेतो देवा हळूहळू, युक्त म्हणवून घेतो देवा हळूहळू, शरण म्हणवून घेतो देवा हळूहळू, अडथळे पार करुन लिंगैक्य म्हणवून घेतो देवा. कूडलसंगमदेवा, तुमच्याहून मोठा म्हणवून घेतो. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತನೆನಿಸಿ ಅಲ್ಲಿ ಸಂವೇದಿಸಿ ಯುಕ್ತನಾಗಬೇಕು. ಆಗಿ ಭವಭಾರವನ್ನೆಲ್ಲ ನೀಗಿಕೊಂಡು ಶಿವನಿಗೆ ಶರಣಾಗತನಾಗಿ ಶರಣನೆನಿಸಿ ಶಿವನಲ್ಲಿ ಅವಿರಳವಾಗಿ ಶಿವನಲ್ಲಿ ಅವಿರಳವಾಗಿ ಬೆರತು ಲಿಂಗೈಕ್ಯನೆನಿಸಬೇಕು. ಇದೆಲ್ಲ ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಈ ಸಾಧನ ಮಾರ್ಗದಲ್ಲಿ ಎಷ್ಟೋ ಸಲ ಪ್ರಗತಿಗೆ ಬದಲಾಗಿ ವಿಗತಿಯಾಗುವ ಸಾಧ್ಯತೆ ಬಹಳವಿದೆ. ಆದರೂ ಇಂದ್ರಿಯಗಳನ್ನು ಸಂಯಮಿಸಿಕೊಂಡು, ಸಜ್ಜನರ ಸೇವೆಯನ್ನು ನಡೆಸಿಕೊಂಡು ಮಹಾನುಭಾವರ ಪ್ರೀತಿಯನ್ನು ಗಳಿಸಿಕೊಂಡು, ಶಿವನೇ ನನ್ನ ಪತಿ ನಾನವನ ಸತಿಯೆಂಬ ಮಧುರಭಾವದಿಂದ ಶಿವಸಂಕಲ್ಪಗಳನ್ನು (ಪ್ರಾಣಗಳನ್ನು ಪಣವಾಗಿ ಒಡ್ಡಿಯಾದರೂ) ನಿರ್ವಹಿಸಿಕೊಂಡು, ಶಿವಶರಣರೇ ಶಿವನಿಗಿಂತ ಅಧಿಕರೆಂಬ ಭಾವನೆಯನ್ನು ರೂಢಿಸಿಕೊಂಡು ಬದುಕಬೇಕು. ಇಷ್ಟು ದೊಡ್ಡ ಬದುಕಿನ ಕನಸೊಂದನ್ನು ಕಂಡು ಅದನ್ನು ನನಸಾಗಿಸಿಕೊಂಡು ನಮಗೆಲ್ಲಾ ಮೇಲ್ಪಂಕ್ತಿಯಾದವರು ಬಸವಣ್ಣನವರು. ವಿ : (1) ಲಿಂಗೈ ಶಬ್ದವನ್ನು ಜೀವನ್ಮುಕ್ತನೆಂಬ ಅರ್ಥದಲ್ಲಿ ಗ್ರಹಿಸಬೇಕು. ಷಟ್ಸ್ಥಲದ ಶರಣ ಮತ್ತು ಐಕ್ಯ ಸ್ಥಲಗಳೆರಡೂ ಜೀವನ್ಮುಕ್ತ ಸ್ಥಿತಿಯನ್ನೇ ಕುರಿತುವಾಗಿವೆ. (2) ಭಕ್ತ-ಗುರು-ಲಿಂಗ-ಶರಣ-ಜಂಗಮ ಎಂಬ ಬಸವಧರ್ಮದ (ಸಮಾಜದ) ಅನುಶ್ರೇಣಿಯಲ್ಲಿ ಭಕ್ತ ಮತ್ತು ಶರಣರು ವೃಕ್ಷ ಮತ್ತು ಫಲಸ್ವರೂಪಿಗಳಾದರೆ –ಅವನ್ನು ರೋದೋಂತವಾಗಿ ಬೆಳೆಯುವ ಅಖಂಡಪ್ರಣಾಳಿಯೇ ಗುರುಲಿಂಗಜಂಗಮಾಭಿಧಾನವಾಗಿರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು