ಬಸವ ಬಾರೈ, ಮರ್ತ್ಯಲೋಕದೊಳಗೆ ಭಕ್ತರುಂಟೆ? ಹೇಳಯ್ಯಾ:
ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ!
ನಾನೊಬ್ಬನೆ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ, ನೀನೆ ಅಯ್ಯಾ! ಕೂಡಲಸಂಗಮದೇವಾ.
Transliteration `Basava bārayya, martyalōkadoḷage bhaktaruṇṭe? Hēḷayya:`
Mattārū illayya, mattārū illayya, mattārū illayya!
Nānobbane bhaktanu, martyalōkadoḷagaṇa bhaktarellarū
jaṅgama liṅga, nīne ayyā! Kūḍalasaṅgamadēvā.
Manuscript
English Translation 2 Come on Basava, and tell us, Sir,
Is there a devotee on earth?
None else, Sir, none, none else!
I only am a devotee:
All other devotees on earth
Are Jaṅgama; Liṅga-Thou Thyself,
O Kūḍala Saṅgama Lord
Translated by: L M A Menezes, S M Angadi
Hindi Translation आओ बसवेश, कहो, मर्त्यलोक में भक्त हैं?”
और कोई नहीं, और कोई नहीं, और कोई नहीं,
मैं ही एक मात्र भक्त हूँ, मर्त्यलोक के सभी भक्त
जंगमलिंग हैं, वे आप ही हैं, कूडलसंगमदेव॥
Translated by: Banakara K Gowdappa
Telugu Translation రావయ్యా బసవా; మర్త్య లోకమున భక్తులుండిరె చెప్పమన
ఎవరూ లేరయ్యా ఎవరూ లేరు
మఱి యెవ్వరూ లేరయ్యా నేనొకడనే భక్తుడ;
మర్త్య లోకమందున్న జంగమ లింగ భక్తులందరూ
నీవేనయ్యా కూడల సంగమదేవా!
Translated by: Dr. Badala Ramaiah
Tamil Translation “பசவனே, வருவாய் உலகிலே பக்தர்
உள்ளனரோ கூறுவாய் வேறு எவருமில்லை
வேறு எவருமில்லை, வேறு எவருமில்லை
நான் ஒருவனே பக்தன், உலகில் உள்ள
பக்தரனைவரும் ஜங்கமர், நீயே இலிங்கம்
ஐயனே, கூடல சங்கமதேவனே.
Translated by: Smt. Kalyani Venkataraman, Chennai
Marathi Translation
बसवा यावे.` मर्त्यलोकात भक्त आहेत का? सांगावे.
कोणीही नाही, कोणीही नाही, कोणीही नाही देवा.
मी एकटाच भक्त, मर्त्यलोकीचे सगळे जंगम, लिंग,
तुम्हीच देवा कूडलसंगमदेवा.
Translated by Shalini Sreeshaila Doddamani
Urdu Translation آکرمرے بسوا مرے بسوا یہ بتادو
دُنیامیں کوئی نیک بھگت ہےکہ نہیں ہے
میںنےتویہ محسوس کیا ہےکہ جہاں میں
اک میرے سوا کوئی نہیں،کوئی نہیں ہے
دُنیاکےہراک کنج میںجتنےبھی بھگت ہیں
وہ لِنگ میںجنگم میںترے رُوپ میں ڈھل کر
دراصل وہی توہےمرے کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನ ಇದು ತನ್ನ ಸರಳತೆಯಿಂದಲೇ ಮನೋಹರವಾದೊಂದು ಅಪುರೂಪದ ವಚನ.
ಬಸವಣ್ಣನವರನ್ನೊಂದು ಸಲ ಶಿವನ ಸಂಧಿಸಿ -ಈ ಲೋಕದಲ್ಲಿ ಯಾರಾದರೂ ಭಕ್ತರಿದ್ದಾರೆಯೇ ಎಂದು ಪ್ರಶ್ನಿಸಿದಂತೆಯೂ, ಆಗ ಬಸವಣ್ಣನವರು ಈ ಲೋಕದಲ್ಲಿರುವ ಪ್ರತಿಯೊಬ್ಬನೂ ಶಿವಸ್ವರೂಪಿಯೇ ಆಗಿ –ಅವರೆಲ್ಲರಿಗೆ ತಾನೊಬ್ಬನೇ ಭಕ್ತನಾಗಿ ಅವರ ಸೇವೆ ಮಾಡುತ್ತಿರುವುದಾಗಿ ಉತ್ತರಕೊಟ್ಟಂತಿರುವ ಪ್ರಶ್ನೋತ್ತರದ ಧಾಟಿಯಲ್ಲಿದೆ ಈ ವಚನ.
ಈ ವಚನ ಬಸವಣ್ಣನವರ ಒಂದು ಕ್ಷಣಭಂಗುರ ಕಲ್ಪನೆಯಿಂದ ರೂಪಗೊಂಡ ಒಂದು ಕೇವಲ ಶಬ್ದ ವಿಲಾಸವಲ್ಲ. ಈ ಭೂಮಿ ಕೈಲಾಸವಾಗಬೇಕು. ಇಲ್ಲಿಯ ಮಾನವರೆಲ್ಲಾ ಮಹಾದೇವರಾಗಬೇಕು-ತಾನೊಬ್ಬ ಮಾತ್ರ ಅವರೆಲ್ಲರ ಸೇವೆ ಮಾಡುವ ಭಕ್ತನಾಗಿಯೇ ಉಳಿದಿರಬೇಕೆಂಬ ತೀವ್ರವೂ ಸ್ಥಾಯಿಯೂ ಆದ ಅಭಿಲಾಷೆ ಬಸವಣ್ಣನವರಿಗಿತ್ತು.
ಬಸವಣ್ಣನವರು ಕೈಲಾಸದಿಂದ ಈ ಭೂಮಿಗವತರಿಸಿ ಬಂದುದಾದರೂ ಶಿವಧರ್ಮವನ್ನು ಇಲ್ಲಿ ವ್ಯಾಪಕವಾಗಿ ಪ್ರಚುರಪಡಿಸಬೇಕೆಂಬ ಕಾರಣಕ್ಕಾಗಿಯೇ ಎಂದು ಪುರಾಣಗಳೆಲ್ಲ ಹೇಳುತ್ತಿವೆ. ಈ ಅವತಾರ ವಿಚಾರ ಎಷ್ಟೇ ಕಾಲ್ಪನಿಕವಾಗಿರಲಿ -ಬಸವಣ್ಣನವರ ಭಾವಸರೋವರದಲ್ಲಿ ಮಾತ್ರ-ಪ್ರತಿಯೊಬ್ಬ ಮಾನವನೂ ಪೂಜ್ಯಪಾದನಾಗಿ. ಅವನ ಪಾದವೆಲ್ಲಾ ಕಮಲವಾಗಿ, ತಮ್ಮ ಮನ ಅಲ್ಲಿ ದುಂಬಿಯಾಗಿತ್ತೆಂಬುದರಲ್ಲಿ ಮಾತ್ರ ಲವಲೇಶವೂ ಕಲ್ಪನೆಯಿಲ್ಲ-ಅದೆಲ್ಲ ಶತಾಂಶ ವಾಸ್ತವವೇ ಆಗಿದೆ.
ಭೂಮಿಯಲ್ಲಿ ಭಕ್ತಿಯನ್ನು ಬಿತ್ತಲು ಬಂದ ಬಸವಣ್ಣನವರನ್ನು ಶಿವನು-“ಮರ್ತ್ಯದೊಳಗೆ ಭಕ್ತರಂಟೇ ಹೇಳಯ್ಯ” ಎಂದು ಪ್ರಶ್ನಿಸಿದಾಗ, ಯಾರು ಇಲ್ಲ ಯಾರೂ ಇಲ್ಲ ಯಾರೂ ಇಲ್ಲವೆಂದು ಮೂರು ಸಲ ಅವಧಾರಿಸಾಗ ಶಿವನದೆಷ್ಟು ಚಕಿತಗೊಂಡಿರಬೇಕು? ಬಸವಣ್ಣನವರು ಮುಂದುವರಿದು-“ನಾನೊಬ್ಬನೇ ಭಕ್ತನು”ಎಂದಾಗ ಆ ಶಿವನದೆಷ್ಟು ಭ್ರಮನಿರಸನಗೊಂಡಂತಾಗಿರಬೇಕು? ಬಸವಣ್ಣನವರು ಮತ್ತೆಯೂ ಮುಂದುವರೆದು-“ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮಲಿಂಗ ನೀನೇ ಅಯ್ಯ”ಎಂದ ಕ್ಷಣವೇ ಶಿವನದೆಷ್ಟು ರೋಮಾಂಚನಗೊಂಡಿರಬೇಕು? ಬಸವಣ್ಣನವರ ಈ ಉತ್ತರದಲ್ಲಿ ಭೂಲೋಕದ ಶಿವಭಕ್ತರ ಸಂಖ್ಯಾಮಾತ್ರವಷ್ಟೇ ಅಲ್ಲ –ಗುಣಮಟ್ಟವೂ ಸೂಚ್ಯವಾಗಿರುವುದನ್ನು ಗಮನಿಸಬೇಕು.
ಹೀಗೆ ಒಂದು ಚುಟುಕದಷ್ಟು ಇರುವ ಈ ಪುಟ್ಟ ವಚನದ ವ್ಯಾಪ್ತಿಯಲ್ಲಿ ಬಸವಣ್ಣನವರು ತೋರಿಸಿರುವ ಚಮತ್ಕಾರ –ಅತ್ಯುನ್ನತ ಮಟ್ಟದ ಕವಿತಾಗುಣದಲ್ಲಿ ಪರಿಣಮಿಸಿರುವುದು-ಅದರ ಅನಾಹತ ನಾದದಿಂದಲೇ ಎಂಬುದನ್ನು ಪರಿಭಾವಿಸಿರಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು