•  
  •  
  •  
  •  
Index   ವಚನ - 895    Search  
 
ಶರಣನ ಮಾಹೇಶ್ವರಸ್ಥಲ - ನಂಬಿಕೆ
ಪರಮಪ್ರಭುವೇ, ನೀ ಮುನಿದೆನ್ನ ಮರ್ತ್ಯಲೋಕದೊಳಗಿರಿಸಿದರೆ ಆನು ಸೈರಿಸಿದೆನಯ್ಯಾ. ಮದ, ಛಲಮದವಿದೇನಯ್ಯಾ? ದರುಶನಭ್ರಾಂತಿ ಇದೇನಯ್ಯಾ? ಕ್ರಿಯಾಕರ್ಮಸೂತಕವಿದೇನಯ್ಯಾ? 'ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ| ತ್ರೈಲೋಕ್ಯಾಕರ್ಷಣಕ್ಷಮಃ|| ತಥಾಪಿ ಲೌಕಿಕಾಚಾರಂ| ಮನಸಾಪಿ ನ ಲಂಘಯೇತ್'|| ಇಂತೆಂಬುದ ಮೀರಿದೆನಾಗಿ, ಲಿಂಗಯ್ಯಾ ,ನಿಮ್ಮ ನಂಬಿದೆನಯ್ಯಾ! ಇನ್ನು ಕಲಿಯುಗದಲ್ಲಿ ಬಳಸಿದರೆ, ಕೂಡಲಸಂಗಮದೇವಾ, ನಿಮ್ಮ ರಾಣಿವಾಸದಾಣೆ!
Transliteration Paramaprabhuvē, nī munidenna martyalōkadoḷagirisidare ānu sairisidenayyā. Mada, chalamadavidēnayyā? Daruśanabhrāntiyidenayyā? Kriyākarmasūtakavidēnayyā? 'Yadyapi syāt trikālajñaḥ| trailōkyākarṣaṇakṣamaḥ|| tathā pi laukikācāraṁ| manasāpi na laṅghayēt'|| intembuda mīridenāgi, liṅgayya,nim'ma nambidenayyā! Innu kaliyugadalli baḷasidare, kūḍalasaṅgamadēvā, nim'ma rāṇivāsadāna!
Manuscript
English Translation 2 O Lord Supreme, It's you That, in your anger, set me here Upon the earth; and I have suffered it. What is it, Sir, this pride, this obstinate pride; What this insanity of creeds and creeds? This foulness of rites and ceremonies? "Even though one knew The present, future and the past; Even though one could Enchant the three worlds- Even then, one ought not to transgress, Even in the mind, the normal practices" Transgressing what is said herein,, I put my faith in you, O Liṅga lord, Henceforward if I live In Kaliyuga, let me bear The malediction of your Queen! Translated by: L M A Menezes, S M Angadi
Hindi Translation हे परम प्रभो, तुमने रुष्ट होकर मर्त्यलोक में मुझे रखा, तो मैंने सहन किया । कुलमद, छलमदट्टये क्या हैं? दर्शन-भ्रांति क्या है? “यद्यपि स्यात् त्रिकालज्ञः त्रैलोक्याकर्षणक्षमः । तथापि लौकिकाचारं मनसापि न लंघयेत् ॥“ इसका अतिक्रमण कर हे लिंगदेव, तुम पर मैंने विश्वास किया । अब कलियुग में रहूँ, तो कूडलसंगमदेव तव रनिवास की सौगंध है॥ Translated by: Banakara K Gowdappa
Telugu Translation పరమ ప్రభూ నీవు కోపించి నను మర్త్య లోకమునకు త్రోయనే సహింతునయ్యా మదము ఛలమిది యేమయ్యా? దర్శన భ్రాంతి యిదియేమయ్యా! క్రియా కర్మ సూతకమిది యేమయ్యా? ‘‘యద్యపిస్సాత్ త్రికాలజ్ఞః తైలోక్యా కర్షణ క్షమః తదాపి లౌకికాచారం మన సాపి నలంఘయేత్’’ ఈ మాట మీరితి కాన లింగయ్యా నిన్నే నమ్మితి; అయ్యా యిక కలియుగమున మీరినచో సంగమదేవా; నీరాణి వాసమె సాక్షి! Translated by: Dr. Badala Ramaiah
Tamil Translation சரணனின் மாகேசுவரத்தலம் மேலான இறைவனே சினந்து, நீ என்னைப் பூவுலகில் தோன்றச் செய்ததைப் பொறுத்தேன் ஐயனே குல, பிடிவாதச் செருக்கு இது என்ன ஐயனே? தரிசனம் சார்ந்தமருள் இது என்ன ஐயனே? செயல், வினைத்தீட்டு இது என்ன ஐயனே? “யத்யபி ஸ்யாத் த்ரிகாலஜ்ஞ, த்ரைலோக்யாகர்ஷணக்ஷம ததாபி லௌகீகாசாரம் மனஸாபி ந லங்க யேத்” என்னும் இதனை மீறியதால் இலிங்கய்யனே, உம்மை நம்பினேன் ஐயனே இன்னும் கலியுகத்தில் மீறி நடப்பின் கூடல சங்கமதேவனே, உம் தேவியின் மீது ஆணை Translated by: Smt. Kalyani Venkataraman, Chennai
Marathi Translation परमप्रभू, आपण रागावून मला मर्त्यलोकी पाठविले. मी सगळे सहन केले देवा. कुल-छलमद हे काय आहे देवा? दर्शनाचा हा भ्रम कसला देवा? क्रिया, कर्म, सूतक हे काय आहे देवा? । यद्यपिस्यात्त्रिकालज्ञः त्रैलोक्याकषरणक्षमः। तथापि लौकिकाचारं मनसापि न लंघयेत्। म्हणून यापासून मी दूर झालो देवा. लिंगदेवा, तुमच्यावर विश्वास ठेवतो. पुन्हा मला कलियुगात जन्माला घातले तर कूडलसंगमदेवा, तुमच्या राणीवासाची शपथ. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ನೀನು ಮುನಿದು ನನ್ನನ್ನು ಈ ಮರ್ತ್ಯಲೋಕದಲ್ಲಿ ಹುಟ್ಟಿಸಿದಾಗ -ನಾನದನ್ನೆಲ್ಲ ಸೈರಿಸಿದ್ದಾಯಿತು. ಕುಲಮದಕ್ಕೆ. ಛಲ(ಪ್ರತಿಜ್ಞಾ)ಮದಕ್ಕೆ, ಷಡ್ದರ್ಶನಭ್ರಾಂತಿಗೆ, ಭಿನ್ನಕ್ರಿಯಾ ಷಟ್ಕರ್ಮ ಸೂತಕಕ್ಕೆ ಸಿಲುಕಿ ನರಳಿದ್ದೂ ಆಯಿತು. “ತ್ರಿಕಾಲಜ್ಞಾನಿಯಾದರೂ ಮೂರು ಲೋಕಗಳನ್ನು ಅಕರ್ಷಿಸಬಲ್ಲ ಸಾಮರ್ಥ್ಯವುಳ್ಳವನಾದರೂ ಲೌಕಿಕಾಚಾರವನ್ನು ಮಾತ್ರ ಮಾನಸಿಕವಾಗಿಯೂ ಉಲ್ಲಂಘಿಸಬಾರದೆಂಬ’’ ಮಾತನ್ನು ನಾನು ಮೀರಿದೆನಾದರೂ –ಆ ಕಾರಣದಿಂದಾಗಿಯೇ ನಾನು ನಿನ್ನಲ್ಲಿ ಭಕ್ತಿಯಿಡುವಂತಾಯಿತು. ಇನ್ನು ನಾನು ಈ ಕಲಿಕಾಲದಲ್ಲಿ ಇರುವನಲ್ಲ. ಲೌಕಿಕಾಚಾರವನ್ನು ಮೀರಿದ್ದರಿಂದಲೇ ಶಿವಭಕ್ತಿ ತಮಗಳವಟ್ಟಿತೆಂಬ ಬಸವಣ್ಣನವರು ಸಂಸಾರಿಯಾಗಿಯೂ ನಮಗೆ ಅವಧೂತರಂತೆಯೇ ಕಾಣುವರು. ತಮ್ಮ ಹೆಸರನ್ನೆತ್ತಿ ಶಿವಭಕ್ತವೃಂದವನ್ನೆಲ್ಲ ಶೋಷಣೆ ಮಾಡುವ ಈ ಕಲಿಕಾಲದಲ್ಲಿ –ಇನ್ನು ತಾವಿರುವುದಿಲ್ಲವೆಂದು ಎಂಟುನೂರು ವರ್ಷಗಳ ಹಿಂದೆಯೇ ಇಂದಿನದನ್ನು ಮುಂಗಂಡು ಐಕ್ಯರಾದರೆಂಬ ಈ ಮಾತು ಬಸವಣ್ಣನವರದೆಂದೇ ನಂಬುವುದರಲ್ಲಿ ನಮಗೂ ಒಂದು ಸಮಾಧಾನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು