ಶರಣನ ಮಾಹೇಶ್ವರಸ್ಥಲ - ಭ್ರಮೆ
ತನುಮನಧನವೆಂಬ ಕನ್ನಡಿ ನೋಡಯ್ಯಾ;
ಎನ್ನದೂ ಅಲ್ಲ, ನಿನ್ನದೂ ಅಲ್ಲ, ಬರಿಯ ಭ್ರಮೆಯ ಮಾತು!
ಆ ಭ್ರಮೆಗೊಳಗಾಗೆ, ನಿಮ್ಮ ಶ್ರೀಚರಣವ ಬಿಡೆ,
ಕೂಡಲಸಂಗಮದೇವಾ.
Transliteration Tanumanadhanavemba kannaḍi nōḍayya;
ennadū alla, ninnadū alla, bariya bhrameya mātu!
Ā bhramegoḷagāge, nim'ma śrīcaraṇava biḍe,
kūḍalasaṅgamadēvā.
Manuscript
English Translation 2 Look at the veil of body, mind and wealth:
Nothing is mine, nor yours-it is
A pure and simple dream!
I will not live within that dream,
I will not leave Thy holy feet,
O Kūḍala Saṅgama Lord
Translated by: L M A Menezes, S M Angadi
Hindi Translation तन, मन, धन रूपी अहं देखो,
यह न मेरा है, न तुम्हारा, केवल भ्रम की बात है
उस भ्रम में न पडूँगा, तव चरणों को नहीं छोडूँगा,
कूडलसंगमदेव॥
Translated by: Banakara K Gowdappa
Telugu Translation తను మన ధనములనెడి అద్దమును చూడుమయ్యా
ఇది నాదీకాదు నీదీ కాదు వట్టి పిచ్చిమాట;
ఈ పిచ్చికి లోనై మీ శ్రీచరణము విడను ‘దేవా!
Translated by: Dr. Badala Ramaiah
Tamil Translation உடல், மனம், செல்வம் எனும் ஆடியைக் காணாய்
என்னுடையதுமன்று, உன்னுடையதுமன்று
வெறும் மருள்சார்ந்த பேச்சு
அந்த மருளில் சிக்கி, உம் திருவடியை
விடேன் கூடல சங்கம தேவனே.
Translated by: Smt. Kalyani Venkataraman, Chennai
Marathi Translation
तन-मन-धनाचा आरसा (पडदा) पहा देवा.
हा माझा नाही, तुमचा नाही, फक्त भ्रम मात्र आहे.
त्या भ्रमामध्ये तुमचे श्रीचरण सोडले कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾರ ಸ್ವತ್ತೂ ಅಲ್ಲದ ಈ ತನು ಮನ ಧನವೆಂಬ (ಕನ್ನಡ<ಕಣ್ಣಡ : ಕಣ್ಕಟ್ಟು) ಭ್ರಾಮಕವಸ್ತು ಎಲ್ಲರಿಗೂ ತಾತ್ಕಾಲಿಕವಾಗಿ ತನ್ನದೇ ಎಂಬ ಭ್ರಮೆಯನ್ನುಂಟುಮಾಡುವುದು.
ಎಲೆ ಪರಶಿವನೆ, ನಾನು ಈ ಭ್ರಮೆಯಿಂದ ಕೊಚ್ಚಿ ಹೋಗದಂತೆ ನಿನ್ನ ಶ್ರೀಚರಣವನ್ನು ಬಿಗಿವಿಡಿದಿದ್ದೇನೆ. ನನ್ನನ್ನು ಸ್ವೀಕರಿಸು, ಈ ಮಿಥ್ಯಾಭಿಮಾನ ನನಗೆ ಬೇಡ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು