•  
  •  
  •  
  •  
Index   ವಚನ - 899    Search  
 
ಶರಣನ ಮಾಹೇಶ್ವರಸ್ಥಲ - ಶರಣರು
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದವರ ಕಂಡರೆ, ಅಯ್ಯನೆತೆಂಬೆನವರ? ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ: ಏನೆಂಬೆ? ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು ಕೂಡಲಸಂಗಮದೇವಾ, ಅವರನಯ್ಯಯೆಂಬೆನು.
Transliteration Aṣṭavidhārcane ṣōḍaśōpacāravallade nim'ma muṭṭalariyadavara kaṇḍare, ayyanetembenavara? Āva bhāvadalli, āva jñānadalli, āva mukhadalli arivavaradārayya: Ēnembe? Nim'malli samyakkarāda satyaśaraṇara kaṇḍu kūḍalasaṅgamadēvā, avaranayyayembenu.
Manuscript
English Translation 2 If I see ignorant fools attain to Thee In other ways Than eightfold worship and service sixteenfold How can I call them 'Sir'? Who's one who knows By any light, in any sense or form? What shall I say? Whenever I see The real Śaraṇās who're part of Thee, I call them 'Sir,' O Kūḍala Saṅgama Lord! Translated by: L M A Menezes, S M Angadi
Hindi Translation अष्टविधार्चन, षोडशोपचार हीन मनुज तुम्हें प्राप्त करना नहीं जानते उन्हें देख मैं कैसे सम्मान करुँ? किसी और भाव, ज्ञान या मुख से आर्य कहूँ श्रीमान् कहूँ । जाननेवाले कौन हैं? मैं क्या कहूँ? त्वल्लीन सत्यशरणों को देख मैं सम्मान करुँगा कूडलसंगमदेव॥ Translated by: Banakara K Gowdappa
Telugu Translation అష్ట విధార్చన షోడశోపచారములుగాక నిను ముట్ట తెలియని వారిని చూడ! వారిని అయ్యా అనలేను! ఏ భావమున ఏ జ్ఞానమున; యే ముఖమున తెలియ గలరో నిను? ఏమందు? నీపట్ల సమ్యక్కులగు సత్వ శరణుల చూచి; వారినే అయ్యా యందు కూడల సంగమదేవా! Translated by: Dr. Badala Ramaiah
Tamil Translation எண்வித அர்ச்சனை, பதினாறுவகை உபசாரமன்றி உம்மை பூசிக்க அறியாதவரைக் காணின் அவரை என்ன என்பேன் ஐயனே? எந்த உணர்வில் எந்த ஞானத்தில், எந்தப் புலனில் அறிபவர் யார் ஐயனே? என்னென்பேன்? உம்மிடம் இணைந்த உண்மை சரணரைக் கண்டு, கூடல சங்கமதேவனே அவரை என்ன என்பேன் ஐயனே. Translated by: Smt. Kalyani Venkataraman, Chennai
Marathi Translation अष्टविधार्चना, षोडशोपचाराविना तुमची उपासना करणाऱ्यांना स्वामी कसे म्हणू? कोणत्या भावात, कोणत्या ज्ञानात, कोणत्या मुखात तुम्हाला जाणणारे कोण आहेत देवा ? तुमच्यात समरस झालेल्या सत्य शरणांना पाहून त्यांनाच स्वामी स्वामी म्हणती कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯಾರನ್ನು ನಾನು ಗೌರವದಿಂದ ಅಪ್ಪಾವರೇ ಅಯ್ಯನವರೇ ಎಂದು ಕರೆಯಲಿ ? ಅಷ್ಟವಿಧಾರ್ಚನೆ ಷೋಡಶೋಪಚಾರವನ್ನು ಅದ್ದೂರಿಯಾಗಿ ಮಾಡಿ –ಮಾಡಿದ ಮರುಘಳಿಗೆಯೇ ಆ ಇಷ್ಟಲಿಂಗದೇವರನ್ನು ಮರೆಯುವ, ಮತ್ತೆ ಮಧ್ಯಾಹ್ನವೋ ರಾತ್ರಿಯೋ ಹೊಟ್ಟೆ ಹಸಿದಾಗ ಉದಕಾಹಾರದ ಚಿಂತೆಯಲ್ಲಿ ಮರಳಿ ಅಷ್ಟವಿಧಾರ್ಚನೆ ಷೋಡಶೋಪಚಾರದಲ್ಲಿ ತೊಡಗುವ, ಮರಳಿ ದೇವರನ್ನು ಮರೆಯುವ ಮರೆಕುಳಿಗಳನ್ನು ನಾನೆಂದಿಗೂ ಅಪ್ಪಾವರೇ ಅಯ್ಯನವರೇ ಎನ್ನಲಾರೆ. ಎಲೆ ಶಿವನೆ, ಯಾರು ನಿನ್ನನ್ನು ಎಲ್ಲಾ ಭಾವದಲ್ಲಿಯೂ ಎಲ್ಲಾ ಜ್ಞಾನದಲ್ಲಿಯೂ ಎಲ್ಲಾ ಮುಖದಲ್ಲಿಯೂ ನಿರ್ನಿಮಿತ್ತ ನೆನೆಯುತ್ತಿರುವರೋ -ಸತ್ಯವಂತರಾದ ಆ ಸಮ್ಯಕ್ ಶರಣರನ್ನು ಮಾತ್ರ ನಾನು ಅಯ್ಯ ಅಪ್ಪ ಎನ್ನುವೆನೆನುತ್ತಿರುವರು ಬಸವಣ್ಣನವರು. ವಿ : ಅಯ್ಯನವರೇ ಎಂದರೆ ಅವನು -ಹಾಗೆಂದು ಕೂಗಿದವನಿಗೆ ತಂದೆಯಂತೆ ಹಿತೈಷಿಯಾಗಿರಬೇಕು, ಮತ್ತು ಭವಿಜನ್ಮವನ್ನು ಕಳೆದು ಆಧ್ಯಾತ್ಮಿಕ ಮರುಜನ್ಮವನ್ನು ಕೊಡಬಲ್ಲ ಜ್ಞಾನಿಯೂ ಮಹಾ ದಾನಿಯೂ ಆಗಿರಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು