•  
  •  
  •  
  •  
Index   ವಚನ - 900    Search  
 
ಶರಣನ ಮಾಹೇಶ್ವರಸ್ಥಲ - ಪೂಜೆ
ಮರನ ಹೂವ ಕೊಯಿದು ಮರಕ್ಕೇರಿಸಿ, ನದಿಯುದಕವ ನದಿಗರ್ಪಿತವ ಮಾಡಿ, ಕರುವನಗಲಿಸಿ, ತಾಯ ಮರುಗಿಸಿ ಮೊಲೆವಾಲ ಕರೆದುಣಬೇಡವೊ! ಕೂಡಲಸಂಗಮದೇವಾ, ನೀ ಮಾಡಿದ ಮಾಯೆ, ಹಲಬರ ಬಾಯ ಟೊಣೆದೇ ಹೋಯಿತ್ತು!
Transliteration Marana hūva koyidu marakkērisi, nadiyudakava nadigarpitava māḍi, karuvanagalisi, tāya marugisi molevāla kareduṇabēḍavo! Kūḍalasaṅgamadēvā, nī māḍida māye, halabara bāya ṭoṇede hōyittu!
Manuscript
English Translation 2 Oh, do not feed yourself Offering the tree its own plucked flowers, offering the stream the water of the stream, Pressing the unders whin you have Hurt the poor dam by wearing of her calf. O Kūḍala Saṅgama Lord, The favours Thou hast done Have slipped through many mouths and gone! Translated by: L M A Menezes, S M Angadi
Hindi Translation तरु का पुण्य तोड तरु को अर्पित कर, नदी का जल नदी को अर्पित कर, बछडे को छुडाकर उसकी माँ को दुःख देकर, स्तन का दूध दुहकर मत पिओ! कूडलसंगमदेव की माया ने अनेकों के मुँह पर थप्पड मारा है ॥ Translated by: Banakara K Gowdappa
Telugu Translation చెట్టు పూలుగోసి చెట్టుకే అర్పింతు; ఏటి నీరుదెచ్చి ఏటబోతు; దూడను విడదీసి తల్లిని మెప్పించి పాలుపిండి కడుపు నింపుకొనకురా! సంగా, నీవు చేసిన మాయ పలువుర నోళ్ళ కొట్టెనే కొట్టె గదరా ! Translated by: Dr. Badala Ramaiah
Tamil Translation மரத்தின் பூவைக் கொய்து மரத்திற்கு அர்ப்பித்து நதியின் நீரை நதிக்கு அர்ப்பித்து கன்றை அகற்றி, தாயை மருகவைத்து முலைப்பாலைக் கறந்து அருந்தாதீர் கூடல சங்கம தேவன் செய்த மாயை பலரின் வாயைக் குத்தியது அன்றோ! Translated by: Smt. Kalyani Venkataraman, Chennai
Marathi Translation झाडाचे फूल काढून झाडाला अर्पण करणे, नदीचे पाणी नदीला अर्पण करणे, वासराला दूर करुन, गायीला त्रास देवून दूध काढून खाऊ नको रे ! कूडलसंगमदेवाची ही माया अनेकांना फसवित आली आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತೊರೆ ಹರಿಯುತ್ತಿದೆ, ಅದರ ತಡಿಯಲ್ಲೊಂದು ಮರ ಹೂಬಿಟ್ಟದೆ, ಅದರ ಅಡಿಯಲ್ಲೊಂದು ಹಸುವಿದೆ, ಅದರ ಕೆಚ್ಚಲನ್ನು ಕರು ಕುಡಿಯುತ್ತಿದೆ, ಹಸಿವಾಯಿತೆಂಬ ಅವಸರದಲ್ಲಿ ತೊರೆಯ ನೀರಲ್ಲಿ ನಿಂತು ಸಂಧ್ಯಾವಂದನೆಗೊಂದು ಆ ತೊರೆಯ ನೀರನ್ನೇ ತೊರೆಗೆ ಅರ್ಘ್ಯವೆರೆದು, ಪೂಜೆಗೆಂದು ಆ ಮರದ ಹೂವನ್ನೇ ಮರಕ್ಕೆ ಮುಡಿಸಿ -ಓಡಿ ಬಂದು ಆ ಕರುವನ್ನು ಅಗಲಿಸಿ ಆ ಹಸುವನ್ನು ಕರೆದು ಹಾಲುಣ್ಣಬೇಡ. ದೈಹಿಕ ಮರ್ಜಿಯಿಂದ ನೀನು ಮಾಡುವ ಈ ಆಧ್ಯಾತ್ಮಿಕ ಉಪಚಾರಗಳನ್ನು -ಪ್ರಕೃತಿ ಪ್ರಾಣಿಗಳ ನೈಜಕ್ಕಿಂತ ಮಿಗಿಲಾದ ಸಾಧನೆಯಾಗವು. ನಿನ್ನ ಆಧ್ಯಾತ್ಮಿಕ ಕ್ರಿಯೆಗಳೂ ನಿನ್ನ ಹಸಿವೆಯಷ್ಟೇ ನೈಜದುರ್ದಮ್ಯವಾದಾಗಲೇ ನೀನು ಈ ಪ್ರಕೃತಿಯಲ್ಲಿ ತೇಜೋವಂತನಾಗಿ ಥಳಥಳಿಸುವೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು