ಶರಣನ ಮಾಹೇಶ್ವರಸ್ಥಲ - ಶರಣರು
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ,
ಕೋಪದಲ್ಲಿ ಶಿವಕಳೆಯಾದ ಕರಡಿಗೆಯನೆ ಮುರಿದ,
ಧೂಪಗುಂಡಿಗೆಯನೊಡೆದ, ದೀಪಾರತಿಯ ನಂದಿಸಿದ,
ಬಪ್ಪ ಪರಿಯಾಣದೋಗರವ ತುಡುಕಿದ:
ಪಾಪಕರ್ಮ, ಕೂಡಲಸಂಗಮದೇವಾ, ನಿಮ್ಮ ಶರಣ!
Transliteration Tāpatrayavendare rūpa kāṇutta kanalida,
kōpadalli śivakaḷeyāda karaḍigeyane murida,
dhūpa guṇḍigeyanoḍeda, dīpāratiya nandisida,
bappa pariyāṇadogarava tuḍukida:
Pāpakarma, kūḍalasaṅgamadēvā, nim'ma śaraṇa!
Manuscript
English Translation 2 Would you speak of triple pains?
Why, even as he beheld my face, he raged;
And in his rage, he broke the casket
Which carriesŚiva's spark;
Shattered the censer, put out the waving lights,
Seized up the food upon the offered plate:
What, sinful acts, O Kūḍala Saṅgama Lord,
Thy Śaraṇa did!
Translated by: L M A Menezes, S M Angadi
Hindi Translation तापत्रय कहते ही मेरी आकृति देख कुपित हुआ,
क्रोध में शिवज्योति का संपुट तोडा,
धूप-पात्र फोडा, दीपारति बुझा दी,
थाली में प्रस्तुत अर्पण झटका दिया
तव शरण पापकर्म संहारक है, कूडलसंगमदेव ॥
Translated by: Banakara K Gowdappa
Telugu Translation తాపత్రయ మనగా రూప మగపడు; రేగిన కోపమున
శివుడున్న లింగకాయనే పడగొట్టు; ధూపార్తినే
ద్రుంచివై చు; దీపాగ్ని నార్చు; తట్టగనున్న ఓగిరముల చెఱచు
పాప కర్ముడు నీ శరణుడు కూడల సంగమదేవా!
Translated by: Dr. Badala Ramaiah
Marathi Translation
संकटात सापडलेल्यांचे रुप पाहून रुसतात.
रागासमयी इष्टलिंगाचा करंडा फोडतात.
धूपदानी तोडतात, आरतीचा दिवा विझवतात.
भोजन सामग्री अस्ताव्यस्त करतात.
पापकर्म संहारक आहेत. कूडलसंगमदेवा तुमचे शरण.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದೈಹಿಕವಾಗಿ ಬಂದ ಆಪತ್ತು ಸಂಪತ್ತುಗಳಿಂದ, ದೈಹಿಕವಾಗಿ ಬಂದ ರೋಗರುಜಿನಗಳಿಂದ ಆತ್ಮಿಕವಾಗಿ ಬಂದ ಕಾಮತಾಮಸಾದಿಗಳಿಂದ ತನ್ನ ಸಮಚಿತ್ತವನ್ನು ಕದಡಿಕೊಳ್ಳಲಾಗದು ಶರಣ.
ಈ ಆದರ್ಶದಲ್ಲಿ ಕಿಂಚಿತ್ತು ಕೊರತೆಯಾದರೂ ಆ ಶರಣನು ತನ್ನ ಶಿವಲಾಂಛನಾಂಚಿತ ವೇಷವನ್ನು ಕಂಡು ತಾನೇ ಸಿಡಿಮಿಡಿಗೊಳ್ಳುವನು, ಹಿಡಿದ ಶಿವಲಿಂಗದ ಕರಡಗೆಯನ್ನು ಮುರಿಯುವನು, ಧೂಪಗುಂಡಿಗೆಯನ್ನು ಒಡೆಯುವನು, ದೀಪಾರತಿಗಳನ್ನೆಲ್ಲ ಆರಿಸುವನು, ಬಳಿ ಬಂದ ನೈವೇದ್ಯದ ಬಟ್ಟಲನ್ನು ಪಕ್ಕಕ್ಕೆ ತಳ್ಳುವನು.
ತಾಪತ್ರಯ ಮಾದು ಭಾವ ಹಸನಾಗದ, ಪ್ರಾಣವೇ ಲಿಂಗವಾಗದ, ಮನಸ್ಸು ಪರಿಮಳವಾಗದ, ಹೃದಯ ತಣ್ಣನುರಿಯುವ ಜ್ಯೋತಿಯಾಗದ, ತನ್ನಿರವೇ ನೈವೇದ್ಯವಾಗದ ತನ್ನ ಭಂಗಕ್ಕೆ ತಾನೇ ಹೇಸುವನು ಶರಣ -ನಟನೆ ನಾಜೂಕಿನವನಲ್ಲವವನು.
ಶರಣನು ಶಿವಪೂಜೆಯನ್ನೇ ಅಲ್ಲ-ಇಡಿಯಾಗಿ ತನ್ನ ಜೀವನವನ್ನೇ ನಿಜಾಯತಿಯಿಂದ ನಡೆಸಬೇಕೆಂಬ ಕಟ್ಟುಗ್ರ ಛಲ ಮತ್ತು ಆಗ್ರಹದವನು (ನೋಡಿ ವಚನ 185, 679).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು