ಶರಣನ ಮಾಹೇಶ್ವರಸ್ಥಲ - ಶರಣರು
ಈ ಲೋಕದ ಭೀತರು, ಆ ಲೋಕದ ಕಲಿಗಳು.
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯರೆಲ್ಲರೂ
ಅಜಾತಂಗೆ ಸರಿಯೆ?
ಮೂಜಗದಲ್ಲಿ ನಿರತರು ಕೂಡಲಸಂಗನ ಶರಣರು
ತ್ರಿವಿಧವನರಿಯರು.
Transliteration Ī lōkada bhītaru, ā lōkada kaligaḷu.
Sālōkya, sāmīpya, sārūpya, sāyujyarellarū
ajātaṅge sariye?
Mūjagadalli nirataru kūḍalasaṅgana śaraṇaru
trividhavanariyaru.
Manuscript
English Translation 2 The cowards of this world
Are heroes of the other world.
Are all true saints who occupy
Various degrees of beatitude,
Equal to Unborn?
Kūḍala Saṅga's Śaraṇa's are caught
In the three worlds; know not
The triple state.
Translated by: L M A Menezes, S M Angadi
Hindi Translation इस लोक के भीरू उस लोक के योद्धा हैं ।
सालोक्य, सामीप्य, सारूप्य, सायुज्य जिन्हें प्राप्त हैं।
वे अजात के समान हैं?
कूडलसंगमेश के शरण तीनों लोकों में निरत हैं
वे त्रिविध ताप नहीं जानते॥
Translated by: Banakara K Gowdappa
Telugu Translation ఈలోకపు ;óరులు నీలోకపు వీరులు;
సాలోక్య సామీప్య సారూప్య సాయుజ్యు లందరూ;
అజాత శత్రునకు సరియే? ముల్లోక విరతులు
సంగని శరణులు మువ్విధముల నెరుగరు.
Translated by: Dr. Badala Ramaiah
Marathi Translation
या लोकातील भित्रे, त्या लोकातील धीरवीर आहे.
सालोक्य, सामिप्य, सारुप्य, सायुज्य,
हे सर्व अजन्माच्या समान आहेत ?
तिन्ही लोकी व्यापलेले कूडलसंगाचे शरण त्रिविधज्ञानी आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶರಣರು ಈ ಲೋಕದ ಭೀತರೆಂದರೆ –ಈ ಲೋಕದಲ್ಲಿ ಅವರು ಅಂಜುಬುರುಕರೆಂದಲ್ಲ –ಈ ಲೋಕದ ಲೌಕಿಕಕ್ಕೆ ಹಿಮ್ಮೆಟ್ಟುವರೆಂದರ್ಥ. ಅವರು ಆ ಲೋಕದ ಕಲಿಗಳೆಂದರೆ ಜೀವಿತಾವಧಿಯಿಂದಾಚೆಗೆ ದೊರಯುವುದೆಂಬ ಸಾಲೋಕ್ಯಾದಿ ಪದವಿಗಳಿಗೆ ಅವರೆಂದಿಗೂ ನೂಕಿನುಗ್ಗದೆಯೂ ತಮ್ಮಲ್ಲಿ ತಾವೇ ಶಿವನಾಗಿರಬಲ್ಲವರೆಂದರ್ಥ. ಮನುಲೋಕದ ಇಂಥ ಗಣಂಗಳಿಗೆ ಶಿವಲೋಕದ ಗಣಂಗಳೂ ಸಮಬಾರರು.
ಶಿವಶರಣರು ಜನಿಸಿಯೂ ಅಜನಿತರು, ಬಳಸಿಯೂ ಬಳಗಾಗದವರು, ಗತಿಸಿಯೂ ಶಾಶ್ವತರು –ಈ ಉತ್ಪತ್ತಿ ಸ್ಥಿತಿ ಲಯಗಳಿಗೆ ತುತ್ತಾಗುವವರು ಕಾಮಿಗಳೇ ಹೊರತು ನಿಃಕಾಮಿಗಳಾದ ಶಿವಶರಣರಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು