ಶರಣನ ಮಾಹೇಶ್ವರಸ್ಥಲ - ಶರಣರು
ತಾಗುನಿರೋಧದ, ಆಗುಹೋಗನರಿಯದ
ಶರಣನ ಚರಿತ್ರವ ನೋಡಿ ನೋಡಿ ಬೆರಗಾದೆನಯ್ಯಾ,
ಕೂಡಲಸಂಗಯ್ಯನಲ್ಲಿ ತಾನೇ ಸುಯಿಧಾನಿಯಾಗಿ!
Transliteration Tāgu nirōdhada, āguhōganariyada
śaraṇana caritrava nōḍi beragādenayyā,
kūḍalasaṅgayyanalli tānē suyidhāniyāgi!
Manuscript
English Translation 2 Seeing, again and again, the lives
Of Śaraṇas who do not know
What can be touched and what if banned,
What comes and goes.
I'am wonder-struck, O Lord,
That I myself can live at peace
In Lord Kūḍala Saṅgama.
Translated by: L M A Menezes, S M Angadi
Hindi Translation मैं ऐसे शरण का चरित्र देख कर चकित हुआ
जो अस्पृश्यता का शुभाशुभ नहीं जानता ।
स्पुश्र्यास्पृश्य मैं स्वयं कूडलसंगमदेव में जागृत हूँ ॥
Translated by: Banakara K Gowdappa
Telugu Translation తాకేదేదో! తాకని దేదో! అయ్యేదేదో! కాని దేదో!
తెలియని శరణుని చరిత్ర చూచి చూచి వెలిగై తినయ్యా!
ఈ సంగనిలో తానే జాగరూకుడై యుండె గాన
Translated by: Dr. Badala Ramaiah
Marathi Translation
निस्पृह, विधी लिहितात
शरणांचे चरित्र पाहून चकित झालो देवा.
कूडलसंगमदेवामध्ये शरण समरस आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಾನವನೆಷ್ಟು ಜಿತೇಂದ್ರಿಯನೂ ಸಾಹಸಿಯೂ ಸಮಚಿತ್ತನೂ ಆಗಿರಬಲ್ಲನೆಂಬುದಕ್ಕೆ ಶಿವಶರಣನ ಜೀವನವೊಂದು ಮಾನದಂಡ.
ಸಂಪತ್ತುವಿಪತ್ತುಗಳಿಂದ ಅವನೆಂದಿಗೂ ವಿಚಲಿತನಾಗುವುದಿಲ್ಲ. ಮಾನಸಿಕ ಕ್ಷೋಭೆಗಳೊಂದರಿಂದಲೂ ಅವನು ಕ್ಷುಭಿತನಾಗುವುದಿಲ್ಲ -ಹಿರಣ್ಯಗರ್ಭದಲ್ಲಿ ಲಂಗರು ಹಾಕಿದವನವನು.
ಈ ಎಲ್ಲ ನೈತಿಕ ಮತ್ತು ಮಾನಸಿಕ ಶಕ್ತಿ ಶಿವಶರಣನಿಗೆಲ್ಲಿಂದ ಬಂತೆಂದರೆ ಅವರು ಸದಾ ಶಿವಾಭಿಮುಖ ಶಿವೋತ್ಕಂಠೆಯಲ್ಲೇ ಇರುವುದರಿಂದ. ಈ ದಿವ್ಯಜಾಗೃತಿಯ ಚಿನ್ನದ ಸುಗ್ಗಿ ಸುಮ್ಮನಾಗುವುದೆ ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು