ಎನಗೆ ಗುರುವಿನ ಪ್ರಸಾದ: ನಿನಗೆ ಚೆನ್ನನ ಪ್ರಸಾದ;
ಎನಗೆಯೂ ನಿನಗೆಯೂ ಸಮಯಾಚಾರ ಸರಿ:
ಕೂಡಲಸಂಗಮದೇವಾ, ನೀನೆನಗೆ ಚಿಕ್ಕ ತಮ್ಮ.
Transliteration Enage guruvina prasāda: Ninage cennana prasāda;
enageyū ninageyū samayācāra sari:
Kūḍalasaṅgamadēvā, nīnenage cikka tam'ma.
Manuscript
English Translation 2 The Guru's grace for me; for you
The grace of Cenna; for you and me
the faith and discipline the same;
O Kūḍala Saṅgama Lord,
My younger brother Thou!
Translated by: L M A Menezes, S M Angadi
Hindi Translation मेरे लिए गुरू का प्रसाद है,
तुम्हारे लिए चन्न का प्रसाद है,
मेरे लिए और तुम्हारे लिए समयाचार समान है;
कूडलसंगमदेव, तुम मेरे अनुज हो ॥
Translated by: Banakara K Gowdappa
Telugu Translation నాకు గురుని ప్రసాదము; నీకు చెన్నుని ప్రసాదము
నాకూ నీకూ సమయాచారము సరిపోయెనయ్యా;
సంగయ్య! నీవు నాకొక కుబ్జ తమ్ముడవు కదయ్యా!
Translated by: Dr. Badala Ramaiah
Marathi Translation
मला गुरुचा प्रसाद, तुम्हाला चन्नय्याचा प्रसाद,
मला आणि तुम्हाला समयाचार एक आहे.
कूडलसंगमदेवा, तुम्ही माझे लहान बंधू
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವನ ಭಕ್ತರಾದ ಬಸವಣ್ಣನವರು ಪರಂಪರೆಯ ಗುರುಗಳಲ್ಲಿ ಪ್ರಸಾದವನ್ನು ಸ್ವೀಕರಿಸಿದವರಾದರೆ –ಆ ಸಾಕ್ಷಾತ್ ಶಿವನು ಮಾದಾರ ಸಂಪ್ರದಾಯದ ಚೆನ್ನಯ್ಯನಲ್ಲಿ ಪ್ರಸಾದವನ್ನು ಸ್ವೀಕರಿಸಿದವನು. ಹೀಗೆನ್ನುತ್ತ ವೀರಶೈವದ ಸಾಂಪ್ರದಾಯಿಕ ಗುರುಗಳೂ ಮಾದಾರ ಚೆನ್ನಯ್ಯನ ಸಂಪ್ರದಾಯದವರೂ ಒಂದೆಂಬ ಸಮಯ ಸೌದಾರ್ಯ ಸಮನ್ವಯವನ್ನು ಈ ವಚನದಲ್ಲಿ ಕುರಿತಿರುವುದಲ್ಲದೆ -ಪ್ರವರ್ತಿತವಾದ ಆ ಚೆನ್ನಯ್ಯನ ಸಂಪ್ರದಾಯವನ್ನು “ಚಿಕ್ಕ ತಮ್ಮ” ಎನ್ನುತ್ತ ಅಭಿಮಾನಿಸುತ್ತಲೂ ಇರುವರು.
ಹೀಗಾಗಿ ವೀರಶೈವಧರ್ಮದ ಮೂಲಪ್ರವಾಹಕ್ಕೆ ಮಾದಾರ ಮುಂತಾದ ಹಲವು ಜನಾಂಗಗಳನ್ನು ಸೇರಿಸಿಕೊಂಡು –ಎಲ್ಲರೂ ಒಂದೇ ಧರ್ಮದವರೆಂಬಂತೆ ಪರಸ್ಪರ ನಡೆದುಕೊಳ್ಳಬೇಕೆಂದು ಬಸವಣ್ಣನವರು ಮಾಡಿದ ಪ್ರಯತ್ನವು ಖುದ್ದು ಆ ಬಸವಣ್ಣನವರಿಗಿಂತಲೂ ಪ್ರಾಚೀನವೆಂಬುದನ್ನಿಲ್ಲಿ ಗುರುತಿಸಬಹುದಾಗಿದೆ.
ವಿ : (1) ಬಸವಣ್ಣನವರು ಕಲ್ಯಾಣದಲ್ಲಿ ಸಂಬೋಳಿ ನಾಗಿದೇವನೆಂಬ ಅಸ್ಪೃಶ್ಯ ಶಿವಭಕ್ತನ ಮನೆಗೆ ಹೋಗಿ ಪ್ರಸಾದ ಸ್ವೀಕರಿಸಿ ಬರುತ್ತಿದ್ದುದನ್ನು ಇಲ್ಲಿ ನೆನೆಯಬೇಕು (ನೋಡಿ ಹರಿಹರನ ಬಸವರಾಜದೇವರ ರಗಳೆ, ಸ್ಥಳ 10). (2) ಪ್ರಾಚೀನ ವೀರಶೈವ ಮತ್ತು ಬಸವಪೂರ್ವದ ಶರಣರ ಶಿವಧರ್ಮ –ಅಲ್ಲಿ ಮಾದರ ಚೆನ್ನಯ್ಯ ಮುಂತಾದ ದಲಿತ ಶರಣರ ಪಾತ್ರ –ಇವನ್ನು ಕುರಿತಂತೆ ಹೆಚ್ಚಿಗೆ ತಿಳಿಯಲು ಅಖಿಲಭಾರತ ಶರಣ ಸಾಹಿತ್ಯದ 3ನೇ ಸಮ್ಮೇಳನ(ಹೊಸಪೇಟೆ 13-7-1990)ದಲ್ಲಿ ನಾನು ಮಾಡಿದ ಅಧ್ಯಕ್ಷ ಭಾಷಣವನ್ನು ಪರಾಮರ್ಶಿಸಿರಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು