•  
  •  
  •  
  •  
Index   ವಚನ - 908    Search  
 
ಶರಣನ ಪ್ರಸಾದಿಸ್ಥಲ - ಶರಣಸತಿ-ಲಿಂಗಪತಿ
ಎಲ್ಲರ ಗಂಡರೂ ಬೇಂಟೆಗೆ ಹೋದರು: ನೀನೇಕೆ ಹೋಗೆ, ಎಲೆ ಗಂಡನೇ? ಸತ್ತುದ ತಾರದಿರು, ಕೈಮುಟ್ಟಿ ಕೊಲ್ಲದಿರು, ಅಡಗಿಲ್ಲದೆ ಮನೆಗೆ ಬಾರದಿರು! ದೇವರ ಧರ್ಮದೊಳೊಂದು ಬೇಂಟೆ ದೊರೆಕೊಂಡರೆ ಕೂಡಲಸಂಗಮದೇವಂಗರ್ಪಿತವ ಮಾಡುವೆ, ಎಲೆ ಗಂಡನೇ!
Transliteration Ellara gaṇḍaru bēṇṭeya hōdaru: Nīnēke hōge, ele gaṇḍanē? Sattuda tāradiru, kai muṭṭi kolladiru, aḍagillade manege bāradiru! Dēvara dharmadalondu bēṇṭe dorekoṇḍare kūḍalasaṅgamadēvaṅgarpitava māḍuve, ele gaṇḍanē!
Manuscript
English Translation 2 Every woman's husband went out ahunting: Why didnt you go, my lord? Do not bring home what's dead, Slay not by touching with your hand, But come not home empty of game! When grace is found in duty to the gods, I will perform my worship, O Lord mine! Translated by: L M A Menezes, S M Angadi
Hindi Translation सब के पति मृगया खेलने गये, तुम क्यों नहीं जाते, मेरे पति? मृतक को मत लाओ, हाथ से वध मत करो बिना माँस घर मत लौटो। दैव कृपा से एक शिकार मिले, तो हे पति, उसे कूडलसंगमदेव को अर्पित करूंगी॥ Translated by: Banakara K Gowdappa
Telugu Translation అందరి మగలూ వేటకు పోయిరి; నీవేటికి పోవో మగరాయా? చచ్చినది తేబోకుమా; చేయె త్తి చంపకుమా? మాంసము లేకనే మఱి యింటికి రాకుమా? స్వామి దయనొక వేట దొరికిన సంగయ్యకే అర్పింతుమో ప్రియా! Translated by: Dr. Badala Ramaiah
Marathi Translation सर्वांचे पती शिकार करण्यास गेले तुम्ही का जात नाही पतीदेवा ? मेलेले आणू नका, हाताने मारु नका. रिकाम्या हाताने परत येऊ नका. देवकृपेने शिकार हाती लागली तर कूडलसंगमदेवाला अर्पित करतो हे पतीदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶೌರ್ಯದ ಒಂದು ಲಕ್ಷಣವೆಂದರೆ ಬೇಟೆಯಾಡುವುದು. ದಟ್ಟವಾದ ಅರಣ್ಯವನ್ನು ಪ್ರವೇಶಿಸಿ -ಅಲ್ಲಿ ಮೊಲವನ್ನೋ ಜಿಂಕೆಯನ್ನೋ, ಎಲ್ಲಕ್ಕಿಂತ ಹೆಚ್ಚಿನದಾಗಿ ಕಾಡುಹಂದಿಯನ್ನೋ ಕೈಯಾರ(ಬಾಣಸಂಧಾನ ಮಾಡಿ) ಕೊಂದು ತರುವುದು. ತಂದು ದೇವರಿಗರ್ಪಿಸುವುದು, ಪ್ರಸಾದವೆಂದು ಸವಿದು ಆನಂದಿಸುವುದು. ಇದೆಲ್ಲಾ ಲೌಕಿಕ ಬೇಟೆಯೊಂದರ ವಿವರವಾಯಿತು. ಈ ಲೌಕಿಕವಾದ ಬೇಟೆಯು ವಿವರದಲ್ಲೇ -ಸಾಧಕನಾದ ಜೀವನು ಈ ಸಂಸಾರಾರಣ್ಯವನ್ನು ಪ್ರವೇಶಿಸಿ ದಿವ್ಯಜೀವನ ನಡೆಸುವ ಒಂದು ಬೆಡಗೂ ಅಡಗಿದೆ. ಅಂದರೆ ಶರಣಸತಿಯ ತನ್ನ ಚಿತ್ತವಲ್ಲಭನನ್ನು ದಿವ್ಯವಾದೊಂದು ಮೃಗಯಾಸಾಹಸಕ್ಕೆ ತೊಡಗೆಂದು ಪ್ರೇರಿಸುವ ಧಾಟಿಯಿದೆ ಈ ವಚನದಲ್ಲಿ. ಅದರ ಪ್ರಕಾರ ಪ್ರತ್ಯೇಕವಾಗಿ ನಡೆದು ತಲುಪಬೇಕಾದ ಕಾಡೊಂದಿಲ್ಲ. ಜೀವನನ್ನು ಅವನ ಪರಿಧಿಯ ಎಲ್ಲ ಬಿಂದುವಿಂದ ಆವರಿಸಿರುವ ಸಂಸಾರವೇ ಒಂದು ಕಾಡಾಗಿದೆ. ಅಲ್ಲಿ ಕೈಯೆತ್ತಿ ಕೊಲ್ಲಬೇಕಾದುದೇನೂ ಇಲ್ಲ -ಬದಲಾಗಿ ಪರಿಷ್ಕರಿಸಿಕೊಳ್ಳಬೇಕಾದ ಈ ದೇಹವೇ ಆಡಬೇಕಾದ (ದಿವ್ಯ) ಬೇಟೆಯ ಮಿಕವಾಗಿದೆ. ಇಂಥ ದೇಹವನ್ನು ಮದ್ಯಮೈಥುನಾದಿ ಪಂಚಮಕಾರಗಳಿಂದ ನಿಶ್ಚೇತನಗೊಳಿಸಬಾರದು, ವ್ರತವೆಂದು ಉಪವಾಸವೆಂದು ಕ್ರೂರವೆಂದು ದಂಡಿಸಿ ಕೊಲ್ಲಲೂಬಾರದು. ಈ ದೇಹ ಬೆರಸಿಯೇ ಈ ಲೋಕದಲ್ಲಿ ಶುಭ ಪರಂಪರೆಗಳನ್ನು ಕಾಣಬೇಕಾಗಿದೆ. ಎಂಬ ಈ ಅರ್ಥದಲ್ಲಿಯೇ -ಸತ್ತುದ ತಾರದಿರು, ಕೈಮುಟ್ಟಿ ಕೊಲ್ಲದಿರು, ಅಡಗಿಲ್ಲದೆ ಮನೆಗೆ ಬಾರದಿರು ಎಂದಿರುವುದು ಈ ವಚನದಲ್ಲಿ. ಹೀಗೆ ದೇವರ ಕೃಪೆಯಿಂದ ಹಸನುಗೊಂಡ ದೇಹ ನಮ್ಮದಾದರೆ –ಆ ದೇಹ ದೇವರಿಗರ್ಪಿತವಾಗಿ –ಆತ್ಮಕ್ಕೂ ರುಚಿಕರವೆನಿಸುವ ಪರಿಕರವಾಗುವುದು. ವಿ : ಎಲ್ಲರ ಗಂಡರೆಂದರೆ ವಿವಿಧ ಧಾರ್ಮಿಕ ಪಂಥದ ಸಾಧಕರೆಂದರ್ಥ. ಅಥವಾ ಈ ವಚನದ ಒಗಟಿನ ಸೊಗಸಿನ ಸಾರವೆಲ್ಲ ಅಡಗಿರುವುದು –(1) ಸತ್ತುದ ತಾರದಿರು (2) ಕೈಮುಟ್ಟಿ ಕೊಲ್ಲದಿರು. (3) ಅಡಗಿಲ್ಲದೆ ಮನೆಗೆ ಬಾರದಿರು ಎಂಬ ಮೂರು ಮಾತಿನಲ್ಲಿ. ಈ ಮೂರು ಮಾತು ದೇಹವನ್ನೇ ಕುರಿತಿರುವುದೆಂದು ಮರಳಿ ಹೇಳಬೇಕಾಗಿಲ್ಲ. ಈ ದೇಹವನ್ನು ಶರಣಧರ್ಮದನುಸಾರ ಹೇಗೆ ನೋಡಿಕೊಳ್ಳಬೇಕೆಂಬುದೇ ಈ ವಚನದ ಮುಖ್ಯ ವಸ್ತು : (1) ಮದ್ಯಮೈಧುನಾದಿಗಳಿಂದ ಈ ದೇಹವನ್ನು ಸ್ವಚ್ಚಂದಗೊಳಿಸಬಾರದು. (2) ಉಪವಾಸಾದಿ ವ್ರತಗಳಿಂದ ಸಾಯಿಸಲೂಬಾರದು. (3)ಈ ದೇಹ ಬೆರಸಿಯೇ ಮುಕ್ತಿ ಸುಖವನ್ನು ಕಾಣಬೇಕು –ಈ ಜೀವನ್ಮುಕ್ತಿಯೇ ವಿದೇಹಮುಕ್ತಿಗಿಂತಲೂ ಮಹನೀಯವಾದ್ದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು