•  
  •  
  •  
  •  
Index   ವಚನ - 909    Search  
 
ಶರಣನ ಪ್ರಾಣಲಿಂಗಿಸ್ಥಲ - ಮಾಯೆ
ಕಣ್ಣೊಳಗೆ ಕಣ್ಣಿದ್ದೂ ಕಾಣಲೇಕರಿಯರಯ್ಯಾ? ಕಿವಿಯೊಳಗೆ ಕಿವಿಯಿದ್ದೂ ಕೇಳಲೇಕರಿಯರಯ್ಯಾ? ಘ್ರಾಣದೊಳಗೆ ಘ್ರಾಣವಿದ್ದೂ ವಾಸಿಸಲೇಕರಿಯರಯ್ಯಾ? ಜಿಹ್ವೆಯೊಳಗೆ ಜಿಹ್ವೆಯಿದ್ದೂ ರುಚಿಸಲೇಕರಿಯರಯ್ಯಾ? ಸ್ಪರ್ಶನದೊಳಗೆ ಸ್ಪರ್ಶನವಿದ್ದೂ ಮುಟ್ಟಲೇಕರಿಯರಯ್ಯಾ? ಪ್ರಾಣದೊಳಗೆ ಪ್ರಾಣವಿದ್ದೂ ನೆನೆಯಲೇಕರಿಯರಯ್ಯಾ? ಕಾಯದೊಳಗೆ ಕಾಯವಿದ್ದೂ ಬಿಡದು, ಬೇರಾಗದು! ನೀನಿಕ್ಕಿದ ಅಣಕದ ಭೇದವ ಭೇದಿಸಬಾರದಯ್ಯಾ! ಕೂಡಲಸಂಗಮದೇವಾ.
Transliteration Kaṇṇoḷage kaṇṇiddū kāṇalēkariyarayyā? Kiviyoḷage kiviyiddū kēḷalēkariyarayyā? Ghrāṇadoḷage ghrāṇaviddū vāsisalēkariyarayyā? Jihveyoḷage jihveyiddū rucisalēkariyarayyā? Sparśanadoḷage sparśanaviddū muṭṭalēkariyarayyā? Prāṇadoḷage prāṇaviddu neneyalēkariyarayyā? Kāyadoḷage kāyaviddu biḍadu, bērāgadu! Nīnikkida aṇakada bhēdava bhēdisabāradayyā! Kūḍalasaṅgamadēvā.
Manuscript
English Translation 2 Although there was the eyesight in the eye, Why couldn't they see, O Lord? Though hearing was within the ear, Why couldn't they hear, O Lord? Though smell was in the nose, Why couldn't they smell, O Lord? Though taste was on the tongue, Why couldn't they taste, O Lord? Though touch was in the limbs, Why couldn't they thouch, O Lord? Although the soul was in their life, Why couldn't they love, O Lord? Since in the body corporal traits persist, It cannot leave. One cannot solve the mystery Of the riddle Thou hast set, O Kūḍala Saṅgama Lord! Translated by: L M A Menezes, S M Angadi
Hindi Translation नेत्र में दर्शन शक्ति के रहते वे देखना क्यों नहीं जानते? श्रवण में श्रवण-शक्ति के रहत वे सुनना क्यों नहीं जानते? घ्राणशक्ति के रहते वे सूँघना क्यों नहीं जानते? स्वादशक्ति जिह्वा में रहते वे स्वाद लेना क्यों नहीं जानते? त्वचा में स्पर्श-ज्ञान-के रहते वे स्पर्श करना क्यों नहीं जानते? काया में कायगुण के रहते वे नहीं तजते, पृथक नहीं होते । कूडलसंगमदेव, पहेली सुलझाना कठिन है ॥ Translated by: Banakara K Gowdappa
Telugu Translation కనులలో కనులుండియూ కను టేటికో తెలియరయ్యా! చెవులలో చెవులుండియూ విను టేటికో తెలియరయ్యా! ముక్కున ముక్కు కల్గియూ వాసన జూచు టేటికో తెలియరయ్యా నాల్కనాల్కలో నుండియు రుచి చూచు టేటికో తెలియరయ్యా స్పర్శలో స్పర్శగల్గియు ముట్టు టేటికో తెలియరయ్యా ప్రాణమున ప్రాణముండియూ; స్మరించు టేటికో తెలియరయ్యా కాయమున కాయముండియూ; విడదు వేఱుకాదు! నీజేయు పరిహాసభేదము భేదింపరాదయ్యా సంగయ్యా! Translated by: Dr. Badala Ramaiah
Marathi Translation डोळ्यात डोळे असताना पाहणे का नाही देवा ? कानात कान असताना ऐकत का नाही देवा ? नाकात नाक असताना वास घेत का नाही देवा ? जीभेत जीभ असताना रुची का घेत नाही देवा ? त्वचा असताना स्पर्शीत का नाही देवा? प्राणात प्राण असताना स्मरण का करीत नाही देवा ? देहात देह असताना अलग का होत नाही देवा? कूडलसंगमदेवा, तुमच्या कोड्याचे भेद जाणत नाही. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಇಂದ್ರಿಯ ಇಂದ್ರಿಯದಲ್ಲಿರುವ ಇಂದ್ರಿಯ ವಿಷಯ ಪ್ರಸಾದ 1 ಘ್ರಾಣ ಆಚಾರಲಿಂಗ ಗಂಧ ಗಂಧಪ್ರಸಾದ 2 ಜಿಹ್ವೆ ಗುರುಲಿಂಗ ರಸ ರಸಪ್ರಸಾದ 3 ಚಕ್ಷು ಶಿವಲಿಂಗ ರೂಪ ರೂಪಪ್ರಸಾದ 4 ಸ್ಪರ್ಶ(ತ್ವಕ್) ಜಂಗಮಲಿಂಗ ಸ್ಪರ್ಶನ ಸ್ಪರ್ಶಪ್ರಸಾದ 5 ಶ್ರೋತ್ರ ಪ್ರಸಾದಲಿಂಗ ಶಬ್ದ ಶಬ್ದಪ್ರಸಾದ 6 ಪ್ರಾಣ(ಹೃದಯ) ಪ್ರಾಣಲಿಂಗ ಪರಿಣಾಮ ಪರಿಣಾಮಪ್ರಸಾದ 7 ದೇಹ ಇಷ್ಟಲಿಂಗ (ಜೀವನಾನುಭವ) (ಹರ್ಷಪ್ರಸಾದ) ಬಹಿರಂಗದಿಂದ ಸ್ಪಂದಿಸಿದ ಎಲ್ಲ ವಿಷಯಗಳೂ ಅಲ್ಲಲ್ಲಿಗೆ ನೆಲಸಿರುವ ಲಿಂಗಗಳಿಗೆ ಅರ್ಪಿತವಾಗಿ ಆ ಮೂಲಕ ಪ್ರಸಾದವಾಗಿ ಶರಣನಿಂದ ಇಂದ್ರಿಯಗಳ ಮೂಲಕ ಆಸ್ವಾದಿಸಲ್ಪಡುವವೆಂಬುದನ್ನು ಈ ಮೇಲಣ ವಿನ್ಯಾಸದಿಂದ ಮನಗಾಣಬೇಕು. ಪಂಚೇಂದ್ರಿಯಗಳು ಆತ್ಮ(ಲಿಂಗ)ದ ಉಪಕರಣಗಳೇ ಹೊರತು ಅವುಗಳಲ್ಲಿ ಯಾವುದೊಂದಾಗಲಿ, ಎಲ್ಲವೂ ಸೇರಿಯಾಗಲಿ ಆತ್ಮ(ಲಿಂಗ)ವಾಗುವುದಿಲ್ಲ. ಮತ್ತು ಆ ಆತ್ಮ(ಲಿಂಗ)ದ ಸಂಪರ್ಕವಿದಿದ್ದರೆ ಆ ಪಂಚೇಂದ್ರಿಯಗಳೆಲ್ಲ ನಿಷ್ಕ್ರಿಯವಾಗುವಷ್ಟೇ ಅಲ್ಲ ಜಡವಾಗುವವು ಕೂಡ. ಶರಣಧರ್ಮದ ಪ್ರಕಾರ ಪಂಚೇಂದ್ರಿಯಗಳಲ್ಲಿ ಅಚಾರಾದಿ ಪಂಚಲಿಂಗಗಳೂ ಪ್ರಾಣದಲ್ಲಿ ಪ್ರಾಣಲಿಂಗವೂ ದೇಹದಲ್ಲಿ ಇಷ್ಟಲಿಂಗವೂ ಪ್ರತಿಷ್ಠಿತವಾಗಿರುವವು. ಜೀವನು ಹೀಗೆ ತನ್ನ ಇಂದ್ರಿಯಗಳಲ್ಲಿ ಪ್ರಾಣದಲ್ಲಿ ದೇಹದಲ್ಲಿ ಅಡಗಿರುವ ಲಿಂಗವನ್ನು ತಿಳಿಯುವುದು ಸುಲಭವಲ್ಲ. ಈ ದುರ್ಭೇದ್ಯತೆಯನ್ನು ಕುರಿತು ಬಸವಣ್ಣನವರು –“ಕೂಡಲ ಸಂಗಮದೇವ ನೀನಿಕ್ಕಿದ ಅಣಕದ ಭೇದವ ಭೇದಿಸ ಬಾರದಯ್ಯ” ಎಂದು ಸೋಜಿಗಪಡುತ್ತಿರುವನು. ಘ್ರಾಣಾದಿ ಇಂದ್ರಿಯಗಳಲ್ಲಿ ಆಚಾರಾದಿಲಿಂಗವಿದೆಯೆಂದು ತಿಳಿದು ಆ ಪ್ರಜ್ಞೆಯಿಂದ ಗಂಧಾದಿವಿಷಯಗಳನ್ನು ನಾವು ಸ್ವೀಕರಿಸಲು ಉಪಕ್ರಮಿಸಿದೆವೋ –ಆಗ ಆ ವಿಷಯಗಳೆಲ್ಲಾ ಪ್ರಸಾದವಾಗಿ –ಈ ಮರ್ತ್ಯವೆಲ್ಲಾ ಅಮೃತ ಸಮರಸವಾಗುವುದೆಂಬುದು ಈ ವಚನದ ತಾತ್ಪರ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು