•  
  •  
  •  
  •  
Index   ವಚನ - 910    Search  
 
ಶರಣನ ಪ್ರಾಣಲಿಂಗಿಸ್ಥಲ - ಅರಿವು
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು, ಮತ್ತೊಂದಕ್ಕಿಂಬುಗೊಡಲೀಯದಯ್ಯಾ. ಕೂಡಲಸಂಗಮದೇವನ ಅರಿವು ಅನುಪಮವಾಗಲೊಡನೆ ಬೆವಹಾರದೊಳಗಿರಲೀಯದಯ್ಯಾ.
Transliteration Graha bandu āvarisaloḍane tanna maresuvudu, mattondakkimbugoḍalīyadayyā. Kūḍalasaṅgamadēvana arivu anupamavāgaloḍane bevahāradoḷagiralīyadayyā.
Manuscript
English Translation 2 When a ghost comes and wraps you round, He makes you mindless of yourself: He leaves no room for any other thing. When Lord Kūḍala Saṅgama's peerless knowledge dawns, The commerce of the world is at an end! Translated by: L M A Menezes, S M Angadi
Hindi Translation ग्रह के आकर घेर लेने पर वह तुम्हें विस्मृत करता है, किसी और को आश्रय देने नहीं देता कूडलसंगमदेव का ज्ञान अनुपम होते ही, वह लौकिक व्यवहार में रहने नहीं देता॥ Translated by: Banakara K Gowdappa
Telugu Translation గ్రహమువచ్చి ఆవేశింపగనే, తన్నుదా మఱపించు; వేరొక దానిని దరికి చేర నీదయ్యా! సంగమ దేవుని జ్ఞానము అనుపమమైనంత వ్యవహారమున నిల్వ నీదయ్యా! Translated by: Dr. Badala Ramaiah
Marathi Translation ग्रह (भूत) अंगात संचारल्यावर शुध्द रहात नाही. आणखी दुसरे कोणी तेथे रहात नाही देवा. कूडलसंगमदेवाचे दिव्यज्ञान होता, सांसारिक व्यवहार नष्ट होतात देवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಒಬ್ಬನಿಗೆ ದೆವ್ವ ಹಿಡಿದರೆ ಅದು ಅವನ ಸ್ವಂತ ಮಾತುಕತೆ ವರ್ತನೆಯನ್ನೆಲ್ಲ ಮರೆಸಿ ಅವನನ್ನು ಅನಾಮತ್ತಾಗಿ ತನ್ನಂತೆ ಆಡಿಸುವುದು. ಹಾಗೆಯೇ ಶರಣನಿಗೆ ಶಿವಜ್ಞಾನ ಉದಯಿಸಿತೆಂದರೆ ಅದು ಅವನನ್ನು ನಿತ್ಯವ್ಯವಹಾರದಲ್ಲಿರಗೊಡದು. ಅಂಥ ಶರಣನು ಸದಾ ಶಿವನಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಶಿವಾಚರಣೆಯಲ್ಲಿ ತೊಡಗಿ -ಹಾಗೆ ತೊಡಗಿರುವುದನ್ನೂ ಮರೆತಿರುವನು. ಆಗ ಅವನಲ್ಲಿ ಅವನದೆಂಬುದೇನೂ ಇಲ್ಲದೆ ಎಲ್ಲವೂ ಶಿವಮಯವಾಗಿರುವುದು. ಶಿವಜ್ಞಾನವೆಂಬುದು ಕೇವಲ ಅಥೈಸುವ ತಿಳಿವಳಿಕೆಯ ಕೆಳಮಟ್ಟದಲ್ಲಿರುವುದಾಗದೆ –ಅನುಭಾವದಲ್ಲಿ, ಅಲ್ಲಿಂದ ತುಳುಕಿ ಆಚರಣೆಯಲ್ಲಿ ಸಾಂದ್ರವಾಗಿ ನುಗ್ಗಿ ಹರಿಯುವಂಥದಾಗಿರಬೇಕೆಂದು ಬಸವಣ್ಣನವರು ಅಭಿಪ್ರಾಯಪಡುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು