ಶರಣನ ಪ್ರಾಣಲಿಂಗಿಸ್ಥಲ - ಕಪಟತನ
ʼಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟರೆ,
ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ:ʼ
ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ,
ಅಯ್ಯಾ, ಭೂತ ಕೆಣಕಿದರಿಲ್ಲ, ಮಾತು ಮುಚ್ಚಿದರಿಲ್ಲ:
ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ.
Transliteration `Bhūtikana sīreya sātvika nere uṭṭare,
bhūika sātvikanāda, sātvika bhūikanāda:ʼ
ī mātu biddu nōḍā, rājabīdiyalli,
ayyā, bhūta keṇakidarilla, mātu muccidarilla:
Ōtu kūḍuva anuva, kūḍalasaṅgamadēva tāne balla.
Manuscript
English Translation 2 If a good man should wear
The silken cloth of one possessed,
The good man comes to be possessed.
The one possessed returns to health:
Look Sir, that word has dropped
Upon the royal road:
If you should touch it as a ghost,
It is not there;
If you should touch it as a word,
It is not there!
Lord Kūḍala Saṅgama only knows
The way of unity in love.
Translated by: L M A Menezes, S M Angadi
Hindi Translation भूतग्रस्त का वस्त्र सात्विक के धारण करने पर
भूतग्रस्त सात्विक बना और सात्विक भूतग्रस्त।
देखो, यह बात राजपथ पर फैल गई
छेडने पर न भूत है; स्पर्श करने पर न बात;
प्रेम-मिलन की रीति कूडलसंगमदेव ही जानते हैं॥
Translated by: Banakara K Gowdappa
Telugu Translation భూత గ్రస్థుని వస్త్రము సాత్వికుడు గట్ట!
భూత గ్రస్థుడు సాత్వికుడయ్యె! సాత్వికుడు
భూత గ్రస్థుడయ్యె నిది; రాచవీధిలో బడెనయ్యా!
చెనకిన భూతములేదు; దాచగ మాటలేదు; వలచి కూడిన
సుఖ మా సంగమ దేవుడు తానే తెలియునయ్యా!
Translated by: Dr. Badala Ramaiah
Marathi Translation
भूतग्रस्ताचे वस्त्र सात्त्विकाने नेसले तर भूतग्रस्त सात्त्विक झाला.
सात्विक भूतग्रस्त झाला. ही चर्चा होऊ लागली पहा राजरस्त्यावर
देवा, तेथे भूतही नाही, त्या बोलण्याला अर्थ नाही.
प्रेम मिलनाचे मर्म कूडलसंगमदेवच जाणतात.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭೂತಿಕ(ದೆವ್ವಹಿಡಿದವ)ನ ಬಟ್ಟೆಯನ್ನು ಸಾತ್ವಿಕನೊಬ್ಬನು ಉಟ್ಟನೆಂದರೆ –ಆ ಸಾತ್ವಿಕನಿಗೆ ಆ ದೆವ್ವ ಹಿಡಿದು –ದೆವ್ವ ಹಿಡಿದಿದ್ದವನು ಸ್ವಸ್ಥವಾಗುವನು. ದೆವ್ವವಿರಲಿ ದೆವ್ವಹಿಡಿದವನ ಬಟ್ಟೆಯೂ ಅದೆಷ್ಟು ಪ್ರಭಾವಶಾಲಿ ? ಹೀಗೆಂದ ಮೇಲೆ ದೆವ್ವವನ್ನೇ ಕೆಣಕಿದರೆ ಬಿಟ್ಟೀತೆ ? “ಕೆಣಕಿದ ದೆವ್ವ ಹಿಡಿಯದೇ ಬಿಡದು, ಆಡಿದ ಮಾತು ಹಬ್ಬದೇ ಬಿಡದು” ಎಂಬ ಗಾದೆಯ ಮಾತು ಪ್ರಸಿದ್ಧವೇ ಇದೆಯಲ್ಲಾ !
ಗುರುಕೃಪೆಯಿಂದ ಒಮ್ಮೆ ಶಿವದೆವ್ವ ಹಿಡಿಯಿತೆಂದರೆ ಆ ಶರಣನೆಂದಿಗೂ ಮರಳಿ ನರಮಾನವನಾಗುವುದಿಲ್ಲ. ಶಿವನನ್ನು ಭಕ್ತನಾಗಲಿ, ಭಕ್ತನನ್ನು ಶಿವನಾಗಲಿ ಪ್ರೀತಿಸಿ ಹಿಡಿಯುವುದೆಂದರೆ ಹೀಗೆ –ಅದೆಂದಿಗೂ ಬಿಡದ ಬೆಸುಗೆ.
ವಿ: ಭೂತಿಕನೆಂದರೆ ಶಿವಸ್ವರೂಪಿಯಾದ ಅಥವಾ ಶಿವನೆಂಬ ಭೂತ ಹಿಡಿದ ಗುರುವೆಂದೂ ಅರ್ಥಮಾಡಬಹುದು. ಆ ಗುರು ಶಿಷ್ಯನಿಗೆ ಅನುಗ್ರಹಿಸುವಾಗ ಒಂದು ಅಂಗವಸ್ತ್ರವನ್ನು ಕೊಡುವ ಸಂಪ್ರದಾಯವಿದ್ದಿರಬೇಕು (ಬಸವಣ್ಣನವರ ಕಾಲಕ್ಕೆ). ಅದನ್ನು ಉಟ್ಟ ಶಿಷ್ಯನಿಗೆ ಶಿವನು ಮೈಮೇಲೆ ಬಂದಂತೆಯೇ ಅಂದಿನಿಂದ ಅವನ ಅಂಗವೆಲ್ಲಾ ಲಿಂಗವಾಗಿ ಅಂತರಂಗವೆಲ್ಲಾ ಶಿವಚಿಂತೆಯಾಗುವುದು. ಶಿಷ್ಯನಲ್ಲಿ ಈ ವಿಧವಾದೊಂದು ಶಿವಸಂಕ್ರಾತಿಯನ್ನು ತಂದ ಗುರು ಧನ್ಯ. ಗುರುವಿನ ಮಹತ್ತು ಶಿಷ್ಯನಲ್ಲಿ ರುಜುವಾತಾಗುವುದೆಂಬುದು ಪ್ರಸಿದ್ಧವೇ ಇದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು