•  
  •  
  •  
  •  
Index   ವಚನ - 912    Search  
 
ಶರಣನ ಐಕ್ಯಸ್ಥಲ - ಆತ್ಮಶುದ್ಧಿ
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ ! ಅಂಗವಿದ್ಯೆಯನೊಲ್ಲ; ಕಣ್ಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ; ಕೈಯ ತೊಳೆದಲ್ಲದೆ ಮುಟ್ಟಲೀಯ; ಕಾಲ ತೊಳೆದಲ್ಲದೆ ಹೊದ್ದಲೀಯ! ಇಂತೀ ಸರ್ವಾಂಗ ತಲೆದೊಳೆದ ಕಾರಣ, ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ!
Transliteration Maneya gaṇḍana manevārteyanēna hēḷenavvā! Aṅgavidyeyanolla; kaṇgaḷoḷagaṇa kasava kaḷedallade nōḍalīya; kaiya toḷedallade muṭṭalīya; kāla toḷedallade hoddalīya! Intī sarvāṅga taledoḷada kāraṇa, kūḍalasaṅgamadēvanenna kūḍikoṇḍanavvā!
Manuscript
English Translation 2 Mother, what tidings shall I tell Of my household lord! The cunning of the body he abhors; Unless I pick the foulness in my eyes, He will not let me see him; unless I wash My hand, he will not let me touch; Unless I wash my feet, He will not sleep with me! Because I washed myself All over, Lord Kūḍala Saṅgama Has taken me to His bed! Translated by: L M A Menezes, S M Angadi
Hindi Translation माँ, अपने पति की घरेलू बात क्या कहूँ? अंग-चेष्टाएँ उन्हें अभीष्ट नहीं; दृष्टि-दोष दूर न करूँ, तो देखने नहीं देंगे; हाथ न धोऊँ, तो स्पर्श करने नहीं देंगे; पैर न धोऊँ, तो मिलने नहीं देंगे। माँ, यों सर्वांग धो लेने के कारण कूडलसंगमदेव मुझसे आ मिले ॥ Translated by: Banakara K Gowdappa
Telugu Translation ఇంటి స్వామిని; యింటిసుద్ది నే మందునమ్మా? అంగ విద్యనొల్లడు; కక్షాలకుల పుసి తీక చూడనీడు కడగకనే చేతిని ముట్టనీడు; కాలు కడగకుండ కప్పనీడు ఇట్లే సర్వాంగముల కడగిన కతమున స్వామి నను కూడెనమ్మా! Translated by: Dr. Badala Ramaiah
Marathi Translation घरातील पतीच्या घराचे वर्णन काय सांगू सखी. देह शृंगार त्याला आवडत नाही. डोळ्यातील कचरा दूर केल्या शिवाय पाहू देत नाही. हात निर्मळ केल्याविना स्पर्श करु देत नाही. पाय निर्मळ केल्याविना जवळ झोपू देत नाही. अशाप्रकारे सर्वांग शुध्द केल्यावर, कूडलसंगमदेव माझ्यात सामावला सखी. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ (ಅಂತರಂಗದ)ಗಂಡನಾದ ಶಿವನ ಮನವಾರ್ತೆಯೇ ವಿಚಿತ್ರ–ಅವನನ್ನು ಶರಣಸತಿ ಕಣ್ಣಿಂದ ನೋಡುವುದಾಗಲಿ, ಕೈಯಿಂದ ಮುಟ್ಟುವುದಾಗಲಿ, ಕಾಲಿಂದ ತೊಡರಿಕೊಳ್ಳುವುದಾಗಲಿ-ಯಥಾಸ್ಥಿತಿಯಲ್ಲಿ ಸಾಧ್ಯವಿಲ್ಲ. ದೈಹಿಕವಾದ ವೈಯಾರ ಒಂದನ್ನೂ ಅವನೊಲ್ಲ. ದೃಷ್ಟಿ ನಿರ್ಮಲವಾಗಿದ್ದರೆ ಮಾತ್ರ ಅವನು ಕಾಣಿಸಿಕೊಳ್ಳುತ್ತಾನೆ, ಚಿತ್ತ ಶುದ್ಧವಾಗಿದ್ದರೆ ಮಾತ್ರ ಗ್ರಹಿಕೆಗೆ ಬರುತ್ತಾನೆ. ಆಚಾರ ಶುದ್ಧವಾಗಿದ್ದರೆ ಮಾತ್ರ ಒಳಗೊಳ್ಳುತ್ತಾನೆ. ಹೀಗೆನ್ನುತ್ತ ಅಂತರಂಗದ ಶುದ್ಧಿಯನ್ನು ಸಾಧಿಸಿದೆನಾಗಿ ನನ್ನನ್ನು ಶಿವನು ಸ್ವೀಕರಿಸಿದನೆಂದು -ನಾಯಕಿಯು ನಾಯಕನನ್ನು ಕೂಡಲು ಪಟ್ಟ ವಿಚಿತ್ರ ಶ್ರಮಸಾಧನೆಯನ್ನೆಲ್ಲ ಸಖಿಯೊಡನೆ ತೋಡಿಕೊಂಡು ಸಮಾಧಾನಪಟ್ಟೊಂದು ಪ್ರಕಾರದಲ್ಲಿ ಬಸವಣ್ಣನವರು ತಮಗಾದ ಶಿವಸಂಗಮದ ಸಾಹಸಮಯ ವಿಶಿಷ್ಟ ಪ್ರಸಂಗವನ್ನು ಆತ್ಮೀಯರಲ್ಲಿ ನಿವೇದಿಸಿಕೊಳ್ಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು