•  
  •  
  •  
  •  
Index   ವಚನ - 914    Search  
 
ಶರಣನ ಐಕ್ಯಸ್ಥಲ - ಪರಿತಾಪ
ಸತ್ಯವಿದೆ, ಸಮಾಧಾನವಿದೆ; ಮನಕ್ಕೆ ಬಾರದಿದೇನಯ್ಯಾ? ಸರ್ವಸನುಮತವೆಂಬ ಸುಖವಿದೆ; ಮನಕ್ಕೆ ಸೋಂಕದಿದೇನಯ್ಯಾ? ಆನೀನೆಂಬುದೊಂದು ಘನವಿದೆ, ಕೂಡಲಸಂಗಮದೇವಾ, ಭ್ರಮೆಯೋ?
Transliteration Satyavide, samādhānavide; manakke bāradēnayyā? Sarvasanumatavemba sukhavide; manakke sōṅkadidenayyā? Ānīnembudondu ghanavide, kūḍalasaṅgamadēvā, bhrameyō?
Manuscript
Music Courtesy:
English Translation 2 There's truth, there is content: what thing is this That will not come unto the heart? There's joy that pleases all around: What thing is this that will not touch the heart? This greatneses that is you, O Kūḍala Saṅgama Lord, Is it a dream? Translated by: L M A Menezes, S M Angadi
Hindi Translation सत्य है, शांति है, यह क्या है जो मन में नहीं आता? सर्व-सम्मत सुख है, यह क्या है स्पर्श मन को नहीं होता? तुम महान हो, इसमें कोई भ्रम है कूडलसंगमदेव? Translated by: Banakara K Gowdappa
Telugu Translation సత్యము సమాధానము కల్గియు మదిబట్ట వివి యేలయ్యా? సకలము సమ్మతమని సుఖము కల్గియు మది కెక్క వివి యేలయ్యా? నేనూ నీవనునది ఘనతకలదిది భ్రమయేదేవా? Translated by: Dr. Badala Ramaiah
Marathi Translation सत्य आहे, समाधान आहे, मन त्यापासून दूर का देवा? सर्वांनुमताचे सुख आहे, मन त्यापासून दूर का देवा? मी तू रुपी घन तत्त्व आहे, मन त्यापासून दूर का आहे देवा? कूडलसंगमदेवा, तरी हा भ्रम का? Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಪ್ರಾಣಲಿಂಗವನ್ನು ಸಿದ್ಧಿಸಿಕೊಂಡಿದ್ದಾರೆ. ಅದು ಅವರ ಸರ್ವಾಂಗದಲ್ಲಿ ತುಂಬಿ ಪ್ರವಹಿಸುತ್ತಿದೆ. ಆ ಆತ್ಮಸಿದ್ಧಿಯ ವಿಜಯೋತ್ಸಾಹದಲ್ಲಿ ಲಿಂಗಕ್ಕೆ ಅಭಿಷೇಕಿಸೋಣವೆಂದರೆ ಆ ಪ್ರಾಣಲಿಂಗ ಬಾಹ್ಯ ಉಪಚಾರಗಳೊಂದಕ್ಕೂ ಸಿಲುಕದೆ ಅತೀತದಲ್ಲಿ ರಾರಾಜಿಸುತ್ತಿದೆ. ಮತ್ತು ಆ ಪ್ರಾಣಲಿಂಗಾಗ್ರದ ಅಧಿಮಾನಸ ಪ್ರವಾಹದಲ್ಲಿ ಅವಗಾಹವಿದ್ದು ಅವರಿಗೆ ಸುಖಾನಂದವಾಗಿದೆ –ಆ ಜೊಮ್ಮಿನಲ್ಲೇ ಅದನ್ನು ಮುಂದೆ ಮುಂದೆ ಪರಿಭಾವಿಸೋಣವೆಂದರೆ ಅದು ಯಾವ ಕಲ್ಪನೆಗೂ ಒಳಗಾಗದೆ ನಿಲುಕದೆ ನಿರಾಲಂಬದಲ್ಲಿ ನಿಂತಿದೆ. ಆ ದಿವ್ಯಾನುಭೂತಿಯಲ್ಲಿ ಬಸವಣ್ಣನವರಿಗೆ ನಾನು ನೀನೆಂಬುದೆರಡೂ ಭ್ರಮೆಯೆನಿಸಿ ಎಲ್ಲೆಡೆಯ ಎಲ್ಲ ಜೀವಸರೋವರದೆದೆಯ ಮೇಲೂ ಶಿವಸಾಗರವು ಹರಿದು ಆವರಿಸಿ ಸರ್ವವೂ ಶಿವಮಯವಾದಂತೆನಿಸಿದೆ. ಹೀಗೆ ಬಸವಣ್ಣನವರು ದೇಹಭಾವದ ಮತ್ತು ಚಿತ್ತವೃತ್ತಿಯ ಎಲ್ಲ ಪರಿಧಿಗಳನ್ನೂ ಭೇದಿಸಿ ಶಿವದ್ರವ್ಯದಲ್ಲಿ ಧುಮ್ಮಿಕ್ಕಿ ಕರಗಿಹೋದ ತಮ್ಮ ಕೇವಲಸ್ಥಿತಿಯ ನಿರಂಜನ ಕ್ಷಣವೊಂದನ್ನು ಕುರಿತು ಈ ವಚನದಲ್ಲಿ ನಿವೇದಿಸಿಕೊಂಡಿರುವರು. ಭಕ್ತರ ಈ ವಿಧವಾದ ಅತಿಮಾನಸಸ್ಥಿತಿಗಳನ್ನು ಆ ಭಕ್ತರೇ ಮಾತಿಗೆ ತಂದು ಮುಂದಿಡಲು ಮುಂದುಗಾಣರೆನ್ನುತ್ತಿರುವಾಗ-ಹೊರಗಡೆ ನಿಂತ ನಿಮ್ಮಂಥ ಆಗಂತುಕರಿಗೆ –ದಟ್ಟೈಸಿದ ಕಗ್ಗತ್ತಲಲ್ಲಿ ಮುಸುಕಿದ ನೀರವದಲ್ಲಿ ಎಲ್ಲವೂ ಅಗೋಚರ ಅವಿದಿತವೆನಿಸುವುದು ಸಹಜ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು