ಸಿನೆ ಬಂಜೆಯರಿಗೊಬ್ಬ ಮಗ ಹುಟ್ಟಿ,
ಅವನೆನ್ನ ರಿಣಕ್ಕೆ ಒಡೆಯನಾದ,
ಅವನೆನ್ನ ಧನಕ್ಕೆ ಒಡೆಯನಾದ,
ಆನು ಗಳಿಸಿದ ಒಮ್ಮನಕ್ಕೆ ಅಗಲದೆ ಮೋಹಿತನಾದ.
ಕೂಡಲಸಂಗಮದೇವನಂತಪ್ಪ ಮಗ ಹುಟ್ಟಿರೆ,
ಇದ್ದನಯ್ಯಾ ಕಾಯ ಮಾತೆಯಾಗಿ, ಜೀವ ಪಿತನಾಗಿ
ನಾನಿರಿಸಿದಂತೆ!
Transliteration Sine ban̄jeyarigobba maga huṭṭi,
avanenna riṇakke oḍeyanāda,
avanenna dhanakke oḍeyanāda,
ānu gaḷisida om'manakke agalade mōhitanāda.
Kūḍalasaṅgamadēvanantappa maga huṭṭidare,
iddanayya kāya māteyāgi, jīva pitanāgi
nānirisidante!
Manuscript
English Translation 2 When a eunuch and barren dame
Begot a son, he became my creditor,
The master of my wealth.
He fell unseparably in love
With that one mind which I had earned.
When a son like Lord Kūḍala Saṅgama is born,
He lives with body as mother, soul as father
As I shall make Him be.
Translated by: L M A Menezes, S M Angadi
Hindi Translation शून्य और वंध्या का एक पुत्र पैदा हुआ
वह मेरा महाजन बना,
वह मेरे धन का स्वामी बना,
मेरे आर्जित एक-मन पर
बिना बिछुडे मोहित हुआ ।
कूडलसंगमदेव सा पुत्र पैदा होने पर
काया माता, जीव पिता बनकर
जैसे मैंने रखा वैसे रहा ॥
Translated by: Banakara K Gowdappa
Telugu Translation గొడ్రాలికి కొడుకొకడు పుట్టె;
వాడు నా ధనమునకు ప్రభుడయ్యె;
నే గడిరచు నేకాగ్రత సడలక మోహితుడనైతి
సంగని యంతటి సుతుడు పుట్టినా, తల్లిjైు
ప్రాణమే తండ్రిjైు నే జెప్పినట్లుండునయ్యా!
Translated by: Dr. Badala Ramaiah
Marathi Translation
हिजडा आणि वांझ यांना मुलगा झाला.
तोच माझ्या ऋणाचा वारसदार झाला.
तोच माझ्या धनाचा मालक झाला.
माझ्या अर्जित एकनिष्ठ मनावर मोहीत झाला.
कूडलसंगमदेवासम पुत्र जन्मला तर
कायारुपी माता आणि जीवरुपी पिता
होऊन राहिल माझ्या इच्छेनुसार.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತತ್ತ್ವಾತೀತರಾದ ಪರಶಿವ ಮತ್ತು ಚಿತ್ಶಕ್ತಿಯರ ಪ್ರತಿರೂಪವಾದ ಗುರುಶಿಷ್ಯರ ಹಸ್ತಮಸ್ತಕ ಸಂಯೋಗದಿಂದ ನಿಷ್ಪತ್ತಿಯಾದ ಇಷ್ಟಲಿಂಗದ ರಹಸ್ಯವನ್ನು ಕುರಿತು ಬಸವಣ್ಣನವರು ಪ್ರವಚಿಸುತ್ತಿರುವರು.
“ಧರಿಸಿದ ಇಷ್ಟಲಿಂಗವು ನನ್ನ ಋಣ(ಜವಾಬ್ದಾರಿ)ರೂಪವಾದ ದಾಸೋಹಕ್ಕೆ, ಧನರೂಪವಾದ ಕಾಯಕಕ್ಕೆ ಒಡೆಯನಾದ. ಮತ್ತು ಸಾಧಿಸಿದ ಏಕಾಗ್ರ ಮನ(ಒಮ್ಮನ)ಸ್ಸಿಗೂ ಅಗಲದ ಇನಿಯನಾದ. ಕೂಡಲ ಸಂಗಮನಂಥ ಈ ಇಷ್ಟಲಿಂಗಪುತ್ರನು ನನಗೆ ಲಭಿಸಿದರೆ ಅವನಿಗೆ ನನ್ನ ದೇಹವೇ ತಾಯಾಗಿ ನನ್ನ ಜೀವವೇ ತಂದೆಯಾಗಿ ಅವನು ನನ್ನ ಪ್ರಾಣಲಿಂಗವಾಗಿ-ನಾನು ದೇಹದಲ್ಲಿರಿಸಿದರೆ ದೇಹದಲ್ಲಿ ಪ್ರಾಣದಲ್ಲಿರಿಸಿದರೆ ಪ್ರಾಣದಲ್ಲಿ-ಒಳಗೂ ಹೊರಗೂ ಏಕವಾಗಿ ನನಗೆ ಅಚ್ಚುಮೆಚ್ಚಾಗಿರುವನು”ಎನ್ನುತ್ತಿರುವರು ಬಸವಣ್ಣನವರು.
ಇಷ್ಟಲಿಂಗದ ಬಾಹ್ಯೋಪಾಸನೆಯು ಮಾನಸಪೂಜೆಯಲ್ಲಿ ಅರಳಿ ಪ್ರಾಣಲಿಂಗವಾಗಿ ಫಲಿಸುವುದೆಂಬುದು ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು