ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ,
ತೆರಹಿಲ್ಲದ ಸಂಭಾಷಣೆಯ ಸುಖವು,
ತೆರಹಿಲ್ಲದ ನಂಬಿದ, ಸ್ವಾನುಭಾವ ಸುಖವು:
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ,
ಕೂಡಲಸಂಗಮದೇವಾ, ನಿಮ್ಮ ಶರಣಂಗೆ !
Transliteration Terahillada naḍe, terahillada nuḍi,
terahillada sambhāṣaṇe sukhavu,
terahillade nambida, svānubhāva sukhavu:
Terahillada mahime, terahillada vicāra,
kūḍalasaṅgamadēvā, nim'ma śaraṇaṅge!
Manuscript
English Translation 2 For Thy Śaraṇa , O Kūḍala Saṅgama Lord,
Continuous is his walk with Thee,
Continuous is his speech, and the delight
Of converse; and the joy
Of hearing the experience of faith,
Continuous is the glory and the thought.
Translated by: L M A Menezes, S M Angadi
Hindi Translation निरंतर चलना है, निरंतर बोलना
निरंतर संभाषण-सुख;
निरंतर विश्वासपूर्ण, विश्वस्थ, स्वानुभाव सुख,
निरंतर की महिमा, निरंतर का विचार ।
कूडलसंगमदेव, तव शरण के लिए ॥
Translated by: Banakara K Gowdappa
Telugu Translation ఎడతెగని నడక యెడ తెగనినుడి
ఎడతెగని సంభాషణా సుఖము
ఎడతెగని స్వానుభవానందము
ఎడతెగని మహిమ
ఎడతెగని విచారము నీ శరణులకు దేవా!
Translated by: Dr. Badala Ramaiah
Marathi Translation
तुमचेच चालणे, तुमचेच बोलणे,
तुमचेच संभाषण सुख.
तुमचाच विश्वास, स्वानुभाव सुख,
तुमचाच महिमा, तुमचेच विचार,
कूडलसंगमदेवा तुमच्या शरणांचे !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಎಲೆ ಶಿವನೆ, ನಿನಗೆ ನಾನು ಶರಣಾಗತನಾದೆನಾಗಿ -ನನ್ನ ನಿನ್ನ ನಡೆ ಒಂದಾಯಿತು, ನುಡಿ ಒಂದಾಯಿತು, ಒಬ್ಬರ ಮಾತೊಬ್ಬರಿಗೆ ಸುಖದಾಯಕವಾಯಿತು.
ನಿನ್ನನ್ನೇ ನಾನು ನಂಬಿದೆನಾಗಿ ನಿನ್ನ ಪರಮಸುಖವೇ ನನ್ನದಾಯಿತು, ನಿನ್ನ ಮಹಿಮೆಯೂ ನನ್ನದಾಯಿತು. ನಿನ್ನ ವಿಚಾರವೇ ನನ್ನದಾಯಿತು –ಎನ್ನುತ್ತ ಶರಣನಾದವನು ಶಿವನಲ್ಲಿ ಹೇಗೆ ಎರಕವಾದನೆಂಬುದನ್ನು ಅತ್ಯಂತ ವ್ಯಾಮೋಹಕವಾಗಿ ವಿವರಿಸುತ್ತದೆ ಈ ವಚನ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು