ಐಕ್ಯನ ಜ್ಞಾನಿಸ್ಥಲ - ಮನೋವಿಕಾರ
ಮೂರರಾಪ್ಯಾಯನ ಐದು ಬೆಟ್ಟವನಿಂಬುಗೊಂಡು,
ಅಕ್ಕಟಕ್ಕಟಾ, ಮಾಡಿ ಕೆಟ್ಟರು. ಮಾಡದೆ ಕೆಟ್ಟರು!
ನೀಡಿ ಕೆಟ್ಟರು, ನೀಡದೆ ಕೆಟ್ಟರು!
ಕೂಡಲಸಂಗಮದೇವನ ಬಸಿರ ಮಧ್ಯದ
ಬಯಲ ಸಮಾಧಿಯಲಿಕ್ಕದೆ ಕೆಟ್ಟರು!!
Transliteration Mūrarāpyāyana aidu beṭṭavanimbugoṇḍu,
akaṭakaṭā, māḍi keṭṭaru. Māḍade keṭṭaru!
Nīḍi keṭṭaru, nīḍade keṭṭaru!
Kūḍalasaṅgamadēvana basira madhyada
bayala samādhiyalikkade keṭṭaru!!
Manuscript
English Translation 2 When the three hungers seized on the five hills
Alas! in doing and not doing, they were lost!
In serving and not serving, they were lost!
Failing to win the peace that is
Within the void that is
In Lord Kūḍala Saṅgama's central womb,
They were undone
Translated by: L M A Menezes, S M Angadi
Hindi Translation तीनों की क्षुधाने पाँच पर्वतों पर आश्रय पाया,
हाय हाय, वे कर्म कर नष्ट हुए,
बिना कर्म के नष्ट हुए,
अर्पण कर नष्ट हुए, बिना अर्पण नष्ट हुए,
कूडलसंगमदेव की उदर मध्यस्थ
शून्य समाधि को अर्पण किये बिना नष्ट हुए ॥
Translated by: Banakara K Gowdappa
Telugu Translation ముగ్గురి తృప్తి ఐదు కొండలజుట్టె
కటాకటా చేసి చెడిరి చేయక చెడిరి:
పెట్టి చెడిరి పెట్టక చెడిరి మా సంగని పొట్టనడిమి బయల
సమాధి మునుగక చెడిరి కదయ్యా
Translated by: Dr. Badala Ramaiah
Marathi Translation
त्रिविध बंधनाने पाच पर्वतांना घेरले.
शिवशिवा, करणारे नष्ट झाले, न करणारे नष्ट झाले.
अर्पण करणारे नष्ट झाले, अर्पण न करणारे नष्ट झाले.
कूडलसंगमदेवाच्या गर्भातील शून्यात
अर्पण केल्याविना नष्ट झाले.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಹೊನ್ನು ಹೆಣ್ಣು ಮಣ್ಣೆಂಬ ಮೂರು ಮಲಕ್ಕೆ ಆಶೆಪಟ್ಟು-ಅವನ್ನು ಹುಡುಕುತ್ತ, ಕಣ್ಣು ನಾಲಗೆ ಮುಂತಾದ ಪಂಚೇಂದ್ರಿಯಗಳೆಂಬ ಪರ್ವತಗಳನ್ನು ಹತ್ತುತ್ತ ಇಳಿಯುತ್ತ –ದೇಹಕ್ಕೆ ದುರಾಶೆಯ ಮನಸ್ಸಿನ ಹಗ್ಗವನ್ನು ಕಟ್ಟಿ ಎಳೆದಾಡುತ್ತ–ಮಹನೀಯವಾದುದೇನೆಲ್ಲವನ್ನೂ ಕಡೆಗಣಿಸುತ್ತ ಅಲೆಯುವ ಜೀವಕ್ಕೆ ಮಾಡಬೇಕಾದುದನ್ನು ಮಾಡದಿರುವುದೇ, ನೀಡಬೇಕಾದುದನ್ನು ನೀಡದಿರುವುದೇ ದಿನಚರಿಯಾಯಿತು. ಈ ಕುಕಾರ್ಯದಲ್ಲಿ ದುಶ್ಚಿಂತೆಯಲ್ಲಿ ದುಗುಡದಲ್ಲಿ ಧಾವತಿಯಲ್ಲಿ ಜೀವಮಾನವೆಲ್ಲಾ ಕಳೆದುಹೋಯಿತು.
ಭಂಗಬಟ್ಟು ಹೊರೆದುಕೊಳ್ಳುವ ತನ್ನ ಹೊಟ್ಟೆಯಲ್ಲೇ ಅಭಂಗವಾಗಿ ಅಡಗಿರುವ ಶಿವನನ್ನು ಅವನು ಒಮ್ಮೆಯೂ ಗುರುತಿಸಲಿಲ್ಲ ಗೌರವಿಸಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು