ಐಕ್ಯನ ಜ್ಞಾನಿಸ್ಥಲ - ಶರಣಾಗತಿ
ಉಮಾಧಿನಾಥರು ಕೋಟಿ, ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ, ನೋಡಯ್ಯಾ;
ಸದಾಶಿವರೊಂದು ಕೋಟಿ, ಗಂಗೆವಾಳುಕ ಸಮರುದ್ರರು
ಇವರೆಲ್ಲರೂ ಕೂಡಲ ಸಂಗನ ಸಾನ್ನಿಧ್ಯರಲ್ಲದೆ,
ಸಮರಸವೇದ್ಯರೊಬ್ಬರೂ ಇಲ್ಲಾ!
Transliteration Umādhinātharu kōṭi, pan̄cavaktraru kōṭi,
nandivāhanarondu kōṭi, nōḍayya;
sadāśivaru kōṭi, gaṅgevāḷuka samarudraru
ivarellarū kūḍala saṅgana sānnidhyarallade,
samarasavēdyarobbarū illa!
Manuscript
English Translation 2 A billion Umādhināthas,
A billion five-faced ones,
A billion, too, of such
As have the bull for carrier, lo!
A billion Sadāśivās ;
As many Rudras as the Gaṅgā sands!
These all sit close
To Kūḍala Saṅga ,but none
Has found the consubstaintial union-none!
Translated by: L M A Menezes, S M Angadi
Hindi Translation उमाधिनाथ एक कोटि हैं, पंचवक्त्र एक करोड़ हैं,
नंदी-वाहन एक कोटि हैं,सदाशिव एक करोड़ हैं,
गंगा-बालुका सम रुद्र हैं ।
ये सब कूडलसंगमदेव की सन्निधि में रहते हैं,
समरसवेद्य एक भी नहीं है॥
Translated by: Banakara K Gowdappa
Telugu Translation ఉమాధి నాథులుకోటి; పంచ వక్తుృలుకోటి;
నంది వాహను లొక్కకోటి చూడుడయ్యా;
సదాశివు లొక్కకోటి; గాంగవాలుక సమారుద్రులు:
వీరందరూ సంగని సాన్నిధ్య వర్తులేగాని;
సమరస వేద్యుడగు వాడొక్కడూ లేడయ్యా?
Translated by: Dr. Badala Ramaiah
Marathi Translation
उमाधिनाथ कोटी, पंचवक्र कोटी,
नंदीवाहन कोटी पहा देवा.
सदाशिव कोटी, रुद्र वाळूच्या कणासम असंख्य.
कूडलसंगमदेवा हे सगळे तुझ्याजवळ आहे.
पण तुझ्यात समरसवेद्य कोणी नाही.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಕೈಲಾಸದಲ್ಲಿ ಶಿವನ ಬಳಿಯೇ ಗಣಂಗಳು ಉಮಾಧಿನಾಥರೆಂದೂ ಪಂಚವಕ್ತ್ರರೆಂದೂ ನಂದಿವಾಹನರೆಂದೂ ಕೋಟಿ ಕೋಟಿ ಸಂಖ್ಯೆಯಲ್ಲಿರುವರು. ಮತ್ತೆ ಹಲವು ಕೋಟಿ ಗಣಂಗಳು ಸದಾಶಿವರೆಂದೂ ಗಂಗೆವಾಳುಕ ಸಮಾರುದ್ರರೆಂದೂ ಶಿವನ ಇನ್ನೂ ಹತ್ತಿರದ ಸಾನ್ನಿಧ್ಯದಲ್ಲೇ ಇರುವರು. ಆದರೇನು ಅವರೆಲ್ಲಾ ಶಿವನ ಉದ್ದುದ್ದವಾದ ಹೆಸರುಗಳನ್ನು ಇಟ್ಟುಕೊಂಡು, ಅದ್ಭುತವಾಗಿ ಅವನ ರೂಪವನ್ನೇ ಧರಿಸಿಕೊಂಡು ಚಮತ್ಕಾರವಾಗಿ ಕಾಣುವವರೇ ಹೊರತು ಅವರು ಆ ಶಿವನಲ್ಲಿ ಸಮರಸವಾದವರಲ್ಲ.
ಶಿವನಲ್ಲಿ ಸಮರಸವಾಗಿ ಬದುಕುವ ದಿವ್ಯ ಕಲೆಯನ್ನು ಅರಿಯದೆ ಹೀಗೆ ಶಿವನಾಮವನ್ನು ಶಿವಲಾಂಛನವನ್ನೂ ಧರಿಸಿ ಮಠಮಾನ್ಯಗಳಲ್ಲಿ ಮೆರೆಯುವ ಸ್ವಾಮಿಸನ್ಯಾಸಿಗಳನ್ನು ಕಂಡು ಬಸವಣ್ಣನವರು ಜಿಗುಪ್ಸೆಯಿಂದ ಹಾಡಿದ ವಚನವಿರಬಹುದಿದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು