ಐಕ್ಯನ ಜ್ಞಾನಿಸ್ಥಲ - ಸರ್ವಾತ್ಮಭಾವ
ರಕ್ಕಸಿಯ ಮನೆಯಲ್ಲು ಭೋಜನವುಂಡು
ತೃಪ್ತಿಯಾಯಿತ್ತೆಂದು ಬೆಸಗೊಂಡರೆ ಹೇಳಿಹೆನು:
ʼನೀರ ಕೈಯಲು ಕಿಚ್ಚ ಬಯ್ಕೆಯ ಕೊಟ್ಟಂತೆ
ಸಾಯುಜ್ಯ ಪದವಿಯನವರೆತ್ತ ಬಲ್ಲರು?
ಮಹಾದಾನಿ ಕೂಡಲಸಂಗನ
ಸಮರಸ ಸುಖವನವರೆತ್ತ ಬಲ್ಲರು?ʼ
Transliteration Rakkasiya manelu bhōjanavuṇḍu
tr̥ptiyāyitendu besagoṇḍare hēḷihenu:
`Nīra kaiyalu kicca baykeya koṭṭante
sāyujyapadaviyanavaretta ballaru?
Mahādāni kūḍalasaṅgana
samarasa sukhavanavaretta ballaru?ʼ
Manuscript
English Translation 2 Should any say he had his bellyful
By dining at an ogress's house,
I tell him: "How can they know
The rank of Oneness if they be
Like live-coal pile in water's hands?
How can they know the joy
Of consubstantial union with
Kūḍala Saṅgama, most bountiful?"
Translated by: L M A Menezes, S M Angadi
Hindi Translation राक्षसी के घर भोजन कर
कोई कहे, हम तृप्त हुए तो मैं कहता हूँ;
पानी के हाथ आग की आशा सौंपने की भाँति
सायुज्य पद वे कहाँ जानते हैं?
महादानी कूडलसंगमदेव की समरसता का सुख
वे कहाँ जानते हैं?
Translated by: Banakara K Gowdappa
Telugu Translation రక్కసి యింట మెక్కి తృప్తి కల్గెనని చెప్పినచో చెప్పెద,
నీటి చేతుల నిప్పుబై క లిచ్చినట్లేనయ్యా!
సాయుజ్య పదము వారికెట్లు తెలియును స్వామి?
సంగని సమరస సుఖమును వా రెట్లు తెలియగలరయ్యా?
Translated by: Dr. Badala Ramaiah
Marathi Translation
राक्षसीच्या घरात पोटभर जेवून तृप्त झालो ऐकून चकित झालो.
हे पाण्यात जळती आग ठेवल्यासम आहे.
सत्युज्यपद हे काय जाणतात?
महादानी कुडलसंगमदेवामधील
समरसतेचे सुख हे काय जाणतात?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತನ್ನ ಮನೆಗೆ ಬಂದವರನ್ನೆಲ್ಲ ತಿನ್ನುವವಳು ರಾಕ್ಷಸಿ. ಅಂಥವಳ ಮನೆಗೇ ಹೋಗಿ ಯಾರಾದರೂ ಉಂಡು ತೃಪ್ತಿಪಟ್ಟು ಬಂದೆನೆಂದರೆ ಆಶ್ಚರ್ಯವಲ್ಲದೆ ಮತ್ತೇನು ?
ಬೆಂಕಿ ಆರದಂತೆ ಜೋಪಾನಮಾಡಲು ಅದನ್ನು ನೀರಿನಲ್ಲಿ ಬಚ್ಚಿಟ್ಟರಾದೀತೆ ?
ಈ ಲೋಕದಲ್ಲಿ ಹುಟ್ಟಿದ ಮೇಲೆ ಜೀವವು ಮಾಯೆಗೆ ಸಿಲುಕದೆ, ಸಿಲುಕಿದರೂ ಬಲಿಬೀಳದೆ ಗೆದ್ದುದಾದರೆ–ಅದು ಮಾತ್ರ ಶಿವಬೀಜಕ್ಕೆ ಹುಟ್ಟಿದ ಗಟ್ಟಿಜೀವ.
ಮಾಯೆಯ ಗವಿಗೇ ನುಗ್ಗಿ ಆ ಮಾಯೆಯೊಡನೆ ಸೆಣಸಾಡಿ-ಅವಳನ್ನು ಕೊಂದು –ಈ ಲೋಕದ ಜನಕ್ಕೆ ರಕ್ಷಣೆ ನೀಡಬಲ್ಲ ಶಿವಶರಣರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬಸವಣ್ಣನವರು ಈ ವಚನವನ್ನು ಹಾಡಿರುವರೆನಿಸುವುದು.
ಸಾಯುವುದೇ ಸಹಜವೆಂದು ಕುರಿಯಂತೆ ಜೀವನು ಮಾಯೆಯ ಮುಂದೆ ತಲೆತಗ್ಗಿಸಿ ನಿಲ್ಲುವುದಾದರೆ ಅದಕ್ಕೆ ಮೃತ್ಯುವೇ ಗತಿ –ಮೃತ್ಯುಂಜಯನಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು