ಐಕ್ಯನ ಜ್ಞಾನಿಸ್ಥಲ - ಅನುಭಾವಿ
ಬಯಲ ರೂಪ ಮಾಡಬಲ್ಲಾತನೆ ಶರಣನು;
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದರೆ ಎಂತು ಶರಣನಂಬೆ?
ಆ ರೂಪ ಬಯಲ ಮಾಡಲರಿಯದಿದ್ದರೆ ಎಂತು ಲಿಂಗಾನುಭಾವಿಯೆಂಬೆ?
ಈ ಉಭಯವೊಂದಾದರೆ ನಿಮ್ಮಲ್ಲಿ ತೆರಹುಂಟೆ,
ಕೂಡಲಸಂಗಮದೇವಾ?
Transliteration Bayala rūpa māḍaballātane śaraṇanu;
ā rūpa bayala māḍaballātane liṅgānubhāvi.
Bayala rūpa māḍalariyadiddare entu śaraṇanambe?
Ā rūpa bayalu māḍalariyadiddare entu liṅgānubhāviyembe?
Ī ubhaya ondādare nim'malli terahuṇṭe,
kūḍalasaṅgamadēvā?
Manuscript
English Translation 2 He who can give a form to viod
Is a Śaraṇa;
He who can turn that form to void
Is Liṅga -experient.
If he can't give a form to viod,
How's he a Śaraṇa?
If he can't turn that form to void,
How's he a Liṅga-experient?
If these two can be made in one,
Can there, O Kūḍala Saṅgama Lord,
Be room in Thee ?
Translated by: L M A Menezes, S M Angadi
Hindi Translation शून्य को रूप दे सकनेवाला शरण है,
रूप को शून्य बना सकनेवाला लिंगानुभावी है ।
शून्य को रूप देना न जाननेवाले को
शरण कैसे कहूँ?
रूप को शून्य बनाना न जाननेवाले को
लिंगानुभावी कैसे कहूँ?
ये दोनों एक हो जायँ, तो कूडलसंगमदेव,
तुम्हारे यहाँ स्थान रहेगा?
Translated by: Banakara K Gowdappa
Telugu Translation బయలురూపు సేయ నేర్చినవాడే శరణుడు; ఆ రూపును
బయలు సేయగలవాడే లింగానుభావి;
బయలును రూపింప తెలియని వానిని శరణుడనుటెట్లు?
రూపును బయలు సేయ తెలియని వానిని లింగాను భావియనుటెట్లు?
ఈ రెండు నొక్కటిjైునచో భేదమిక లేదురా సంగా! నీ యందు
Translated by: Dr. Badala Ramaiah
Marathi Translation
निराकार रूप साकार करणारेच शरण
साकार रूप निराकार करणारेच लिंगानुभावी,
निराकाररूप साकार न करणाऱ्याला शरण कसे म्हणू ?
साकाररूप निराकार न करणाऱ्याला लिंगानुभावी कसे म्हणू ?
हे उभय एक झाले तर तुमच्यापासून दूर कसे होतील कूडलसंगमदेवा?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಿರಾಕಾರವಾದ ಶಿವನನ್ನು ಸಾಕಾರವಾದ ಇಷ್ಟಲಿಂಗದಲ್ಲಿ ಕಂಡು ಮುಂದುವರಿದು ಆ ಇಷ್ಟಲಿಂಗವನ್ನು ಪ್ರಾಣಲಿಂಗವಾಗಿ ನಿರಾಕಾರದಲ್ಲಿ ಉಪಾಸಿಸಿ ಸಾಕ್ಷಾತ್ಕಾರವೃತ್ತವನ್ನು ಪೂರೈಸಬಲ್ಲ ಲಿಂಗಾನುಭಾವಿಯೇ ಆಗಿರುವನು ಶರಣನು.
ಹೀಗೆ ಇಷ್ಟಲಿಂಗಪ್ರಾಣಲಿಂಗಗಳಲ್ಲಿ ಪರ್ಯಾಯವಾಗಿ ಲೀನವಾದವನೇ ಶಿವನಲ್ಲಿ ಸಂಪೂರ್ಣವಾಗಿ ತಲ್ಲೀನ ವಾದವನು, ಒಳಹೊರಗೂ ಲಿಂಗವಾಗಿ ಶಿವನಲ್ಲಿ ಅವಿರಳವಾದವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು