•  
  •  
  •  
  •  
Index   ವಚನ - 925    Search  
 
ಐಕ್ಯನ ಜ್ಞಾನಿಸ್ಥಲ - ಮುಕ್ತಿ
ಮಾತಿಲ್ಲ ನುಡಿಯಿಲ್ಲ, ಏತಕ್ಕೆ ಮುನಿವಿರಿ ? ಮಾತಾಡಿದರೆ ಕೆಯ್ಯ ಬೆಳಸೆಂಬುದನರಿಯಿರೆ, ಅಯ್ಯಾ? ಮಾತು ಕೆಟ್ಟಲ್ಲದೆ ತಾನಾಗಬಾರದು. ಕೂಡಲಸಂಗಮದೇವಯ್ಯಾ, ಮಾತಿಂದ ಬರ್ಕು ಭವಭಾರ ಘೋರ!
Transliteration Mātilla nuḍiyilla, ētakke muniviri? Mātāḍidare keyya beḷasembudanariyire, ayyā? Mātu keṭṭallade tānāgabāradu. Kūḍalasaṅgamadēvayya, mātinda barku bhavabhāraghōra!
Manuscript
Music Courtesy:
English Translation 2 There's neither word nor speech: Why, then, this rage? Do you not know, good Sir, That should you speak, your karma grows? One cannot be oneself, O Kūḍala Saṅgama Lord, An awful load of births must be Through words! Translated by: L M A Menezes, S M Angadi
Hindi Translation न बात, न बोली क्यों रूठ गये? तुम नहीं जानते, बोलने से कर्म बढता है? वचनशून्य हुए बिना आत्मज्ञान संभव नहीं, कूडलसंगमदेव, बातों से ही घोर भव-भार प्राप्त होगा ॥ Translated by: Banakara K Gowdappa
Telugu Translation మాటలేదు; పలుకలేదేమిటికో కోపింప? మాటాడిన వరిమడి పండినట్లేయని తెలియుడయ్యా! మాట చెడవచ్చుగాని మఱి తనకు తాగాలేడు సంగయ్యా భవభార నరకము మాటతో పుట్టునయ్యా! Translated by: Dr. Badala Ramaiah
Marathi Translation वाणी नाही, वाक्य नाही, का कोप करता? वाणीमुळे कर्म बंधन वाढते देवा ? वाणीतीत झाल्याविना आत्म स्वरुप होत नाही. कूडलसंगमदेवा, वाणीमुळे भवबंधन घोर होते. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಜಗಳಗಳಲ್ಲಿ ಎರಡು ವಿಧ : (1) ಆ ಘಳಿಗೆಯಲ್ಲಿ ಮಾತಿಗೆ ಮಾತು ಮಥಿಸದಿದ್ದರೂ -ಹಿಂದಿನ ಒಳ ತೊಳಸುಗಳಿಂದ ಕ್ರಮವಾಗಿ ಉಕ್ಕಿದ ಕೋಪೋದ್ರೇಕದಲ್ಲಿ ಮಾತಿಗೆ ಮಾತು ಬೆಳೆದು -ಪರಿಸ್ಥಿತಿ ಉನ್ಮಾದಕ್ಕೇರಿ ಕೈಕೈ ಮಿಲಾಯಿಸುವುದು (2) ಇನ್ನೊಂದು ವಿಧವಾದ ಜಗಳ –ಕ್ವಚಿತ್‌ಕಾರಣದಿಂದಾಗಿ ಮಾತಿಗೆ ಮಾತು ಮೊದಲಿಗೇ ಧಗ್ಗೆಂದು ಹೊತ್ತಿಕೊಂಡು ಕೈಕೈ ಮಿಲಾಯಿಸುವುದು. ಹೇಗೂ ಬಾಯಿಗೆ ಬಂದಂತೆ ಮಾತನಾಡಿದರೆ ಕೈಗೆ ಬಂದಂತೆ ಜಗಳವಾಡುವುದು ತಪ್ಪಿದ್ದಲ್ಲ. ಈ ಲಜ್ಜಾಸ್ಪದ ಪರಿಸ್ಥಿತಿಯಿಂದ ಪಾರಾಗಲು ಜನ ಮಾತಿನ ಮೇಲೆ ಹತೋಟಿಯಿಟ್ಟಿರಬೇಕು. ವ್ಯಾವಹಾರಿಕದೃಷ್ಟಿಯಿಂದಲೇ ಅಲ್ಲ ಆಧ್ಯಾತ್ಮಿಕ ಸಂದರ್ಭಗಳಲ್ಲಿಯೂ –ಮಾತನಾಡದಿರುವುದರಿಂದಲೇ ಮೌನವನ್ನೂ ಅರ್ಥಪೂರ್ಣಮಾಡಿ ಮಾತಿನಾಚಿನದನ್ನೂ ಗೆಲ್ಲಲ್ಲು ಸಾಧ್ಯ. “ಮಾತಿಂದ ಬಕ್ಕು ಭವಭಾರಘೋರ” –ಮಾತಿಂದ ಈ ಭವ ಮತ್ತಷ್ಟು ಭಾರವೂ ಘೋರವೂ ಆಗುವುದೆಂಬುದು ನಾವೆಲ್ಲ ನಿತ್ಯವು ಕಂಡುಂಡ ಸತ್ಯವೇ ಆಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು