•  
  •  
  •  
  •  
Index   ವಚನ - 926    Search  
 
ಐಕ್ಯನ ಜ್ಞಾನಿಸ್ಥಲ - ಮುಕ್ತಿ
ಏನಾದರೆಯೂ ಸಾಧಿಸಬಹುದು, ಮತ್ತೇನನಾದರೆಯೂ ಸಾಧಿಸಬಹುದಯ್ಯಾ ತಾನಾರೆಂಬುದ ಸಾಧಿಸಬಾರದು, ಕೂಡಲಸಂಗಮದೇವರ ಕರುಣವುಳ್ಳವಂಗಲ್ಲದೆ!
Transliteration Ēnanādarū sādhisabahudu, mattēnādareyū sādhisabahudayya tānārembuda sādhisabāradu, kūḍalasaṅgamadēvara karuṇavuḷḷavaṅgallade!
Manuscript
English Translation 2 Whatever you will you can attain; But you, Sir, must attain Another thing likewise: You cannot get that which you are Unless you have Lord Kūḍala Saṅgama's grace! Translated by: L M A Menezes, S M Angadi
Hindi Translation जो चाहे साध सकते हो; कुछ और भी साध सकते हो, किंतु कूडलसंगमदेव की कृपा के बिना आत्मज्ञान की साधना कठिन है॥ Translated by: Banakara K Gowdappa
Telugu Translation ఏమైనా సాధింపవచ్చు; ఏదైనా సాధంపవచ్చు కాని తానెవ్వరో యనుట మాత్రము తరచి సాధింపలేమురా కూడల సంగయ్య దయగూడెనా సాధింపగలమయ్యా! Translated by: Dr. Badala Ramaiah
Marathi Translation काहीही साधता येईल, आणखी खूप काही साधता येईल. आत्मस्वरुप साध्य करीत नाही कूडलसंगमदेवाची कृपा असणाऱ्यांना मात्र साध्य आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಕಾಮಿನಿಯ ಕೀರ್ತಿಯನ್ನು ಧನವನ್ನು ದರ್ಪವನ್ನು –ಏನನ್ನೂ ಕಾಮದಿಂದ ಕೌಟಿಲ್ಯದಿಂದ ಕೇಣದಿಂದ ಕ್ರೌರ್ಯದಿಂದ ಸಂಪಾದಿಸುವರು –ಇದೆಲ್ಲ ದೈಹಿಕಸ್ತರದವೇ ಆಗಿ ಅವನ್ನು ಹಾಗೆ ಸಾಧಿಸುವುದು ಸುಲಭ ಕೂಡ. ಆದರೆ ಈ ದೇಹದಲ್ಲಿಯೇ ದೇಹಾತಿರಿಕ್ತವಾಗಿರುವ ಆತ್ಮವನ್ನು ಗುರುತಿಸಿ -ಅದು ನಾನು. ಈ ದೇಹ ಪಿಂಡವಲ್ಲ ನಾನು –ಎಂಬುದನ್ನು ಬೌದ್ಧಿಕಪ್ರಯಾಸದಿಂದ ಮತ್ತು ಶಮಾದಿ ಭಾವಶುದ್ಧಿಯಿಂದ ಭೇದಿಸಿ ಬುದ್ಧನಾಗುವುದು ದೇವರ ಅನುಗ್ರಹವಿದ್ದವನಿಗೆ ಮಾತ್ರ ಸಾಧ್ಯವೆನ್ನುವಷ್ಟು ದುಸ್ತರವಾದುದು. ದೇವರ ಅನುಗ್ರಹದಿಂದ ಈ ಆತ್ಮಾನುಭೂತಿಯನ್ನು ಪಡೆದವನು ಕಾಮಿನಿಯನ್ನು ಪ್ರೇಮದಿಂದ ಮಾನಿನಿಯನ್ನಾಗಿ ಕೀರ್ತಿಯನ್ನು ಸೇವೆಯಿಂದ ಯಶಸ್ಸನ್ನಾಗಿ, ಧನವನ್ನು ಕಾಯಕದಿಂದ ಆತ್ಮಶ್ರೀಯನ್ನಾಗಿ ದರ್ಪವನ್ನು ದಾಸೋಹದಿಂದ ವಿನಯವನ್ನಾಗಿ ಪರಿವರ್ತಿಸಿಕೊಂಡು ಲೋಕಹಿತಕಾರಿಯೂ ಪ್ರಿಯದರ್ಶಿಯೂ ಆಗಿರುವನು. ಈ ಇಂಗಿತವೂ ಈ ವಚನದಲ್ಲಿ ಅಡಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು