ಐಕ್ಯನ ಜ್ಞಾನಿಸ್ಥಲ - ಭಾವಶುದ್ಧಿ
ಜೀವಾತ್ಮ-ಅಂತರಾತ್ಮನ ಸುದ್ದಿಯ ಬೆಸಗೊಂಬರೆ
ಹೇಳಿಹೆ, ಕೇಳಿ ಭೋ:
ಹುಸಿಯ ಸಂಕಲೆಯಾಗಿರ್ದಲ್ಲಿ ಕಾದುಕೊಂಡಿದ್ದನೊಬ್ಬ:
ಕಥೆ ಕನಸಮಾಡಿ ಹೇಳುತ್ತಿದ್ದನೊಬ್ಬ:
ಪರಾತ್‌ಪರಕ್ಕೆ ಹೋಗಿ
ಪರಮನ ಸುದ್ದಿಯಕೊಂಡು ಬರುತ್ತಿದ್ದನೊಬ್ಬ!
ಅವರಿಬ್ಬರನೂ ಕೆಡೆಮೆಟ್ಟಿ ಹೋಹಾಗ,
ಲೋಕ ನಿರ್ಬುದ್ಧಿಗೊಂಡಿತ್ತು, ಕೂಡಲಸಂಗಮದೇವಾ.
Transliteration Jīvātma-antarātmana suddiya besagombare
hēḷihe, kēḷi bhō:
Husiya saṅkaleyalli kādukoṇḍidda obba:
Kathe kanasamāḍi hēḷuttiddavanu:
Parātparakke hōgi
paramana suddiya koṇḍubaruttidda obba!
Avaribbarannū keḍemeṭṭi hōhāga,
lōka nirbud'dhigoṇḍittu, kūḍalasaṅgamadēvā.
Manuscript
English Translation 2 If you ask me for news of soul and self
I'll tell you: listen, O;
"One stood waiting
Where he was in chains of myth;
Another told a tale
Fashioned into a dream;
One who was coming with the news
Of the higher than the Highest,
From the Supreme Lord,
Trampled the both and went on.
The world went amazed,
Lord Kūḍala Saṅgama.
Translated by: L M A Menezes, S M Angadi
Hindi Translation जीवात्मा, एवं अंतरात्मा का वृत्तांत
पूछते हो, तो बोलता हूँ, सुनो;
मिथ्या-शृंखलाओं के यहाँ एक प्रतीक्षा कर रहा था,
दूसरा कथा को स्वप्न बनाकर कह रहा था
परात्परा जाकर परमात्मा का समाचार लानेवाला
एक और उन दोनों को कुचलकर जब जाने लगा
तब सारा संसार चकित रह गया, कूडलसंगमदेव ॥
Translated by: Banakara K Gowdappa
Telugu Translation జీవాత్మ - అంతరాత్మల మాటనెత్త చెప్పెద వినుడయ్యా
ఆకట గొలుసులబడి కాచుకొనియుండె నొక్కడు!
కథను కలజేసి చెప్పుకొనుచుండె నొక్కడు
పరాపరమునకుబోయి పరాత్పరుని వార్త తెచ్చుచుండె నొక్క
డీ యిద్దరూ దిగజారిపోవ లోకము నిర్బుద్ధిjైుపోయెరా సంగయ్యా:
Translated by: Dr. Badala Ramaiah
Marathi Translation
जीवात्मा अंतरात्मा जाणून घ्यायचे
असेल तर सांगतो ते ऐकून घ्या.
असत्याच्या शृंखलेने बांधले आहे एकाला,
सत्याला स्वप्न म्हणून सांगतो दुसरा,
शिवलोकी जाऊन परमात्म्याची बातमी आणतो तिसरा.
या दोघांना तुडवून जाताना लोक र्निबुध्द झाले कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭವದಿಂದ ಹಿಡಿದು ಶಿವನನ್ನು ಕೊಡುವವರೆಗಿನ ಮಾರ್ಗದ ಮೂರು ಹಂತಗಳಲ್ಲಿ ಜೀವನನ್ನು ಜೀವಾತ್ಮ ಅಂತರಾತ್ಮ ಪರಮಾತ್ಮ ಎಂದು ನಾಮಾಂತರದಲ್ಲಿ ಗುರುತಿಸುವರು.
ತಮೋಗುಣದೊಡನೆ ಕೂಡಿ ಜಡಕರ್ಮದಲ್ಲಿ ವರ್ತಿಸುವ ಕಾರಣದಿಂದ ಜೀವಾತ್ಮನೆನಿಸಿ, ರಾಜಸಗುಣದೊಡನೆ ಕೂಡಿ ಜಡಾಜಡಕರ್ಮದಲ್ಲಿ ವರ್ತಿಸುವ ಕಾರಣದಿಂದ ಅಂತರಾತ್ಮನೆನಿಸಿ, ಈ ಎರಡೂ ಹಂತದಲ್ಲಿ ಜೀವನು ಭವಭವಗಳಲ್ಲಿ ತಿರುಗುವನು. ಸತ್ವಗುಣದೊಡನೆ ಕೂಡಿ ಅಜಡಕರ್ಮದಲ್ಲಿ ವರ್ತಿಸುವ ಕಾರಣದಿಂದ ಪರಮಾತ್ಮನೆಂಬ ಹಂತದಲ್ಲಿ ಆ ಜೀವನು ಪರಶಿವನಲ್ಲಿ ಒಂದಾಗುವನು.
ಈ ಮಾಂಸಮಯ ಬಂಧನದಲ್ಲಿ ಸಿಲುಕಿ-ಅದನ್ನೆ ಭದ್ರವಾಗಿ ನಂಬಿಕೊಂಡಿರುವನು ಜೀವಾತ್ಮನು. ಅಂತರಾತ್ಮನಾದರೋ ಪುಣ್ಯವೆಂದು ಪಾಪವೆಂದು, ಸ್ವರ್ಗವೆಂದು ನರಕವೆಂದು ಕಥೆಕಟ್ಟಿ ಕಾಲಕಳೆಯುತ್ತಿರುವನು. ಆದರೆ ಪರಮಾತ್ಮನು ಜೀವಾತ್ಮನ ಅಜ್ಞಾನವನ್ನು ಅಂತರಾತ್ಮನ ಊಹಾಪೋಹವನ್ನು ಮೀರಿ ಪರಶಿವನಲ್ಲಿ ನೇರವಾಗಿ ಸಂಪರ್ಕ ಬೆಳೆಸಿಕೊಂಡಿರುವನು.
ಮೂವರು ಸಾಹಸಮಯವಾದೊಂದು ಯಾತ್ರೆಯನ್ನು ಕೈಗೊಂಡರೆನ್ನಿ : ಒಬ್ಬನು ಕಾಮಿಯಾಗಿ ದಾರಿಯಲ್ಲಿ ಬಂದಿಯಾಗಿ ಸಿಕ್ಕಿಬಿದ್ದನು. ಅವನಿಗೆ ಎರಡನೆಯವನು. ಅರೆಮರುಳನಾಗಿ ಅಲ್ಲಿಂದ ಇಲ್ಲಿಂದ ಪರಮಾರ್ಥವಲ್ಲದ ಸುಳ್ಳು ಸುದ್ದಿಯನ್ನು ತಂದು ಮುಟ್ಟಿಸುತ್ತಿದ್ದನು. ಇದನ್ನೆಲ್ಲ ಕಂಡು ಹೇಸಿದ ಮೂರನೆಯವನು ಉಳಿದಿಬ್ಬರನ್ನೂ ಬುದ್ಧಿಗೇಡಿಗಳೆಂದು ಜರೆದು ಮುಂದೆ ಪಯಣ ಮಾಡಿ ಗುರಿಯನ್ನು ತಲುಪಿದನು –ಎಂಬಂಥ ಒಂದು ಕಥೆಯ ಮಾದರಿಯಲ್ಲಿ ಆತ್ಮನ ದಿವ್ಯಪ್ರವಾಸದ ವೃತ್ತಾಂತವನ್ನು ಈ ವಚನದಲ್ಲಿ ಹೆಣೆಯಲಾಗಿದೆ.
ವಿ : (1) ಜಡಕರ್ಮವೆಂದರೆ ಅಜ್ಞಾನಮಯವಾದ ತೀರ ವ್ಯಾವಹಾರಿಕ ಜೀವನ. ಜಡಾಜಡ ಕರ್ಮವೆಂದರೆ ಅರಿವು ಉದಯವಾಗಿ ಅಜ್ಞಾನ ಕದಲುತ್ತಿರುವ ಮಧ್ಯಸ್ಥ ಜೀವನ. ಅಜಡ ಕರ್ಮವೆಂದರೆ ಜ್ಞಾನ ಸಂಪನ್ನವಾದ ಅರ್ಥಪೂರ್ಣ ಜೀವನ. (2) ಶುದ್ಧಿಯೆಂದರೆ ಸುದ್ದಿ ವಾರ್ತೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು