ಐಕ್ಯನ ಜ್ಞಾನಿಸ್ಥಲ - ಶಿವಜ್ಞಾನ
ಸಮರತಿ, ಸಮಕಳೆ, ಸಮಸುಖ, ಸ್ವಾನುಭಾವ ಹಿರಿದು
ಕಿರಿದಾದುದನಾರೂ ಅರಿಯರು!
ಪಾಷಾಣಪರೀಕ್ಷೆವಂತನಂತೆ-
ಗುರುವಿಲ್ಲದವರಂತಿರಲಿ-
ಕೂಡಲಸಂಗಮದೇವಯ್ಯಾ, ಗುರುವುಳ್ಳವರ ನಿಜವಿಂತುಟು!
Transliteration Samarati, samakaḷe, samasukha, svānubhāva hiridu
kiridādudanārū ariyaru!
Pāṣāṇaparīkṣevantanante-
guruvilladavarantirali-
kūḍalasaṅgamadēvayya, guruvuḷḷavara nijavintuṭu!
Manuscript
English Translation 2 Greater the mystical experience
Which means a common love,
A common art, a common joy.
No one has cared to know
What may be less
The truth of those who have a Guru- let be
The ones who have not one-
Is like the man who tests a stone-
This much, no more!
Translated by: L M A Menezes, S M Angadi
Hindi Translation समरति, समकला, समसुख, स्वानुभाव बडे हैं,
इन्हें छोटा बनते किसीने न जाना ।
पाषाण परीक्षक की भाँति -
गुरु के बिना जो हैं उन्हें रहने दो -
जिनके गुरु हैं उनकी यही सचाई है
कूडलसंगमदेव ॥
Translated by: Banakara K Gowdappa
Telugu Translation సమరతి, సమకళ, సమసుఖస్వానుభావాధికము
తక్కువయని యెవ్వరూ చూడరు పాషాణ పరీక్షకునివలె
గురువు లేని వారివలె నుందుటో కూడల సంగయ్యా
గురుడున్న వాని నిజ మిట్లుండునయ్యా!
Translated by: Dr. Badala Ramaiah
Marathi Translation
समरसता, ज्ञान, भक्ती, स्वानुभाव यात श्रेष्ठ-कनिष्ठ कोणी जाणत नाही.
रत्नपारखीसारखे गुरु ज्यांचे आहेत.
कूडलसंगमदेवा,असे लोक सत्य जाणतात.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪರ್ಯಾಯವಾಗಿ ಪರಶಿವನ ಚಿತ್ಕಳೆಯೇ ಚಿಕ್ಕರೂಪದಲ್ಲಿ ಕೈಸಾರಿದ ಇಷ್ಟಲಿಂಗವೆಂಬ ಪತಿಯೊಡನೆ ಶರಣಸತಿಯು ಸಾಧಿಸುವ ಆತ್ಮೀಯ ಸಂಗವು ಸಮವೇಗ ಸಮಸಾಂದ್ರ ಸಮಸುಖ ಸಮಾನುಭಾವ ಉಳ್ಳುದು. ಅದು ಆ ಶರಣಸತಿಗೇ ವಿಶಿಷ್ಟವಾದುದು ಕೂಡ.
ಯಾವುದಾದರೊಂದು ಜೀವನು –ವಿದೇಹಿಯಾದ ಮೇಲೆ ಶಿವನಲ್ಲಿ ಅವಿರಳವಾಗಿ ಕೂಡಿ ಪಡೆಯುವ ಕೈವಲ್ಯಾನುಭೂತಿಯನ್ನೇ -ಶರಣನು ಸದೇಹಿಯಾಗಿಯೂ ಶಿವಪೂಜಾಸಂದರ್ಭದಲ್ಲಿ ಆಸ್ವಾದಿಸಬಲ್ಲನು.
ಅದಿರಿನಲ್ಲಿರುವ ಮಾಣಿಕ್ಯ ಆಕಾರದಲ್ಲಿ ಅದಿರಿಗಿಂತಲೂ ಚಿಕ್ಕದಾದರೂ ಅದರ ಕಲೆಯನ್ನೂ ಬೆಲೆಯನ್ನೂ ರತ್ನಪರೀಕ್ಷಕನೇ ಬಲ್ಲನೆಂಬಂತೆ –ದೈನಂದಿನ ಜೀವನದಲ್ಲೇ ಪಡೆಯಬಲ್ಲ ಅಖಂಡ ಪರಶಿವಬ್ರಹ್ಮಾನಂದವನ್ನು ಅದರ ಅನುಪಮ ಸುಖವನ್ನು, ಅದರ ಪೊಂಗನ್ನೂ ಪಾಂಗನ್ನೂ ಆ ಶರಣನೇ ಬಲ್ಲ.
ಶಿವನೊಡತಣ ಈ ಸಮರತಿ ಸಮಕಳೆ ಸಮಸುಖ ಸ್ವಾನುಭಾವದ ರಹಸ್ಯವನ್ನು ಗುರುವಿನಿಂದ ಕಂಡು ಸ್ವತಃ ಉಂಡ ಶರಣ ಜಾಣ, ಅವನ ಜೀವನ ಅತೀವ ಸೊಬಗಿನದು.
ವಿ : ಐಕ್ಯ ಪದವಿಯೆಂಬುದು ಸತ್ತ ಮೇಲೆ ಮಾತ್ರ ಪಡೆಯುಂಥದೆಂದು ಯಾರು ಭಾವಿಸಬಾರದು. ಆ ವಿದೇಹ ಸ್ಥಿತಿಯಲ್ಲಿ ಪಡೆಯಬಹುದಾದ ಪರಮಾನಂದ ಸುಖವನ್ನು ಸಜ್ಜನಜೀವನು ಶಿವಪೂಜಾಶಿವಯೋಗಕ್ಕೆಂದು ಕುಳಿತಲ್ಲಿಯೇ ಈ ಬದುಕಿರುವಾಗಲೇ ಪಡೆಯಲು ಸಾಧ್ಯವೆಂಬುದು ಈ ವಚನದ ಇಂಗಿತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು