•  
  •  
  •  
  •  
Index   ವಚನ - 929    Search  
 
ಐಕ್ಯನ ಜ್ಞಾನಿಸ್ಥಲ - ಶಿವಜ್ಞಾನ
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ: ಹಿಂದ ಬಿಟ್ಟು ಮುಂದೆ ಹಿಡಿಯಲೇಬೇಕು; ಕೂಡಲಸಂಗಮದೇವ, ಕೇಳಯ್ಯಾ; ಕಿಚ್ಚಿ ನಲ್ಲಿ ಕೋಲ ಬಯ್ಚಿಟ್ಟಂತಿರಬೇಕು!
Transliteration Guruśiṣya sambandhavādudakke idu cihna: Hinda biṭṭu munda hiḍiyalēbēku; kūḍalasaṅgamadēva, kēḷayya; kicci nalli kōla baiciṭṭantirabēku!
Manuscript
English Translation 2 This is the sign to show The bond of Guru and disciple Has been achieved: one has to leave The bygone and embrace What is to come.. Hear me. Kūḍala Saṅgama Lord: one has to be Like a stick buried in coal-fire! Translated by: L M A Menezes, S M Angadi
Hindi Translation गुरु शिष्य के संबंध का यही लक्षण है, गत को छोड भविष्य को अपनाना चाहिए सुनो, कूडलसंगमदेव । आग में लाठी छिपाने के समान होना चाहिए ॥ Translated by: Banakara K Gowdappa
Telugu Translation గురుశిష్య సంబంధమయ్యె ననుట కిదియే చిహ్నము వెనుకటిది విడచి; ముందును బట్టుకొనవలె వినుమో సంగయ్యా! నిప్పున కర్ర దాచినట్లుండవలెనయ్యా! Translated by: Dr. Badala Ramaiah
Marathi Translation गुरु शिष्य संबंधाचे हे लक्षण आहे. पूर्वाश्रय सोडून शिवपथ धरला पाहिजे. कूडलसंगमदेवा ऐकावे, अग्नीत दडलेल्या लाकडासम राहिले पाहिजे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿಷ್ಯನಿಗೆ ಗುರುವಿನ ಅನುಗ್ರಹವಾಗಿದೆಯೆನ್ನುವುದಕ್ಕೆ ಇರುವ ಸಾಕ್ಷಿಯೆಂದರೆ ಆ ಶಿಷ್ಯನು ತನ್ನ ಹಿಂದಿನ ಹೀನತೆಯನ್ನು ಕಳೆದುಕೊಂಡು ಸಂಪನ್ನತೆಯನ್ನು ಪಡೆದವನಾಗಿರಬೇಕು. ಮಾನವ ಘನತೆಗೆ ತಕ್ಕ ನಿಲುವು ಒಲವುಗಳನ್ನು ಅಳವಡಿಸಿಕೊಂಡಿರಬೇಕು. ಇದನ್ನೇ ಬಸವಣ್ಣನವರು -ಹಿಂದ ಬಿಟ್ಟು ಮುಂದೆ ಹಿಡಿದಿರಬೇಕು –ಎಂಬಂಥ ಆಡುನುಡಿಯಿಂದ ಸಶಕ್ತವಾಗಿ ಹೇಳಿರುವರು. ಹಿಂದನ್ನು ಹಿಡಿಯುವ ಪಶುತ್ವವನ್ನು ಬಿಟ್ಟು –ಮುಂದನ್ನು ಹಿಡಿಯುವ ಮಾನವ ನೈಪುಣ್ಯವನ್ನು ಮೆರೆದಾಗಲೇ –ಈ ಮಾನವತೆಗೊಂದು ಸುಭಗತೆ ಸಂದೀತು. ಕೆಂಡದಲ್ಲಿ ಹುದುಗಿಟ್ಟ ಕೋಲು ಎಂದಿನಂತೆ ಕಟ್ಟಿಗೆಯಾಗಿರದೆ ಕೆಂಡವೇ ಆಗಿರುವುದನ್ನು ಪರಿಭಾವಿಸಿದಾಗ ಶಿಷ್ಯನು ಗುರುವಿನ ಸಂಗಮಾಡಿ –ಏನೊಂದು ಜಾಜ್ವಲ್ಯಮಾನ ಪರವಸ್ತುವಾಗುತ್ತಾನೆಂಬುದು ತಿಳಿಯುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು