ಐಕ್ಯನ ಜ್ಞಾನಿಸ್ಥಲ - ಮುಕ್ತಿ
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿಯೆ ಬೆರಸಿದಂತಾಗದನ್ನಕ್ಕ?
Transliteration Liṅgava pūjisi phalavēnayyā,
samarati samakaḷe samasukhavanariyadannakka?
Liṅgava pūjisi phalavēnayyā,
kūḍalasaṅgamadēvara pūjisi
nadiyoḷage nadiye berasidantāgadannakka?
Manuscript
English Translation 2 What boots in your Liṅga worshipping
Uuless you have a common love,
A common art, a common joy.?
What boots your Liṅga-worshipping
Unless, by worship of Lord Kūḍala Saṅgama.
You merge in Him as stream in stream?
Translated by: L M A Menezes, S M Angadi
Hindi Translation लिंग-पूजा से क्या लाभ,
जब तक कि समरति,समकला, समसुख नहीं जानते?
लिंग-पूजा से क्या लाभ,
जब तक कि कूडलसंगमदेव को पूजकर
जैसे नदी में नदी मिलती है वैसे न मिलते?
Translated by: Banakara K Gowdappa
Telugu Translation లింగమునుగొల్వ ఫలమేమి? సమరతి సమకళ
సమ సుఖము కల్గనందాక? లింగమును పూజించి ఫలమేమి?
ఆ సంగని గొలిచి నది నదిని కలిపినట్లుండనందాక
Translated by: Dr. Badala Ramaiah
Marathi Translation
लिंगोपासनेचे प्रयोजन काय देवा?
समरसता, ज्ञान, भक्ती जाणल्याविना
लिंगोपासनेचे प्रयोजन काय देवा ?
कूडलसंगमदेवाची
पूजा करणे नदीत नदी संगम होईपर्यंत ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾವು ಯಾವುದನ್ನು ಪೂಜಿಸುತ್ತೇವೋ ಅದೇ ನಾವಾಗಬೇಕು –ಎಂಬ ಹಂಬಲ ಬಲವಾಗಿರಬೇಕು. ಇಲ್ಲದಿದ್ದರೆ ಅದು ಪೂಜೆಯಲ್ಲ –ಕೇವಲ ರೂಢಿಯ ಅಂಧಾನುಕರಣ, ಅರ್ಥವಿಲ್ಲದ ಹಗರಣ.
ಲಿಂಗಪೂಜೆ ಮಾಡುತ್ತ ಕುಳಿತವನಿಗೆ ಈ ಲಿಂಗವೇ ಸೃಷ್ಟಿಗೆಲ್ಲ ಪರಮಕಾರಣ-ಅದರ ಅಂಶವಾದ ನಾನು-(ನನ್ನದೆಂಬ ಈ ಅಂಗದ ಕಾರಣದಿಂದಾಗಿಯೇ) ಈ ಲಿಂಗದಿಂದ ಬೇರಾಗಿ ನವೆಯುತ್ತಿರುವೆನು –ಎಂದು ಆ ವಿರಹ ವ್ಯಥೆಯನ್ನು ಕಳೆಯಲು ತನ್ನ ಅಂಗವನ್ನೇ ಲಿಂಗಕ್ಕೆ ಪ್ರಿಯವಾಗುವಂತೆ ಸೇವೆಯಲ್ಲಿ ಸಜ್ಜುಗೊಳಿಸಬೇಕು –ಈ ಸಡಗರ ಉಂಟಾದರೆ –ಅದು ಪೂಜೆ.
ಶಿವನಿಂದ ಅಗಲಿದ ಜೀವನು ಮರಳಿ ಶಿವನನ್ನು ಕೂಡಲು ಪಡುವ ಪಾಡೇ ಪೂಜೆ, ಕಪಿಲೆ ಕಾವೇರಿಯಲ್ಲಿ ಕೂಡಿದ ಮೇಲೆ -ಹರಿಯುವುದು ಕಾವೇರಿಯೊಂದೆ -ಹಾಗೆ ನಾವು ಶಿವನಲ್ಲಿ ಕೂಡಿ –ಜಗವೆಲ್ಲ ಶಿವಮಯವಾಗಬೇಕು –ಅದು ಪೂಜೆ.
ಸುರಿದ ಒಂದೇ ಮಳೆಯಿಂದ ಹರಿದ ನೀರು ಎರಡು ನದಿಯಾಗಿ –ಮರಳಿ ಪರಸ್ಪರ ಸಂಗಮಿಸುವ ಹೃದಯಂಗಮಕ್ರಿಯೆ ಪೂಜೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು