•  
  •  
  •  
  •  
Index   ವಚನ - 932    Search  
 
ಐಕ್ಯನ ಐಕ್ಯಸ್ಥಲ - ದೇವರು
ಆ ಭಸ್ಮ ತಾಗಿ ಬ್ರಹ್ಮ ತನ್ನ ಕಪಾಲವಿಡಿದನು; ಗಣನಾಥನ ಐವತ್ತೆರಡು ಸರ ಹರಿದು ಬಿದ್ದವು! ಆ ಭಸ್ಮ ತಾಗಿ ಅಂಡಜಮುಗ್ಧೆಯ ಮೂರು ಮೊಲೆ ಹರಿದು ಬಿದ್ದುವು; ನಾದಪ್ರಿಯ ನಂದಿಯನೇರಿಕೊಂಡು ಅತೀತನ ಮೇಲೆ ಆನಂದ ಸಿಂಹಾಸನವಿಕ್ಕಿ ಕುಳ್ಳಿತ್ತ; ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು!
Transliteration Ā bhasma tāgi brahma tanna kapālaviḍidanu; gaṇanāthana aivatteraḍu sara haridubiddavu! Ā bhasmatāgi aṇḍajamugdheya mūru moḷe haridu biddavu; nādapriya nandiyanērikoṇḍu atītana mēle ānandasinhāsanavikki kuḷḷitta; kūḍalasaṅgamadēvara dēvatva keṭṭittu!
Manuscript
English Translation 2 Touching this ash, Brahma held up His bowl of skull; the two-and-fifty strings Of Gaṇanātha tore and fell; Touching the ash, the triple breasts Of the Egg-born imbecile tore and fell; The lover of Nāda, mounting on his bull, Set up his throne of joy In the Beyond and sat thereon; Godhood of Lord Kūḍala Saṅgama was undone! Translated by: L M A Menezes, S M Angadi
Hindi Translation उस भस्म स्पर्श से ब्रह्मने अपना कपाल पकडा । गणनाथ की बावन मालाएँ टूटकर बिखर गईं । उस भस्म के स्पर्श से अंडज-मुग्धा के तीन स्तन कटकर गिर गये। नादप्रिय नंदी पर आरूढ होकर, अतीत पर आनंद-सिंहासन रखकर आसीन हुआ, कूडलसंगमदेव का देवत्व नष्ट हुआ ॥ Translated by: Banakara K Gowdappa
Telugu Translation ఆ భస్మమంట బ్రహ్మ తన కపాలము పట్టె గణనాధుని యాభై రెండు దండలు తెగిపడె ఆ భస్మముదాక ఆండజముగ్ధకు మూడు చన్నులూడిపడె నందినెక్కి నాదప్రియు డతీతునిపై ఆనంద సింహాసనము పెట్టి కూర్చొనే సంగమదేవుని దివ్యత్వము చెడె. Translated by: Dr. Badala Ramaiah
Marathi Translation ते भस्म धारण केल्याने ब्रह्म कपालधारी झाला. गणनाथाचे बावन्न हार तुटून पडले. ते भस्म लागल्याने अंडजमुग्धाचे तीन स्तन तुटून पडले. नादप्रिय नंदीवर बसलेले आनंद सिंहासनावर बसले. त्यामुळे कूडलसंगमदेवाचे देवत्त्व कमी झाले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತ್ರಿಗುಣಾತ್ಮಕವಾದ ಈ ಪ್ರಕೃತಿಗೆ ಪರಮ ಜ್ಞಾನಾಗ್ನಿಯನ್ನು ಮುಟ್ಟಿಸಿದಾಗ ಎದ್ದ ಉರಿಹೊಗೆ ಮಹೇಶ್ವರ-ವಿಷ್ಣು-ಬ್ರಹ್ಮ-ರುದ್ರ ಮತ್ತು ಮಿಕ್ಕ ದೇವತೆಗಳ ಪಾಳೇಪಟ್ಟಿಗೆ ಒಳಪಟ್ಟು ಅಂಗಗುಣ ಮತ್ತು ಜೀವಭಾವ ಭಸ್ಮವಾಯಿತು. ಯಾರ ಹಾವಭಾವದಿಂದ ಇಡೀ ಈ ಸೃಷ್ಟಿ ವಿಕಸಿತವಾಯಿತೋ – ಆ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿಯರು ಐವರೂ ಸುರುಳಿ ಸುತ್ತಿ ಶಿವನೊಳಗಾದರು. ಶಿವನು ಭಸ್ಮಧಾರಿಯಾಗಿ ಭೈರಾಗಿಯಾದ. ಆವಿಷ್ಕಾರಗೊಂಡ ವಿಶ್ವವನ್ನು ಮರಳಿ ಶಿವನು ತನ್ನಲ್ಲಿ ಉಪಸಂಹರಿಸಿಕೊಳ್ಳುವ ಅವನ ಲೀಲೆಯನ್ನು ಈ 932ನೇ ವಚನದಲ್ಲಿ ಬೆಡಗಿನಿಂದ ಚಿತ್ರಿಸಲಾಗಿದೆ. ನಾಲ್ವರು ಹೊತ್ತು ತಂದ ಶವವು ಆ ನಾಲ್ವರು ಸಹಿತವಾಗಿ ದಹನವಾದ ಒಂದು ಅಪೂರ್ವ ಅಂತ್ಯ ಸಂಸ್ಕಾರದ ಪ್ರತಿಮೆ ಈ ವಚನದಲ್ಲಿ ಅಡಗಿರುವುದನ್ನು ಗುರುತಿಸಿ. ವಿ : ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು ಎಂಬ ಮಾತನ್ನು ಗಮನಿಸಿ. 1. ಬ್ರಹ್ಮ ತನ್ನ ಕಪಾಲವಿಡಿದನು 2. ಗಣನಾಥನ 52 ಸರಿ ಹರಿದು ಬಿದ್ದವು 3. ಅಂಡಜಮುಗ್ದೆಯ 3 ಮೂಲೆ ಹರಿದು ಬಿದ್ದವು 4. ನಾದಪ್ರಿಯ ನಂದಿಯನೇರಿಕೊಂಡ 5. ಕೂ.ಸಂ. ದೇವರ ದೇವತ್ವ ಕೆಟ್ಟಿತ್ತು ಶಿವನು ನಟರಾಜನಾಗಿ ಮಾಡಿದ ವಿಲಯದ ಒಂದು ಚಿತ್ರ 933ನೇ ವಚನದ ಮೇಲೆಣ ಸಾಲುಸಾಲಿನಲ್ಲಿ ಬಣ್ಣಬಣ್ಣವಾಗಿ ವರ್ಣಿತವಾಗಿದೆ. ಮೇಲಿರುವ ಸಾಲುಗಳನ್ನು ಕ್ರಮವಾಗಿ ಈ ಮುಂದಿನಂತೆ ಒಡಚಬಹುದು : 1. ಸೃಷ್ಟಿಕರ್ತನು ತಲೆಗೆ ಕೈಕೊಟ್ಟು ಕುಳಿತನು. 2. ಜೀವನ ವರ್ಣಮಯ (ಅಕ್ಷರ) ವ್ಯವಹಾರ ವಿಸ್ತಾರ ಉಡುಗಿತು. 3. ಮಾಯೆಯ ತ್ರಿಗುಣಾತ್ಮಕ ವಿಲಾಸ ಕೊನೆಗೊಂಡಿತು. 4. ಶಿವನು ಸ್ವಸ್ಥಾನಾದ. 5. ಅಲ್ಲಿಗೆ ದೇವತ್ವ –ಜೀವತ್ವದ ವ್ಯವಸ್ಥೆ ನಿರ್ನಾಮವಾಯಿತು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು