ಐಕ್ಯನ ಐಕ್ಯಸ್ಥಲ - ಅಸಹಾಯಕತೆ
ನಾನೊಮ್ಮೆ ಬೇಂಟೆಯ ಹೋದರೆ ಭಸಿತಕ್ಕಾಹುತಿಯನಿಕ್ಕಿಹೆನೆಂದು
ಸಾಸಿರದೇಳುನೂರು ವರುಷ ಒಬ್ಬ ರಾಜನ ಕೊಂದೆನು.
ಅವನ ಹೆಂಡತಿ ಐವತ್ತೆರಡು ಕಣ್ಣುಳ್ಳವಳು:
ಅವಳು ತನ್ನ ಹೂಮುಡಿಯ ಬಿಟ್ಟು ಅತ್ತಾಳು.
ಅವಳ ಬಾಯಲ್ಲಿ ಅಜ ಬಿದ್ದ, ಕಂಗಳಲಿ ಧೂಮಕೇತು ಬಿದ್ದ;
ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು!
Transliteration Nānom'me bēṇṭeya hōdare bhasitakkāhutiyanikkihenendu
sāsiradēḷunūru varuṣa obba rājana koṇḍenu.
Avana heṇḍati aivatteraḍu kaṇṇuḷḷavaḷu:
Avaḷu tanna hūmuḍiya biṭṭu attāḷu.
Avaḷa bāyalli aja bidda, kaṅgaḷalli dhūmakētu bidda;
kūḍalasaṅgamadēvara dēvatva keṭṭittu!
Manuscript
English Translation 2 When once I went a-hunting, I did kill
A king seventeen hundred years of age,
Hoping that I would put him in the fire
For ash; his wife has two-and-fifty eyes;
She dropped her flower-decked hair and wept.
The unborn fell from out her mouth;
From out her eyes a meteor fell:
Godhood of Lord Kūḍala Saṅgama was undone!
Translated by: L M A Menezes, S M Angadi
Hindi Translation भस्मार्थ आहुति देने के लिए
मैं एक बार मृगया खेलने गया
सत्रह सौ वर्षों के एक राजा को मार डाला,
उसकी पत्नी बावन नेत्रोंवाली थी ।
वह अपनी पुण्यालंकृत वेणी खोलकर रो पडी ।
उसके मुँह से अज गिरा, नेत्रों से धूमकेतु,
कूडलसंगमदेव का देवत्व नष्ट हुआ ॥
Translated by: Banakara K Gowdappa
Telugu Translation నేనొక పరివేటకు పోవ భస్మాహుతికినై
వెయ్యీ ఏడు నూరేండ్ల కొక రాజును చంపితి
వాని భార్య యాభై రెండు కండ్లుగలది
అది తన పూలకొప్పు విప్పుకొని యేడ్చె; దాని నోటిలోబడే అజుడు
కన్నుల ధూమకేతువుపడె; చెడె సంగమదేవుని దివ్యత్వము
Translated by: Dr. Badala Ramaiah
Marathi Translation
मी एकदा शिकार करण्यास गेलो.
सतराशे वर्षे वयाच्या राजाला मारले.
त्याचे जाळून भस्म करण्याचे ठरविले.
त्याची पत्नी बावन्न डोळ्यांची होती.
ती आपले सुशोभित केस सोडून रडू लागली.
तिच्या मुखात अज पडला, डोळ्यात धूमकेतू पडला.
त्यामुळे कूडलसंगमदेवाचे देवत्त्वच नष्ट झाले.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ಸಂಸಾರಾರಣದಲ್ಲಿ ಜೀವನಾಡುವ ಅತ್ಯಂತ ಸಾಹಸಮಯವಾದ ಬೇಟೆಯೆಂದರೆ ಶಿವನಿಗೆ ತಾನು ಸಿಕ್ಕಿ ಬೀಳುವುದು. ಅದಕ್ಕೆ ಜೀವನು ಮೊಟ್ಟಮೊದಲಿಗೆ ಮಾಡಬೇಕಾದ ಶಾಂತಿಕ್ರಿಯೆಯೆಂದರೆ–ತನ್ನ ಮೇಲೆ ಪ್ರಭುತ್ವವನ್ನು ಸಾಧಿಸಿ ನಿರಂಕುಶವಾಗಿ ಆಳುತ್ತಿರುವ ಅಹಂಕಾರರಾಜನನ್ನು ಬಲಿಕೊಡಬೇಕು. ಈ ಕಾರ್ಯ ಒಂದೇ ಏಟಿಗೆ ನಡೆಯುವುದಿಲ್ಲ. ಹಲವು ಜನ್ಮಾಂತರಗಳಲ್ಲಿ ಪಡೆದ ಗುರಿ ಮತ್ತು ಮಸೆದ ಹರಿತದಿಂದ ಮಾತ್ರ ಸಾಧ್ಯವಾದೀತು.
ಈ ಅಹಂಕಾರ ನರಪತಿಯ ಸತಿ ಮಾಯಾದೇವಿ. 52 ವರ್ಣಮಾಲೆಯ ಶಬ್ದಜಾಲವೇ ಅವಳ ದರ್ಶನ ವೈಖರಿ, ವಾಸನಾಬದ್ಧ ವಿಕಾರವೇ ಅವಳ ಕೇಶವಿಸ್ತಾರ–ಆದುದರಿಂದಲೇ ಅವಳಿಗೆ ಐವತ್ತೆರಡು ಕಣ್ಣೆಂದೂ, ಅವಳದು ಹೂಮುಡಿಯೆಂದೂ ವಚನದಲ್ಲಿ ವರ್ಣಿಸಲಾಗಿದೆ.
ಅವಳು ತನ್ನ ಗಂಡ ಅಹಂಕಾರ ರಾಜನು ಸತ್ತಾಗ ಭೂಮ್ಯಾಕಾಶಗಳು ಒಂದಾಗುವಂತೆ ಬಾಯಿಮಾಡಿ ಅತ್ತಳು. ಅಳುವ ಅವಳ ಬಾಯಲ್ಲಿ ಬ್ರಹ್ಮ ಬಿದ್ದನು (ಬಾಯಿಂದ ಉಚ್ಚರಿಸುವ ವೇದವಿದ್ಯೆಗೆ ಬ್ರಹ್ಮನು ಒಡೆಯನಾಗಿ–ಆ ಮಾಯಾದೇವಿಯ ಬಾಯಲ್ಲಿ ಬಿದ್ದು ಸತ್ತನೆಂಬುದು ಧ್ವನಿಪೂರ್ಣವಾಗಿದೆ) ವಿಷ್ಣು ಅವಳ ಕಣ್ಣಲ್ಲಿ ಬಿದ್ದು ಸತ್ತನು (ಈ ಪ್ರಕೃತಿಯ ಸ್ಥಿತಿಗತಿಗೆ ಕಾರಣನಾದ ವಿಷ್ಣು ನೀಲಮೇಘಶ್ಯಾಮನೂ ನೀಲಾಂಬರಧಾರಿಯೂ ಆಗಿ –ಅವನನ್ನು ಧೂಮಕೇತುವೆಂದಿರುವುದೂ, ದೃಶ್ಯಮಾನವಾದ ಪ್ರಕೃತಿಯ ಪಾಲಕನಾದ ಆ ವಿಷ್ಣು ಮಾಯಾದೇವಿಯ ಕಣ್ಣಲ್ಲಿ ಬಿದ್ದು ಸತ್ತನೆಂಬುದೂ ಅರ್ಥವತ್ತಾಗಿಯೇ ಇದೆ).
ಆಗ ಮಾಯಾದೇವಿಯೂ ಅವಿಯಾಗಿ ಶುದ್ಧವಿದ್ಯೆಯಾಗಿ ಶಿವನಲ್ಲಿ ಅಡಗಿದಳು, ಅಂದರೆ ನಾಮರೂಪಾತ್ಮಕವಾದ ಈ ಪಾಂಚ ಭೌತಿಕ ಪ್ರಕೃತಿ ವಿಸ್ತಾರವೆಲ್ಲಾ ಶಿವನಲ್ಲಿ ಉಪಸಂಹರಿಸಿತು. ಆಗ ಆ ಶಿವನು ದೇವ-ಜೀವರೆಂಬ ತನ್ನ ದ್ವಂದ್ವಲೀಲೆಯನ್ನು ನಿಲ್ಲಿಸಿ ಏಕಮೇವಾದ್ವಿತೀಯ ಪರಶಿವನಾದನು. ಜೀವನು ಶಿವನಲ್ಲಿ ಸಿಕ್ಕಿಬಿದ್ದನು.
ವಿ : ಶರಣರಲ್ಲಿ ರೇವಣಸಿದ್ಧ ಮುಂತಾದ ಕೆಲವರು ಲೋಕದ ಕಣ್ಣಿಗೆ ಕಾಣಿಸಿಕೊಂಡು 700 ವರ್ಷ ಕಾಣಿಸದೇ 700 ವರ್ಷ ಜೀವಿಸಿರುವರೆಂಬ ನಂಬಿಕೆಯೊಂದಿದೆ. ಇದರ ಪ್ರಕಾರ 700 ವರ್ಷವು ಜೀವಿತಾವಧಿಯ ಅಳತೆಯ ಒಂದು ಗರಿಷ್ಠಮಾನವಾಗುವುದು. ಇಂಥ ಸಾವಿರಾರು 700 ವರ್ಷಗಳ ದೀರ್ಘಾವಧಿಯಲ್ಲಿ ಛಲಹಿಡಿದು ಈ ಅಹಂಕಾರ ರಾಜನನ್ನು ಕೊಲ್ಲಲಾಯಿತೆಂಬುದು-“ಸಾಸಿರದೇಳು ನೂರು ವರ್ಷ ಒಬ್ಬ ರಾಜನ ಕೊಂದೆ”ನೆಂಬ ಮಾತಿಗರ್ಥ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು