ಐಕ್ಯನ ಐಕ್ಯಸ್ಥಲ - ಬ್ರಾಹ್ಮಣಿಕೆ
ಶಿವ ಶಿವಾ, ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ:
ಸತ್ಯಶುದ್ಧವುಳ್ಳವಂಗೆ ಗುರುವಿಲ್ಲ,
ಸತ್ಯಶುದ್ಧವುಳ್ಳವಂಗೆ ಲಿಂಗವಿಲ್ಲ,
ಸತ್ಯಶುದ್ಧವುಳ್ಳವಂಗೆ ಜಂಗಮವಿಲ್ಲ,
ಸತ್ಯಶುದ್ಧವುಳ್ಳವಂಗೆ ಪ್ರಸಾದವಿಲ್ಲ,
ಸತ್ಯಶುದ್ಧವುಳ್ಳವಂಗೆ ಗಣತ್ವವಿಲ್ಲ, ಕೇಳಿರೆ,
ಸತ್ಯಶುದ್ಧ ದೇವರಿಗೆ ಉಪಚಾರವುಂಟು;
ಸತ್ಯಶುದ್ಧ ದೇವರಿಗೆ ಧ್ಯಾನ, ಮೌನ, ಅನುಷ್ಠಾನವುಂಟು;
ಸತ್ಯ-ಶುದ್ಧ ಉಪದೇಶಕ್ಕೆ ಜಪ, ತಪ, ಸಂಜೆ, ಸಮಾಧಿ
ಹೋಮ, ನೇಮ, ನಿತ್ಯ, ಅಷ್ಟವಿಧಾರ್ಚನೆ, ಷೋಡಶೋಪಚಾರವುಂಟು!
ಆದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ!
ಇವರೆಲ್ಲ ಬ್ರಹ್ಮನಮಕ್ಕಳು!
ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ;
ಆವ ಸಹಜವೂ ಇಲ್ಲದ ಲಿಂಗೈಕ್ಯ, ಕಾಣಾ,
ಕೂಡಲಸಂಗಮದೇವಾ.
Transliteration Śivaśiva, mūrtige satyaśud'dha uṇṭembiri:
Satyaśud'dhavuḷḷavaṅge guruvilla,
satyaśud'dhavuḷḷavaṅge liṅgavilla,
satyaśud'dhavuḷḷavaṅge jaṅgamavilla,
satyaśud'dhavuḷḷavaṅge prasādavilla,
satyaśud'dhavuḷḷavaṅge gaṇatvavilla, kēḷire,
satyaśud'dha dēvarige upacāravuṇṭu;
satyaśud'dha dēvarige dhyāna, mauna, anuṣṭhānavuṇṭu;
satya-śud'dha upadēśakke japa, tapa, san̄je, samādhi
hōma, nēma, nitya, aṣṭavidhārcane, ṣōḍaśōpacāravuṇṭu!
Āda kāraṇa intappa satyaśud'dha guruviṅge śaraṇenne,
intappa satyaśud'dha liṅgakke śaraṇenne,
intappa satyaśud'dha jaṅgamakke śaraṇenne,
intappa satyaśud'dha prasādakke kaiyāne!
Ivarella brāhmaṇamakkaḷu!
Enage satyavū illa, asatyavū illa;
āva sahajavū illada liṅgaikya, kāṇā,
kūḍalasaṅgamadēvā.
Manuscript
English Translation 2 Good God, you say
The Person has both truth and purity,
The true and pure no Guru have,
Nor Liṅga, Jaṅgama , or Prasāda ,
Nor Godhead, if you hearken me!
The true and pure God has the service;
And meditation, too
Silence and worshipping,
Beads, Penance, evening prayer,
Trance, sacrifice by fire,
Vows, daily practices
And eightfold worship and sixteenfold rites!
Therefore, I don't say Hail
To such a Guru, True and pure,
Nor such a Liṅga or Jaṅgama,
Both true and pure, Nor stretch my hand
To such Prasāda , true and pure!
They are Brahma's brood!
Nor being nor non-being if for me,
But union free from every attribute:
Mark that,Kūḍala Saṅgama Lord!
Translated by: L M A Menezes, S M Angadi
Hindi Translation सत्य-शुद्ध का मानव मनुज
शिव शिव, तुम कहते हो मूर्ति में सत्यता एवं शुद्धता है
जो सत्य-शुद्ध है उसका गुरु नहीं ।
जो सत्य-शुद्ध है उसका लिंग नहीं ।
जो सत्य-शुद्ध है उसका जंगम नहीं ।
जो सत्य-शुद्ध है उसका प्रसाद नहीं ।
जो सत्य-शुद्ध है उसका गणत्व नहीं ।
सत्य-शुद्ध देव के लिए उपचार है ।
सत्य-शुद्ध देव के लिए ध्यान, मौन, अनुष्ठान हैं ।
सत्य-शुद्ध उपदेश के लिए जप, तप, संध्या, समाधि हैं।
होम, नेम, निन्य, अष्टविधार्चन, षोडशोपचार हैं ।
अतः ऐसे सत्य-शुद्ध गुरु को प्रणाम न करूँगा ।
ऐसे सत्य-शुद्ध लिंग को प्रणाम न करूँगा ।
ऐसे सत्य-शुद्ध जंगम को प्रणाम न करूँगा ।
ऐसे सत्य-शुद्ध प्रसाद के लिए हाथ न पसारूँगा ।
ये सब ब्रह्म के पुत्र हैं ।
मेरे लिए न सत्य है, न असत्य
सहजता ही, न लिंगैक्य हूँ कूडलसंगमदेव॥
Translated by: Banakara K Gowdappa
Telugu Translation శివశివామూర్తి కి సత్యశుద్ధి కలదంటిరి
సత్యశుద్ధికలవానికి గురువులేడు
సత్యశుద్ధి కలవానికి లింగము లేదు.
సత్యశుద్ధి కలవానికి జంగమము లేదు
సత్యశుద్ధి కలవానికి ప్రసాదము లేదు
సత్యశుద్ధి కలవానికి గణత్వము లేదు; వినుడయ్యా
సత్యశుద్ధ దేవునికి ఉపచారముండె; సత్యశుద్ధ దేవునకు
ధ్యానమౌన అనుష్టాములు కలవు; సత్యశుద్ద ఉపదేశమునకు
జపతప సంధ్యసమాధి హోమ నియమ నిత్య అష్ట విధార్చన
షోడశోపచారములు కలవు కానీ యీ సత్యశుద్ద
గురువనకు శరణనను ఇట్టి సత్యశుద్ద లింగమునకు శరణనను
ఇట్టి సత్యశుద్ధ జంగమునకు శరణనను
ఇట్టి సత్యశుద్ధ ప్రసాదమునకు చేసాపలేను
వీరందరూ బ్రహ్మబిడ్డలు నాకు సత్యమూ లేదు అసత్యమూ లేదు
ఏ సత్యమూలేని లింగై క్యుడసుమీ! కూడల సంగమదేవా!
Translated by: Dr. Badala Ramaiah
Marathi Translation
शिवशिवा ! मूर्तीला (देह) सत्यशुध्द संपन्न म्हणतात.
सत्य असणाऱ्याला गुरु नाही.
सत्य असणाऱ्याला लिंग नाही.
सत्य असणाऱ्याला जंगम नाही.
सत्य असणाऱ्याला प्रसाद नाही.
सत्य असणाऱ्याला गणत्त्व नाही
ऐका सत्य शुध्द देवाचे उपचार आहेत.
सत्य शुध्द देवाला ध्यान, मौन, अनुष्ठान आहे.
सत्य शुध्द उपदेशाला जप-तप-संध्या-समाधी-होम-
नित्यनेम-अष्टविधार्चना-षोडशोपचार आहे.
सत्य शुध्द देवाला उपचार असल्यामुळे
अशा सत्यशुध्द गुरुला वंदन करीत नाही.
अशा सत्यशुध्द लिंगाला वंदन करीत नाही.
अशा सत्यशुध्द जंगमाला वंदन करीत नाही.
अशा सत्यशुध्द प्रसादाला हात पसरत नाही.
ही सर्व ब्रह्माची मुले मला सत्यही नाही, असत्यही नाही.
सहजतेविना लिंगैक्य पहा कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸತ್ಯಶುದ್ಧವೆಂದರೆ ಅಮೂರ್ತವೆಂದೂ ನಿರ್ಗುಣವೆಂದೂ ನಿರಾಕಾರವೆಂದೂ, ಸತ್ಯಾಶುದ್ಧವೆಂದರೆ ಮೂರ್ತವೆಂದೂ ಸಗುಣವೆಂದೂ ಸಾಕಾರವೆಂದೂ ಅರ್ಥೈಸದಿದ್ದರೆ ಈ ವಚನ ಅಬದ್ಧವೆನಿಸುತ್ತದೆ.
ಇಂಥ ಸಗುಣ ಬ್ರಹ್ಮ(ಈಶ್ವರ)ನನ್ನು ಉಪಾಸಿಸಲು ಜಪ-ತಪ-ಸಂಜೆ-ಸಮಾಧಿ-ಹೋಮ-ಅಷ್ಟ ವಿಧಾರ್ಚನೆ ಮುಂತಾದ ಉಪಚಾರಗಳೆಲ್ಲಾ ಅವಶ್ಯಕ. ಇವನ್ನೆಲ್ಲ ಮೀರಿ ಮಾಡುವ ಉಪಾಸನೆಯೇ ನಿರ್ಗುಣೋಪಾಸನೆ–ಇದು ತನ್ನಿಂದ ತಾನೇ ನಿಷ್ಪನ್ನವಾಗುವ ಅನುಭಾವ ವಿಶೇಷ.
ಸಾಕಾರ ಗುರುವಾದರೂ ಬೋಧಿಸುವುದು ಸಾಕಾರೋಪಾಸನೆಗೆ ಹೊಂದಿಕೆಯಾಗುವ ಜಪಹೋಮ ಅಷ್ಟವಿಧಾರ್ಚನೆಗಳನ್ನೇ, ಈ ಸಾಕಾರೋಪಾಸನೆಯಿಂದ ಪೂಜೆಗೊಳ್ಳುವ ಲಿಂಗವಾಗಲಿ, ಇದಿರ್ಗೊಳ್ಳುವ ಜಂಗಮವಾಗಲಿ, ಪಡೆದುಕೊಳ್ಳುವ ಪ್ರಸಾದವಾಗಲಿ -ಅತೀಂದ್ರಿಯ ಅತಿಮಾನಸವೆಂಬಷ್ಟು ಆತ್ಯಂತಿಕವಲ್ಲ. ಆದರೂ ಅವುಗಳ ಮೂಲಕವೇ ಅವನ್ನೆಲ್ಲ ಮೀರಿ -ನಾದಬಿಂದುಕಳಾತೀತವಾದ ನಿರ್ಗುಣ ಪರಬ್ರಹ್ಮ ಪರಶಿವನನ್ನು ಸಚ್ಚಿದಾನಂದೈಕವಾಗಿ ತನ್ನಲ್ಲಿ ತಾನೇ ತಾನಾಗಿ ಸಾಕ್ಷಾತ್ಕರಿಸಿಕೊಳ್ಳದಿದ್ದರೆ ಜೀವವು ತನ್ನೆಲ್ಲ ಶಿವಸಾಧ್ಯತೆಗಳನ್ನು ಸಿದ್ಧಿಸಿಕೊಂಡಂತಾಗುವುದಿಲ್ಲ.
ಜೀವನು ತನ್ನ ದೇಹ-ಕರ್ಮೇಂದ್ರಿಯ-ಜ್ಞಾನೇಂದ್ರಿಯ-ಅಂತಃಕರಣ ಚತುಷ್ಟಯಗಳನ್ನು ಅಧಿಕರಿಸಿಕೊಂಡೇ ಅದನ್ನು ಮೀರಿ ನಿಂತಾಗ ಆ ಜೀವನು ತನ್ನೆತ್ತರಕ್ಕೆ ಬೆಳೆದು ತನ್ನಿಂಧನ್ಯವಾದುದಿನ್ನೊಂದಿಲ್ಲವೆಂಬ ಶಿವೋಹಂಸ್ಥಿತಿಯನ್ನು ತಲುಪುವನು.
ಆದುದರಿಂದಲೇ ಬಸವಣ್ಣನವರು ಸಾಕಾರ ಪ್ರಾಂತ್ಯಾಧಿಕಾರಕ್ಕೆ ಒಳಪಡದೆ ಗುರು-ಲಿಂಗ-ಜಂಗಮ-ಪ್ರಸಾದವನ್ನು -ನಿಸ್ಸೀಮರಲ್ಲಿ ನಿರ್ಗುಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಕ್ರಾಂತದರ್ಶನಕ್ಕಾಗಿ ಕಾತರಿಸುತ್ತಿರುವರು.
ವಾಸ್ತವವಾಗಿ ಅವರ ದೃಷ್ಟಿಯಲ್ಲಿ ಗುರುವೆಂದರೆ ಕಲ್ಲುಲಿಂಗವನ್ನು ಕೊಟ್ಟವನಲ್ಲ, ಲಿಂಗವೆಂದರೆ ಸ್ನಾನ ಮಾಡಿಸಿಕೊಳ್ಳುವ ವಸ್ತ್ರಾಭರಣದಿಂದ ಅಲಂಕಾರಗೊಳ್ಳುವ, ಪಂಚಭಕ್ಷ್ಯಗಳನ್ನು ಉಣ್ಣುವ, ತಾಂಬೂಲವನ್ನು ಮೆಲ್ಲುವ ರೂಢಿಯ ವಸ್ತುವಲ್ಲ, ಜಂಗಮವೆಂದರೆ ಪ್ರಸಾದವನ್ನು ಕೊಡುವ ಅನ್ನಛತ್ರದೊಡೆಯನಲ್ಲ. ಪ್ರಸಾದವೆಂದರೆ ಹೊಟ್ಟೆ ತುಂಬುವ ಹಿಟ್ಟುರೊಟ್ಟಿಯಲ್ಲ.
ಆ ಗುರು-ಲಿಂಗ-ಜಂಗಮ-ಪ್ರಸಾದಗಳು ದಿವ್ಯಜೀವನಮಾರ್ಗವೂ ಹೌದು, ಆ ಮೂಲಕ ತಲುಪಬೇಕಾದ ಪರಂಧಾಮವೂ ಹೌದು, ಅವು ಬಸವಣ್ಣನವರಿಗೆ ಈ ವ್ಯಾಪ್ತಿಯಲ್ಲಿಯೇ ಸೇವ್ಯವಾಗಿದ್ದವು.
ಬಸವಣ್ಣನವರು ಕರ್ಮಠತೆಯನ್ನು ಖಂಡಿಸುವರೆಂದರೆ –ಕೇವಲ ವ್ಯಾವಹಾರಿಕವಾಗಿಯೇ ಉಳಿಯುವ ಈ ಗುರು-ಲಿಂಗ-ಜಂಗಮ-ಪ್ರಸಾದಗಳೂ –ಆ ಖಂಡನೆಗೆ ಒಳಪಡುವವು.
ಈ ನಿರ್ಗುಣೋಪಾಸನೆಯ ಕಾವನ್ನು ಪಡೆದ ಸಗುಣೋಪಾಸನೆಯ ಪರಿಸರದಲ್ಲಿ –“ಆವ ಸಹಜವೂ ಇಲ್ಲದ ಲಿಂಗೈಕ್ಯವೇ ಕೂಡಲ ಸಂಗಮದೇವನಾಗಿರುವ”ನೆಂಬ ಬಸವಣ್ಣನವರ ಮಾತನ್ನು ಈ ಎಲ್ಲ ಅರ್ಥದಲ್ಲಿ ಗ್ರಹಿಸಬೇಕಾಗುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು