•  
  •  
  •  
  •  
Index   ವಚನ - 936    Search  
 
ಐಕ್ಯನ ಭಕ್ತಸ್ಥಲ - ತ್ರಿವಿಧ ದಾಸೋಹ
ಭಕ್ತನಾಯಿತ್ತೆ ಭಕ್ತಿದಾಸೋಹ; ಯುಕ್ತನಾಯಿತ್ತೆ ಯುಕ್ತಿದಾಸೋಹ ಐಕ್ಯನಾಯಿತ್ತೆ ಮಮಕಾರ ದಾಸೋಹ! ಸರ್ವದಲ್ಲೂ ದಾಸೋಹವೆ ಬೇಕು: ಈ ದಾಸೋಹದ ಅನುವ ಕೂಡಲಸಂಗಯ್ಯ ತಾನೇ ಬಲ್ಲ.
Transliteration Bhaktanāyitte bhaktidāsōha; yuktanāyitte yuktidāsōha aikyanāyitte mamakāra dāsōha! Sarvadā dāsōhavē bēku: Ī dāsōhada anuva kūḍalasaṅgayya tānē balla.
Manuscript
English Translation 2 To have become a devotee, itself Is a surrender of piety To have become a worthy man, itself Is a Surrender of one's worth! To have been united is itself Surrender of one's egohood Surrender there must be in everything: The importance of surrender Lord Kūḍala Saṅgama only knows! Translated by: L M A Menezes, S M Angadi
Hindi Translation भक्त हो, तो भक्ति-दासोह-चाहिए, युक्त हो, तो युक्ति-दासोह, ऐक्य हो, तो ममकार-दासोह, सब में ‘दासोहं’ चाहिए, ‘दासोऽह’ के मूल्य को कूडलसंगमदेव स्वयं जानते हैं ॥ Translated by: Banakara K Gowdappa
Telugu Translation భక్తుడై పోవ భక్తికి దాసోహము యుక్తుడై పోవ యుక్తికి దాసోహము ఐక్యుడై పోవ మమతకు దాసోహము అన్నిటనూ దాసోహ మవసరము - ఈ దాసోహపు గుట్టు సంగయ్య తానే యెఱుగునయ్యా! Translated by: Dr. Badala Ramaiah
Marathi Translation भक्तासाठी भक्तीदासोह, युक्तासाठी युक्तीदासोह, ऐक्यासाठी ममकार दासोह, सर्वामध्ये दासोह पाहिजे. या दासोहाचे अनुभाव कूडलसंगमदेवा आपणच जाणता. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತ-ಯುಕ್ತ-ಐಕ್ಯ ಎಂಬ ಮೂರು ಹಂತಗಳಿವೆ ಲಿಂಗೈಕ್ಯಕ್ಕೆ. ಇದೇ ಭಕ್ತಿಯಿಂದ ಮುಕ್ತಿಯನ್ನು ಪಡೆಯುವ ಪರಿ. ಭಕ್ತನೆಂಬ ಪ್ರಾಥಮಿಕ ಹಂತದಲ್ಲಿ ಭಕ್ತಿಯಿಂದಾಗಿ ಜೀವನು ಶಿವನಿಂದ ವಿಭಕ್ತನಾದಂತಿದ್ದರೂ –ಆ ಹಂತದಲ್ಲಿಯೇ ಭಕ್ತನ ಭಾವನೆಗಳು ಆಚರಣೆಗಿಳಿದು ಅವನು ಯುಕ್ತನೆಂಬ ಎರಡನೇ ಹಂತವನ್ನು ತಲುಪುವನು. ಮೂರನೇ ಹಂತದಲ್ಲಿ ಅವನ ಆಚರಣೆಗಳೆಲ್ಲಾ ಅವನಿಗೆ ಉಸಿರಾಟದಂತೆ ಸಹಜವೇ ಆಗಿ -ಸಂಕಲ್ಪ ವಿಕಲ್ಪಗಳ ವಿಧಿನಿಷೇಧಗಳಿಲ್ಲದೆ –ಮಾಗಿದ ಹಣ್ಣು ಮರದಡಿಯಲ್ಲಿರುವಂತೆ ಈ ಸಂಸಾರದಲ್ಲಿರುವನು. ಇದೇ ಐಕ್ಯಸ್ಥಿತಿ, ಜೀವನ್ಮುಕ್ತಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು