•  
  •  
  •  
  •  
Index   ವಚನ - 937    Search  
 
ಐಕ್ಯನ ಭಕ್ತಸ್ಥಲ - ಪೂಜೆ
ಜಲವ ನುಂಗಿತ್ತಯ್ಯಾ ಎನ್ನ ಕರವು; ಪತ್ರೆಯ ನುಂಗಿತ್ತಯ್ಯಾ ಎನ್ನ ಶಿಖಿ; ಎನ್ನಯ ಮಂತ್ರ ಭಿನ್ನವಾಯಿತ್ತು! ಇಂತೀ ದ್ವಿವಿಧ ಒಂದಾಗದ ಮುನ್ನ ಕೂಡಲಸಂಗಮದೇವರು ಪೂಜೆಗೊಂಡರು.
Transliteration Jalava nuṅgittayyā enna karavu; patreya nuṅgittayyā enna śikhi; ennaya mantra bhinnavāyittu! Intī dvividha ondāgada munna kūḍalasaṅgamadēvaru pūjegoṇḍaru.
Manuscript
English Translation 2 My hand has swallowed water, Sir; My head has swallowed the bilwa-leaf. My Mantra is broken, dear my Lord! Lord Kūḍala Saṅgama received my worship Only before these two were made in one. Translated by: L M A Menezes, S M Angadi
Hindi Translation मेरी शिखि ने मेरे हाथ जल पिया, बिल्व-पत्र खाया, मेरे मंत्र टूट गया, भिन्न हुआ । इन द्विविधों के एक होने के पूर्व कूडलसंगमदेव पूजे गये ॥ Translated by: Banakara K Gowdappa
Telugu Translation నీటిని మ్రింగెనయ్యా నా చేయి; పత్తిరి మ్రింగెనయ్యా నాచేయి నా మంత్రము తెగిపోయె ద్వంద్వ మిటొకటిగాకముందె పూజగై కొనుమయ్యా కూడల సంగమదేవా! Translated by: Dr. Badala Ramaiah
Marathi Translation पाणी गिळाले देवा माझ्या हाताने, पत्री फूलाला गिळले देवा माझ्या शिराने, माझा मंत्र भिन्न झाला. हे त्रिविध एक होण्याआधी कूडलसंगमदेवाची पूजा झाली. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಾಮೂಲೀ ಭಕ್ತನು ಮಾಡುವ ದಿನದಿನದ ಲಿಂಗಪೂಜೆಯು–ಅಭಿಷೇಕ ಮಾಡುವುದರಿಂದ, ಪತ್ರೆ ಧರಿಸುವುದರಿಂದ, ಮಂತ್ರವನ್ನು ಉಚ್ಚರಿಸುವುದರಿಂದ ನಡೆಯುತ್ತದೆ –ಅಲ್ಲಿಗೆ ಅದು ಪರಿಸಮಾಪ್ತಿಯಾಗುತ್ತದೆ ಕೂಡ. ಆಗ ಲಿಂಗವನ್ನು ಇರಿಸಿಕೊಂಡು ಅಭಿಷೇಕ ಮಾಡಿದ್ದ ಅಂಗೈ ಒಣಗುತ್ತದೆ, ಆ ಲಿಂಗಕ್ಕೆ ಧರಿಸಿದ ಪತ್ರೆ ಪೂಜಿಸಿದವನ ತಲೆಯಲ್ಲಿ ಒಣಗುತ್ತದೆ, ಮಂತ್ರದ ಉಚ್ಚಾರಣೆಯ ಸೊಲ್ಲಡಗುತ್ತದೆ. ಆದರೆ ಲಿಂಗೈಕ್ಯಭಕ್ತನ ಅಖಂಡವಾದ ಪೂಜೆ–ಈ ಅಭಿಷೇಕ ಪತ್ರೆ ಮಂತ್ರಗಳಿಲ್ಲದಾಗಲೂ ನಡೆಯುತ್ತಲೇ ಇರುತ್ತದೆ. ಈ ಅನಾರಬ್ಧ ಅನಿರ್ಮಾಲ್ಯ ಅಖಂಡ (ಮಾನಸ) ಪೂಜೆಯನ್ನೇ ದೇವರು ಪ್ರೀತಿಯಿಂದ ಕೈಗೊಳ್ಳುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು