•  
  •  
  •  
  •  
Index   ವಚನ - 938    Search  
 
ಐಕ್ಯನ ಭಕ್ತಸ್ಥಲ - ಅಸಹಾಯಕತೆ
ಎಲ್ಲರ ಬೇಡಿದರೆಮ್ಮವರು: ಒಂದೆ ಬೇಡ ಮರೆದರಯ್ಯಾ; ಮರ್ತ್ಯಲೋಕದ ಗಣಂಗಳು ಒಂದ ಬೇಡ ಮರೆದರು: ಕೂಡಲಸಂಗಮದೇವಾ, ಎನ್ನ ಬೇಡ ಮರೆದರು!
Transliteration Ellarū bēḍidarem'mavaru: Onde bēḍa maredarayya; martyalōkada gaṇagaḷu onda bēḍa maredaru: Kūḍalasaṅgamadēvā, enna bēḍa maredaru!
Manuscript
English Translation 2 Our own will ask far everything, But one thing they forget to ask: One thing the Saints of earth forget to ask: To ask for me, Kūḍala Saṅgama Lord! Translated by: L M A Menezes, S M Angadi
Hindi Translation स्वजनों ने सब कुछ माँगा, किंतु एक माँगना भूल गये; मर्त्यलोक के प्रमथ एक माँगना भूल गये; कूडलसंगमदेव, वे मुझे माँगना भूल गये ॥ Translated by: Banakara K Gowdappa
Telugu Translation అన్నీ గోరిరి మా వారు కాని ఒకటి మాత్రము మఱచిరయ్యా మర్త్యలోక గణంబులు ఒకటి గోర మఱచిరయ్యా! నన్ను గోర మఱచిరిగదయ్యా కూడల సంగమదేవా! Translated by: Dr. Badala Ramaiah
Marathi Translation सर्व काही मागितले आपल्या लोकांनी, एकाला मात्र विसरले. मर्त्यलोकीचे शिवगण एक मागायला मात्र विसरले. कूडलसंगमदेवा, तुम्हाला मागणे विसरले. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರ ದೃಷ್ಟಿಯಲ್ಲಿ ಜೀವನ ಸಾರ್ಥಕವಾಗುವುದು ಅಧಿಕಾರದಿಂದಲ್ಲ ದರ್ಪದಿಂದಲ್ಲ ಪ್ರತಿಷ್ಠೆಯಿಂದಲ್ಲ –ಕೇವಲ ಸೇವೆಯಿಂದ ಈ ಸಂಬಂಧವಾಗಿ ಅವರ ಆಲೋಚನೆಯ ಧಾರೆಯನ್ನು ಅವಧಾರಿಸಿ : ಮನೆಗೆ ಬಂದವರು ಒಡವೆ ವಸ್ತ್ರ ಧನ ಕನಕ ಮುಂತಾದವುವನ್ನೆಲ್ಲಾ ಕೇಳಿದರು –ಎಲ್ಲವನ್ನೂ ಕೊಟ್ಟೆ. ಆದರೆ ಯಾರು ನನ್ನನ್ನು ಕೇಳಲಿಲ್ಲ : ಬಾ ನನ್ನ ಮನೆಯಲ್ಲಿ ಆಳಾಗಿ ದುಡಿಯೆಂದು ಯಾರು ನನ್ನನ್ನು ಕೇಳಲಿಲ್ಲ. ನನಗೆ ಬೇಕಾದುದು ಶರಣರ ಈ ಬಗೆಯ ಸೇವೆಯೇ ಹೊರತು ಒಡವೆ ವಸ್ತ್ರ ಧನ ಕನಕದ ಯಜಮಾನಿಕೆಯಲ್ಲ. ನನಗೆ ಬೇಡವಾದ ಏನೆಲ್ಲವನ್ನು ಕೊಟ್ಟನೆಂದ ಮಾತ್ರಕ್ಕೇ ನನಗೆ ತೃಪ್ತಿಯೆಲ್ಲಿ ? ಶಿವಶರಣರು ನನ್ನನ್ನು ತಮ್ಮ ಮನೆಯಲ್ಲಿ ಆಳಾಗಿರಿಸಿಕೊಂಡಿದ್ದರೆ -ನನಗೂ ಒಡೆಯರಿದ್ದಾರೆಂಬ ಭಾವ ಬೆಳೆದು, ನನ್ನ ಅಹಂಕಾರವೆಲ್ಲ ಅಳಿದು –ದಾಸೋಹಂ ಎಂದು ಕೃತಕೃತ್ಯತೆಯಿಂದ ನಲಿಯುತ್ತಿದ್ದೆ. ಆ ಭಾಗ್ಯ ನನಗಿಲ್ಲ -ನಾನು ನಿಜವಾಗಿಯೂ ಅನಾಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು