ಐಕ್ಯನ ಭಕ್ತಸ್ಥಲ - ಅಸಹಾಯಕತೆ
ಭಿತ್ತಿಯಿಲ್ಲದ ಚಿತ್ತಾರದಂತೆ, ಭಕ್ತಿಯಿಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯಾ?
ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯಾ?
ಗೆರೆಯಿಲ್ಲದ ಕೋಲಿನಲಿ ಉದ್ದರೆಯನಿಕ್ಕಿದ ಭಂಡದಹರದನಂತಾದೆನಯ್ಯಾ!
ಕೂಡಲಸಂಗಮದೇವಾ.
Transliteration Bhittiyillada cittāradante, bhaktiyillada pramathanāgi endippenayyā?
Satyavillada śaraṇanāgi endippenayyā?
Gereyillada kōlinali uddareyanikkida bhaṇḍadaharadanantādenayyā!
Kūḍalasaṅgamadēvā.
Manuscript
English Translation 2 When would I be, O Lord,
A pioneer without piety;
When would I be, O Lord,
A Śaraṇa without reality-
Like picture without a wall?
Even as a trader who gives his goods
Measuring with a bare stick with no lines,
On credit!
O Kūḍala Saṅgama Lord!
Translated by: L M A Menezes, S M Angadi
Hindi Translation भित्तिहीन चित्र वत्
मैं भक्तिहीन प्रमथ कब बनूँगा?
सत्यहीन शरण कब बनूँगा?
रेखाहीन मानदंड से उधार देनेवाले
व्यापारी सदृश हूँ कूडलसंगमदेव॥
Translated by: Banakara K Gowdappa
Telugu Translation భూమిక లేని చిత్రమువలె; భక్తి లేని ప్రమథుడనై యుంటి
సత్యములేని శరణుడనై యుంటి; కొలత లేని బళ్ళతో సరుకుల
అప్పునిచ్చు వ్యాపారివలె నుంటినయ్యా కూడల సంగయ్యా!
Translated by: Dr. Badala Ramaiah
Marathi Translation
भिंती विना चित्रासम भक्तीरहित प्रमथ केव्हा झालो देवा?
सत्य रहित शरण कधी झालो देवा ?
वजन, माप विना उधार माल देणाऱ्या
व्यापाऱ्याप्रमाणे झालो कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಭಕ್ತಶಿರೋಮಣಿಗಳಾದ ಬಸವಣ್ಣನವರಿಗೆ “ಭಕ್ತಿಯಿಲ್ಲದ ಪ್ರಮಥನಾಗಿ ಎಂದಿಪ್ಪೆನೋ !” ಎಂಬ ಚಿಂತೆ ! ಭಕ್ತಿಯಿಲ್ಲದ ಪ್ರಮಥನೆಂದರೇನು ?
ಭಕ್ತಿಯೆಂದರೆ ದೇವ-ಭಕ್ತ ಎಂಬ ಅಂತರದಲ್ಲಿ ದೇವರಿಗೆ ಭಕ್ತನು ಮಾಡುವ ಪರಿಚರ್ಯೆ. ಈ ಅಂತರವೇ ಇಲ್ಲದೆ-ಆದ್ದರಿಂದ ಪರಿಚರ್ಯೆಯೂ ಇಲ್ಲದೆ, ತಾನೂ ಸೇರಿದಂತೆ ಎಲ್ಲವೂ ಶಿವಮಯವೆನಿಸುವುದೊಂದು ತನ್ಮಯಸ್ಥಿತಿಯುಂಟು.
ತಾವು ಹಂಬಲಿಸುವ ಈ ತೀವ್ರ ಶಿವಾನುಭೂತಿಯ ಸ್ಥಿತಿಯನ್ನು ಬಸವಣ್ಣನವರು “ಭಿತ್ತಿಯಿಲ್ಲದ ಚಿತ್ತಾರ”ಕ್ಕೆ ಹೋಲಿಸುತ್ತಿರುವರು:
ಒಂದು ಚಿತ್ರ ಬರೆಯಲು ಭಿತ್ತಿ-ಪಟವಿದ್ದರೆ –ಆ ಭಿತ್ತಿಪಟದ ಆಯಾಮವನ್ನು ಆ ಚಿತ್ರ ಮೀರಲಾಗುವುದಿಲ್ಲ. ಹಾಗೆಯೇ ಭಕ್ತಿಯೂ ಅಷ್ಟವಿಧಾರ್ಚನೆ ಮುಂತಾದವುಗಳ ಕಟ್ಟುಪಾಡಿಗೆ ಸಿಕ್ಕಿಬಿದ್ದಿರುತ್ತದೆ. ಹೀಗೆ ತನ್ನನ್ನು ಶಿವನಿಂದ ಭಿನ್ನವಾಗಿ ಭಾವಿಸಿ ಭಕ್ತಿಯಿಂದ ಪೂಜಿಸಿ -ಒಂದು ಮೇರೆಗೆರೆಯೊಳಗಾಗಿರುವುದಕ್ಕಿಂತ -ಶಿವನಿಗೂ ತನಗೂ ಭಿನ್ನಭೇದವಿಲ್ಲದೆ. ತಾನೇ ಇಲ್ಲದೆ-ಇರುವುದೆಲ್ಲಾ ಶಿವನೇ ಆಗಿರುವ ಅನನ್ಯ ಅನುಭಾವ ತನಗಾಗುವುದೆಂದಿಗೆ ಎಂದು ಬಸವಣ್ಣನವರು ವಿರಹಿಸುತ್ತಿರುವರು.
ಎರಡಾಗಿ ಬೇರೆಯಾಗಿರುವುದಕ್ಕಿಂತ ಒಂದಾಗಿ ಬೆಸೆದುಕೊಳ್ಳುವುದೇ ಸಚ್ಚಿದಾನಂದವೆಂಬುದು ಅವರ ಕಲ್ಪನೆ.
ಆದ್ದರಿಂದಲೇ ಅವರು ದೇಶಕಾಲಬದ್ಧವಲ್ಲದ, ವಿಧಿವಿಧಾನಸೀಮಿತವಲ್ಲದ ನಿಸ್ಸೀಮಭಕ್ತಿಯ ದಾರಿಹಿಡಿದು ಶಿವನಲ್ಲಿ ಎರಕಗೊಳ್ಳಲು ಹಂಬಲಿಸಿದರು.
ಶೆಟ್ಟಿಗೆ ಲಾಭನಷ್ಟಗಳ ಲೆಕ್ಕಾಚಾರವಿರುವತನಕ ತಕ್ಕಡಿ-ತೂಕ ಎಲ್ಲಾ ಬೇಕು. ಆದರೆ ಅವನಿಗೆ ಲೌಕಿಕವೆ ಬೇಡವೆನಿಸಿ ವ್ಯವಹಾರವನ್ನು ಮುಚ್ಚಬೇಕೆಂದು ತೀರ್ಮಾನಿಸಿದಾಗ-ಮಿತಿಯಿಲ್ಲದೆ ಅತಿಯಾಗಿ ತೂಗಿ–ಅದನ್ನೂ ಸಿಕ್ಕಿದವರಿಗೆಲ್ಲಾ ಸೂರೆಸಾಲವಾಗಿ ಕೊಟ್ಟುಬಿಡಲು ಯೋಚಿಸುವನು.
ಹೀಗೆ ಭಕ್ತಿಯ ಲೆಕ್ಕ ಮುಗಿಸಿ ಮುಕ್ತಿ ಪಡೆಯಬೇಕೆನ್ನುವ ಬಸವಣ್ಣನವರ ನಿವೃತ್ತಿಸ್ಥಿತಿ ಗಮನಾರ್ಹವಾದುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು