ಆಯತ ಒಂದೆಡೆಯಲ್ಲಿ: ತೆರನನರಿಯರಾಗಿ
ನೋಡಬಾರದು, ನೋಡಿ ನುಡಿಸಬಾರದು.
ಅದು, ತಿದ್ದಬಾರದ ಡೊಂಕು ಕೂಡಲಸಂಗನ ಭಕ್ತಿ!
Transliteration Āyata ondeḍeyalli: Terananariyarāgi
nōḍabāradu, nōḍi nuḍisabāradu.
Adu, tiddabārada ḍoṅku kūḍalasaṅgana bhakti!
Manuscript
English Translation 2 The Āyata on one side: not being aware
Just where, they cannot see,
And, seeing, cannot speak!
Kūḍala Saṅga's piety
Is as a bend
You cannot mend!
Translated by: L M A Menezes, S M Angadi
Hindi Translation आयत एक स्थान पर
विधि नहीं जानने के कारण
वे देख नहीं सकते, देखकर कह नहीं सकते-
कूडलसंगमदेव की भक्ति ऐसी टेढ़ी है
जो सीधी नहीं हो सकती ॥
Translated by: Banakara K Gowdappa
Telugu Translation ఆయత మొక పట్టునుండి పథము తెలియని కారణమున
చూడరాదు చూచి పలికింపరాదు. అది తిద్దరానిడొంకు సంగయ్యా
Translated by: Dr. Badala Ramaiah
Marathi Translation
आयताचे मर्म एकीकडे जाणत नाही.
पाहू नये, पाहून बोलण्यास लावू नये.
ती दुरुस्ती करता न येणारी कूडलसंगाची विचित्र भक्ती !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ “ಕೂಡಲ ಸಂಗನ ಭಕ್ತಿಯೆನ್ನುವುದು ತಿದ್ದಬಾರದ ಡೊಂಕು” –ಎಂಬ ಮಾತಿನಲ್ಲೇ ಈ ವಚನದ ರಹಸ್ಯಾರ್ಥವೆಲ್ಲಾ ಅಡಗಿರುವುದು.
ಭಕ್ತಿಯೆನ್ನುವುದು -ನೋಡಲು ಅಂಗದ ಮೇಲೆ ಧರಿಸಿದ ಇಷ್ಟಲಿಂಗದ ಉಪಾಸನೆಯೆಂಬಂತೆ ಕಂಡರೂ –ಅದು ಪರಮಾರ್ಥದಲ್ಲಿ ಅಂತರಂಗದಲ್ಲಿ ಧರಿಸಿದ ಪ್ರಾಣಲಿಂಗದ ಉಪಾಸನೆಗೇ ತಿರುಗಬೇಕು. ಹಾಗಲ್ಲದೆ ಅಂಗಲಿಂಗಸಾಮರಸ್ಯ ಸಿದ್ಧಿಸುವುದಿಲ್ಲ. ಸ್ಥೂಲದಿಂದ ಸೂಕ್ಷ್ಮಕ್ಕೆ ತಿರುಗುವ ಈ ಡೊಂಕನ್ನು ಶರಣರೇ ಬಲ್ಲರು. ಮಿಕ್ಕವರೆಲ್ಲಾ ಇಷ್ಟಲಿಂಗವನ್ನೇ ದೃಷ್ಟಿಸಿ. ಇಷ್ಟಲಿಂಗವನ್ನೇ ಸ್ತುತಿಸಿ -ಅಲ್ಲೇ ನಿಂತುಬಿಡುವರು. ಪ್ರಾಣಲಿಂಗದ ಯಾತ್ರೆ ಅವರ ಪಾಲಿಗೆ ಇಷ್ಟಲಿಂಗದ ಜಾತ್ರೆಯಲ್ಲೇ ಮುಗಿದುಬಿಡುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು