•  
  •  
  •  
  •  
Index   ವಚನ - 942    Search  
 
ಐಕ್ಯನ ಮಾಹೇಶ್ವರಸ್ಥಲ - ಲಿಂಗನಿಷ್ಠೆ
ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ: "ಲಿಂಗಮಧ್ಯೇ ಜಗತ್ ಸರ್ವಂ" ಎಂಬುದ ನಾನರಿಯೆನಯ್ಯಾ; ಲಿಂಗಸೋಂಕಿನ ಸುಖದೊಳಗೆ ಕೂಡಲಸಂಗಮದೇವಯ್ಯಾ; ಅಂಬುಧಿಯೊಳಗೆ ಬಿದ್ದ ಆಲಿಕಲ್ಲಂತೆ ಭಿನ್ನ ಭಾವವರಿಯದೆ `ಶಿವ ಶಿವಾ' ಎನ್ನುತಿರ್ದೆನು ನಾನು.
Transliteration Daśadikku dhare gaganavembuda nānariyenayyā: "Liṅgamadhyē jagat sarvaṁ" embuda nānariyenayyā; liṅgasōṅkina sukhadoḷage kūḍalasaṅgamadēvayya; ambudhiyoḷage bidda ālikallante bhinnabhāvavariyade `śiva śiva' ennutidenu nānu.
Manuscript
English Translation 2 I know not, Lord, What earth and sky and ten directions be. I know not, Lord, That Liṅga holds the entire world. In the delight of Liṅga's touch, O Kūḍala Saṅgama Lord, Exempt from sense of difference, Like hailstone fallen in the sea, I say again and again, God! God! Translated by: L M A Menezes, S M Angadi
Hindi Translation दश-दिशाएँ, धरा, गगन मैं नहीं जानता, ‘लिंग मध्ये जगत्सर्वं’, मैं नहीं जानता, लिंग स्पर्षानंद में, कूडलसंगमदेव , मैं समुद्र में पडे ओले के समान, उपवत्, जपता हूँ । मैं भिन्न-भाव जाने बिना ‘शिव शिव’ ॥ Translated by: Banakara K Gowdappa
Telugu Translation దశదిశల భూమ్యాకాశముల నెరుగనయ్యా! ‘‘లింగమధ్యే జగత్ సర్వ ‘‘మన్నది నే నెఱుగనయ్యా! లింగమంటు సుఖమున వారిధిలో బడు వడగల్లు రీతి భేదభావమేమో తెలియక శివశివా! యనుచుంటినయ్యా! Translated by: Dr. Badala Ramaiah
Marathi Translation दशदिशा, धरती, आकाश मी जाणत नाही देवा. `लिंगामध्ये जगत् सर्वम्` हे जाणत नाही देवा. लिंगसमरस सुखामध्ये, कूडलसंगमदेवा, सागरात पडलेल्या गारेसम भिन्नभाव जाणल्या विना `शिवशिवा` म्हणतो मी. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಇಷ್ಟಲಿಂಗದ ಮಹಾದ್ವಾರವನ್ನು ನೂಕಿ ಪ್ರಾಣಲಿಂಗದ ಗುಹಾಂತರಾಳವನ್ನು ಪ್ರವೇಶಿಸಿದ ಶಿವಶರಣನು –ಆ ನಿರಾಳದಲ್ಲೇ ಅಡಗುವನು -ಸಮುದ್ರದಲ್ಲಿ ಬಿದ್ದ ಆಲಿಕಲ್ಲು ಅಲ್ಲೇ ತೇಲಿ, ಅಲ್ಲೇ ಕರಗಿ –ಆ ಸಮುದ್ರದಲ್ಲೇ ಅಡಗುವಂತೆ, ಆಗ ಅವನಿಗೆ ದಶದಿಕ್ಕು ಧರೆ ಗಗನವೆಂಬ ಬಾಹ್ಯದ ಬಳಕೆಯಾಗಲಿ, ತಾನೂ ಸೇರಿದಂತೆ ಈ ಜಗತ್ಸರ್ವವೂ ಲಿಂಗಮಧ್ಯದಲ್ಲಿರುವುದೆಂಬ ಸವಿಕಲ್ಪದ ಅನಿಸಿಕೆಯಾಗಲಿ ತಲೆದೋರದೆ -ಶಿವದಲ್ಲಿ ತಲ್ಲೀನವಾಗಿರುವನು. ಶಿವ-ಶಿವ ಎಂಬ ನಾದ ಮಾತ್ರ ಅವನ ಬಾಯಿಂದ ಹೊಮ್ಮುತ್ತಿರುವುದು-ಸಮರಾಂಗಣದಲ್ಲಿ ಕಡಿದುಬಿದ್ದ ವೀರನ ತಲೆಯಿಂದ ಹೊಮ್ಮುವ ಸಿಂಹನಾದದಂತೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು