•  
  •  
  •  
  •  
Index   ವಚನ - 943    Search  
 
ಐಕ್ಯನ ಪ್ರಸಾದಿಸ್ಥಲ - ಭಕ್ತ
ಮಿಥ್ಯೆಯನಳಿದುಳಿದ ಸತ್ಯಪ್ರಸಾದಿ; ಅಂಜನವಿಲ್ಲದ ನಿರಂಜನಪ್ರಸಾದಿ; ದುಃಖವನಳಿದ ಘನಾನಂದಪ್ರಸಾದಿ; ಅನಿತ್ಯವಿಲ್ಲದ ನಿತ್ಯಪ್ರಸಾದಿ; ಖಂಡಿತವಿಲ್ಲದ ಅಖಂಡಿತಪ್ರಸಾದಿ; ಕೂಡಲಸಂಗಮದೇವರಲ್ಲಿ ತಾನೇ ಪ್ರಸಾದಿ.
Transliteration Mithyeyanaḷiduḷida satyaprasādi; an̄janavillada niran̄jana prasādi; upayuktavanaḷida ghanānandaprasādi; anityavillada nityaprasādi; khaṇḍitavillada akhaṇḍitaprasādi; kūḍalasaṅgamadēvaralli tānē prasādi.
Manuscript
English Translation 2 Truth's own Prasadi, who has shed the false; Immaculate withour stain, Free of all sorrow, filled with highest bliss, Eternal, purged of temporal taint, Solid and whole Himself Prasādi In Lord Kūḍala Saṅgama. Translated by: L M A Menezes, S M Angadi
Hindi Translation मिथ्या मुक्त सत्य-प्रसादी, रंजन रहित निरंजन-प्रसादी दुःख रहित घनानंद-प्रसादी, अनित्य रहित नित्य-प्रसादी, खंडित रहित अखंडित-प्रसादी, कूडलसंगमदेव में वह स्वयं प्रसादी है ॥ Translated by: Banakara K Gowdappa
Telugu Translation మిథ్యను ద్రొక్క సత్యప్రసాది తేలె; అంజనములేని నిరంజన ప్రసాది దుఃఖమును తొలచు ఘనానందప్రసాది, అనిత్యము లేని నిత్యప్రసాది, ఖండములేని యఖండ ప్రసాది కూడల సంగమదేవునిలో తానే ప్రసాది. Translated by: Dr. Badala Ramaiah
Marathi Translation असत्यरहित सत्य प्रसादी, अंजनरहित निरंजन प्रसादी. दुःखरहित धनानंद प्रसादी, अनित्यरहित नित्य प्रसादी. खंडित रहित अखंड प्रसादी. कूडलसंगमदेवामध्ये तोच प्रसादी. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಶಿವಲಕ್ಷಣ ಮಾಯಾಲಕ್ಷಣ 1. ಸತ್ (ಸತ್ಯ) ಅಸತ್ತು (ಮಿಥ್ಯೆ) 2. ಚಿತ್ (ನಿರಂಜನ) ಜಡ (ಅಂಜನ) 3. ಆನಂದ (ಘನಾನಂದ) ದುಃಖ 4. ನಿತ್ಯ ಅನಿತ್ಯ 5. ಪರಿಪೂರ್ಣ ಖಂಡಿತ. ಜೀವನು ಶಿವಸ್ವರೂಪಿಯೇ ಆಗಿ ಸತ್ ಮುಂತಾದ ಪಂಚಶುಭಲಕ್ಷಣಗಳಿಂದ ಕೂಡಿರುವನು. ಆ ಜೀವನನ್ನು -ಸೂರ್ಯನನ್ನು ಮೊಡದಂತೆ –ಮುಸುಕಿರುವ ಮಾಯೆ ಅಸತ್ ಮುಂತಾದ ಪಂಚದುರ್ಲಕ್ಷಣಗಳಿಂದ ಕೂಡಿರುವಳು. ಜೀವನು ದೇಹಧಾರಿಯಾಗಿ-ಆ ಉಪಾಧಿಯಿಂದಲೇ ಪಡೆದ ಅಸದಾದಿಯಾದ ಮಾಯಾಗುಣಗಳನ್ನು ಕೊಡವಿಕೊಂಡರೆ –ಅವನೇ ಸಚ್ಚಿದಾನಂದ ನಿತ್ಯಪರಿಪೂರ್ಣ ಶಿವನಾಗಿರುವನು. ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಈ ವಚನವನ್ನು ಪರಿಭಾವಿಸಬೇಕು ಶರಣನು ಒಂದು ಭ್ರಮಾತ್ಮಕ ಅಸದ್ವಸ್ತುವಲ್ಲ-ಸದ್ರೂಪನು, ಕಲ್ಲುಮಣ್ಣಿನಂತೆ ಜಡವಸ್ತುವಲ್ಲ-ಚೇತನ್ಯಾತ್ಮಕನು, ಕಣ್ಣೀರು ಕರೆಯುತ್ತಿರುವ ರೋತಿಯಲ್ಲ–ಆನಂದರೂಪಿ, ಈಗ ತೋರಿ ಇನ್ನೊಂದು ಘಳಿಗೆಗೆ ಇಲ್ಲವಾಗುವ ಅನಿತ್ಯವಸ್ತುವಲ್ಲ -ನಿತ್ಯನು. ಕಾಲದೇಶಗಳಲ್ಲಿ ಹರಿದು ಹಂಚಿಹೋಗುವ ಚಿಂದಿಯಲ್ಲ –ಅಖಂಡ ಪರವಸ್ತು. ವಿ : (1) “ಪ್ರಸಾದ”ದ ಬಗ್ಗೆ ಒಂದು ಶ್ಲೋಕವನ್ನು ನೋಡಬಹುದು : ಪ್ರಸಾದೋ ಜನಕಃ ಪ್ರೋಕ್ರೋ ಜನನೀ ಭಕ್ತಿರೀರಿತಾ | ಆನಯೋರೈಕ್ಯಭಾವೇನ. ಜನಿತಾ ಮುಕ್ತಿಕನ್ಯಕಾ” (2) ಈ ವಚನದಲ್ಲಿ ಪ್ರಸಾದಿ ಎಂಬ ಪದವನ್ನು “ಜೀವನ್ಮುಕ್ತ”ನೆಂಬ ಅರ್ಥದಲ್ಲಿ ಬಳಸಲಾಗಿದೆ. “ಪ್ರಸಾದದಿಂದತಃಪರವಿಲ್ಲ, ಪ್ರಸಾದಿಯಿಂದೆ ಮುಕ್ತರಿಲ್ಲ”ವೆನ್ನುವರು ಮಡಿವಾಳ ಮಾಚಯ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು