ಐಕ್ಯನ ಪ್ರಸಾದಿಸ್ಥಲ - ಪ್ರಸಾದ
ಬೆಳಗಣೊಳಗಣ ಬೆಳಗು ಮಹಾಬೆಳಗೆಂಬ
ಪ್ರಸಾದದಲ್ಲೊದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ?
ಪರಮಾಶ್ರಯವೇ ತಾನಾಗಿ, ಕೂಡಲಸಂಗಮದೇವಯ್ಯ
ಚೆನ್ನಬಸವಣ್ಣನೆಂಬ ಮಹಾಪ್ರಸಾದಿ
ಎನ್ನ ವಾಗ್ಮನಕ್ಕಗೋಚರನಾಗಿ, ನಾನೇನೆಂಬೆನಯ್ಯಾ?
Transliteration Beḷaginoḷagaṇa beḷagu mahābeḷagemba
prasādadalli odagida prasādada pariṇāma
paramānandavanēnendupamisuvenayyā?
Paramāśrayavē tānāgi, kūḍalasaṅgamadēvayya
cennabasavaṇṇanemba mahāprasādi
enna vā⁇ manakkagōcaranāgi, nānēnembenayyā?
Manuscript
English Translation 2 How can I tell of the surpassing joy
Of the peace flowing When Prasāda rose
In the great light that is the light of lights?
What shall I say, O Kūḍala Saṅgama Lord,
Of the Mahāprasādi Cennabasavaṇṇa,
Who changed to the supreme himself,
Has passed beyond my word and thought?
Translated by: L M A Menezes, S M Angadi
Hindi Translation प्रकाश का प्रकाश महाप्रकाश रूपी
प्रसाद में प्रसादी को प्राप्त
तृप्ति के परमानंद का वर्णन कैसे करूँ?
कूडलसंगमदेव, मैं क्या कहूँ,
चन्नबसवण्णा नामक महाप्रसादी स्वयं परमाश्रय बनकर
मेरे वाङ्गःमन को अगोचर हैं।
Translated by: Banakara K Gowdappa
Telugu Translation వెలుగుల వెలుగు మహా వెలుగు, ప్రసాదమునకల్గు ప్రసాది.
ఆ పరిణామము దేనికీ పోల్చలేనయ్యా, పరమాశ్రయమై
సంగయ్య తానై చెన్న బసవన్నయను మహాప్రసాది,
మన్మనోవాక్కుల కతీతుడై పోయె, నిక నేమందునయ్యా!
Translated by: Dr. Badala Ramaiah
Marathi Translation
प्रकाशातील प्रकाश महाप्रकाश
प्रसादात मिळालेल्या प्रसादीचा परिणाम
परमानंदाचे वर्णन कसे करू देवा ?
परमाश्रय आपण झाला कूडलसंगमदेव
चन्नबसवण्णा महाप्रसादी
माझ्या मन वाणी अगोचराला मी काय म्हणू देवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬೆಳಗಿನ ಒಳಗಣ ಬೆಳಗೇ ಮಹಾಬೆಳಗು–ಅದೇ ಪ್ರಸಾದ. ಪ್ರಸಾದಿಯು ಪರಮಾನಂದವನ್ನು ಪಡೆಯುವುದು ಅಲ್ಲಿಂದಲೇ. ಆ ಪರಮಾನಂದವೇ ಅವನ ವಿಶ್ರಾಮಸ್ಥಾನವೂ ಆಗಿರುವುದು. ಅವಾಚ್ಯವೂ ಅಚಿಂತ್ಯವೂ ಆದ ಶಿವೈಕ್ಯಸ್ಥಿತಿಯೆಂಬುದೂ ಆ ಪ್ರಸಾದವೇ ಆಗಿದೆ.
ಇಲ್ಲಿ ಪ್ರಸಾದವೆಂದರೆ ತ್ಯಾಗದಿಂದ ಮೂಡುವ ಭೋಗಭಾವ. ಅದು ಐಂದ್ರಿಯಕ ಭೋಗದಂತೆ ಪರಿಣಾಮದಲ್ಲಿ ವಿಷಮಿಸುವುದೂ ಅಲ್ಲ ಕ್ಷೀಣಿಸುವುದೂ ಅಲ್ಲ–ಆದುದರಿಂದಲೇ ಅದನ್ನು ಬಸವಣ್ಣನವರು “ಬೆಳಗಿನೊಳಗಣ ಬೆಳಗು ಮಹಾಬೆಳಗು” ಎಂದು ವರ್ಣಿಸಿರುವರು. ಸೂರ್ಯಪ್ರಭೆಯಿಂದ ಸೂರ್ಯಗರ್ಭವನ್ನೇ ಹೊಕ್ಕಂತೆ ಪರಿಭಾವಿಸಿದಾಗ –ತ್ಯಾಗದಿಂದ ದೊರೆಯುವ ಪ್ರಸಾದದ ಪ್ರಖರಭಾವ ಮನಂಬುಗುವುದು.
ತ್ಯಾಗವೇ ಭೋಗವಾದರೆ –ಆ ಭೋಗವೇ ಶಿವನೊಡತಣ ಯೋಗವೆಂಬುದು ಈ ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು