•  
  •  
  •  
  •  
Index   ವಚನ - 946    Search  
 
ಐಕ್ಯನ ಪ್ರಾಣಲಿಂಗಿಸ್ಥಲ - ಸರ್ವವ್ಯಾಪಿ
ಆಯತವೆಂಬುದು ಭಂಗ: ಸ್ವಾಯತವೆಂಬುದು ಭವ! ಆಯತವನರಿಯೆ, ಸ್ವಾಯತವನರಿಯೆ: ಭಾವದಲ್ಲಿ ವ್ರತಗೆಟ್ಟುದಾಗಿ, ಆ ಭಾವದಲ್ಲಿ ಜೀವಸಂಹಾರಿ, ಕೂಡಲಸಂಗಮದೇವ ಸರ್ವನಿವಾಸಿಯಾಗಿ.
Transliteration Āyatavembudu bhaṅga: Svāyatavembudu bhava! Āyatavanariye, svāyatavanariye: Bhāvadalli vratageṭṭudāgi, ā bhāvadalli jīvasanhāri, kūḍalasaṅgamadēva sarvanivāsiyāgi.
Manuscript
English Translation 2 To speak of Āyata involves a split: Two speak of Svāyata is worldliness! Neither Āyata nor Svāyata I know Because Lord Kūḍala Saṅgama, who slays the soul, Completing the will And so all the vows in it or lost Translated by: L M A Menezes, S M Angadi
Hindi Translation आयत कहना भंग है, स्वायत कहना भंग है, मैं न आयत जानता हूँ न स्वायत, भाव में व्रत-भंग हुआ । जीव-संहारक कूडलसंगमदेव उस भाव में सर्वनिवासी है ॥ Translated by: Banakara K Gowdappa
Telugu Translation ఆయత మన్నది భంగము, స్వాయతమన్నది భవము ఆయత మేమో! స్వాయత మేమో తెలియదు, భావమున వ్రతము చెడ, అందరిలో సంగడే అగపడ, ఆ భావము జీవసంహారిjైు పోయెనయ్యా! Translated by: Dr. Badala Ramaiah
Marathi Translation आयत म्हणजे भंग, स्वायत म्हणजे भव. आयत जाणत नाही, स्वायत जाणत नाही. भेद-भावामध्ये व्रतभंग झाल्याने, त्या भेद-भावामध्ये जीवसंहार होतो. कूडलसंगमदेव सर्वनिवासी आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಪರಿಪೂರ್ಣವಾದ ಲಿಂಗವನ್ನು ಆಯತ(ಇಷ್ಟಲಿಂಗ)ವೆಂದು, ಸ್ವಾಯತ(ಪ್ರಾಣಲಿಂಗ)ವೆಂದು ಅಂಗದಲ್ಲಿ ಮತ್ತು ಅಂತರಂಗದಲ್ಲಿ ಹಂಚಿ ಆರಾಧಿಸುವುದು ಸಾಧನಾವಸ್ಥೆಯಲ್ಲಿ ವಿಧೇಯಕವಾದರೂ ಕಡೆಯತನಕ ಆ ವಿಭಜನೆಯನ್ನೇ ಮಾಡುತ್ತ ಹೋಗುವುದು ಸಾಧಕನ ದುರ್ವಿಧಿಯಷ್ಟೆ. ಅಂಗದ ಮೇಲೆ ಲಿಂಗ ಧರಿಸಿ, ಆ ಲಿಂಗದಲ್ಲಿ ಮನವಾಧರಿಸಿ, ಜಂಗಮದಲ್ಲಿ ಆವರಿಸಿ ಹಣ್ಣು ಬಿಟ್ಟಾಗ ಅಂಗವೆಲ್ಲಾ ಲಿಂಗವಾಗಿ, ಲಿಂಗವೆಲ್ಲಾ ಜಂಗಮವಾಗಿ –ಅಭಿಷೇಕ ಪತ್ರೆ ಧೂಪ ದೀಪಾದಿಗಳ ವ್ರತ ತಂತಾನೇ ಹಣ್ಣೆಲೆಯಂತೆ ಉದುರಿ ಹೋಗುವುದು. ಫಲಭರಿತವಾದ ಆ ಬಟ್ಟಬಯಲಲ್ಲಿ ಜೀವಭಾವ ಮಾಯವಾಗಿ -ಶಿವಭಾವವೇ ಸರ್ವಮಯವಾಗಿರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು