ಐಕ್ಯನ ಪ್ರಾಣಲಿಂಗಿಸ್ಥಲ - ಅನುಭಾವ
ಸ್ವಯಲಿಂಗದನುಭಾವ ತನಗೆ ದೊರಕೊಂಡ ಬಳಿಕ
ದೇವಲೋಕವೆಂಬುದೇನೊ, ಮರ್ತ್ಯಲೋಕವೆಂಬುದೇನೊ?
ಆವುದರಲ್ಲಿಯೂ ಭೇದವೇನಯ್ಯಾ?
ಕೂಡಲಸಂಗಮದೇವಾ, ಬಳಿಕ ಆಲಸ್ಯವುಂಟೆ?
Transliteration Svayaliṅgadanubhāva tanage dorekoṇḍa baḷika
dēvalōkavembudēno, martyalōkavembudēno?
Āvudaralliyū bhēdavēnayyā?
Kūḍalasaṅgamadēvā, baḷika ālasyavuṇṭe?
Manuscript
English Translation 2 When one has got experience
Of Svāyataliṅga, what signifies
The world of gods or mortal world?
What is the difference in anything?
O Lord Kūḍala Saṅgama, is there afterwards
Any sloth?
Translated by: L M A Menezes, S M Angadi
Hindi Translation स्वयंलिंगानुभाव की प्राप्ति के पश्चात्
देवलोक क्या है? मर्त्यलोक क्या है?
किसी में भी भेद क्या है?
उसके पश्चात् आलस्य हो सकता है?
Translated by: Banakara K Gowdappa
Telugu Translation స్వీయలింగానుభవము తనకే దొరకొన్న
దేవలోకమన్నదేమో! మర్త్యలోక మన్న దేమో!
భేదమెండైన నేమి; ఆలస్య మేటికో సంగయ్యా !
Translated by: Dr. Badala Ramaiah
Marathi Translation
स्वयं लिंगानुभाव आपणास प्राप्त झाल्यावर
देवलोक कुठला? मर्त्यलोक कुठला?
त्यात भेदभाव कुठला देवा?
कूडलसंगमदेवाची कृपा झाल्यावर आळस कुठला ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಂಗಗುಣವೆಲ್ಲಾ ಹಿಂಗಿ ತಾನೇ ಲಿಂಗವಾದ ಶರಣನಿಗೆ ತಾನಿರುವ ಮರ್ತ್ಯಲೋಕವೇ ದೇವಲೋಕವಾಗುವುದು, ಅಂದರೆ ತನ್ನನ್ನೂ ಸುಧಾರಿಸಿಕೊಂಡು ಆ ಮೂಲಕ ತಾನಿರುವ ಲೋಕವನ್ನೂ ಸುಧಾರಿಸಿದ ಮಹನೀಯನು ತನ್ನ ಹಿಂದೆಯೇ ಈ ಲೋಕವನ್ನು ಉದ್ಧಾರದ ಪಥಕ್ಕೆ ಹಚ್ಚಿರುತ್ತಾನೆ. ಆಗ ಅವನಿಗೆ ಕೆಲಸವಿರುವುದು ಆ ದೇವಲೋಕದಲ್ಲಲ್ಲ–ಈ ಮರ್ತ್ಯಲೋಕದಲ್ಲೇ. ಜೀವನ್ಮುಕ್ತನೆನಿಸಿದ ಅವನು ಕೈತೊಳೆದುಕೊಂಡು ಸೋಮಾರಿತನದಲ್ಲಿ ಕೂತು ಕಾಲಕಳೆಯುವ ತಾಮಸನಲ್ಲ.
ಸನ್ಮಾರ್ಗ ಹಿಡಿದ ಲೋಕದ ಜನರಿಗೆ ಆ ಜೀವನ್ಮುಕ್ತನು ಪ್ರಾಣಪರ್ಯಂತ ದಾರಿದೀಪವಾಗಿ ಉರಿಯುತ್ತಲೇ ಇರುತ್ತಾನೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು