•  
  •  
  •  
  •  
Index   ವಚನ - 948    Search  
 
ಐಕ್ಯನ ಪ್ರಾಣಲಿಂಗಿಸ್ಥಲ - ಮುಕ್ತಿ
ಏನೆಂಬೆ, ಏನೆಂಬೆ ಒಂದೆರಡಾದುದ? ಏನೆಂಬೆ, ಏನೆಂಬೆ ಎರಡೊಂದಾದುದ? ಏನೆಂಬೆ, ಏನೆಂಬೆ ಅವಿರಳ ಘನವ? ಮಹಾದಾನಿ ಕೂಡಲಸಂಗಮದೇವಯ್ಯ ತಾನೇ ಬಲ್ಲ.
Transliteration Ēnembe, ēnembe onderaḍāduda? Ēnembe, ēnembe eraḍondāduda? Ēnembe, ēnembe aviraḷa ghanava? Mahādāni kūḍalasaṅgamadēvayya tāne balla.
Manuscript
English Translation 2 How shall I say, O how One breaks up into two? How shall I say, O how Two join together in one? How shall I speak, O how Of the integral Absolute? Lord Kūḍala Saṅgama, all bountiful He alone knows! Translated by: L M A Menezes, S M Angadi
Hindi Translation क्या कहूँ, क्या कहूँ, एक के दो होना? क्या कहूँ, क्या कहूँ, दो का एक होना? क्या कहूँ, क्या कहूँ, उस अविरल घनत्व को? महादानी कूडलसंगमदेव ही जानते हैं । Translated by: Banakara K Gowdappa
Telugu Translation ఏమం దేమందు నొక్కటి రెండౌట? ఏమం దేమందు రెండు నొక్కటియౌట? ఏమం దేమందు అవిరళ ఘనత! మహాదాత సంగమదేవుడు తానే తెలియునయ్యా! Translated by: Dr. Badala Ramaiah
Marathi Translation कसे सांगू कसे सांगू एकाचे दोन कसे झाले? कसे सांगू,कसे सांगू दोनाचे एक कसे झाले? कसे सांगू कसे सांगू अविरळ घनाला ? महादानी कूडलसंगमदेवा तुम्हीच जाणता. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಿರಾಕಾರ ಪರಶಿವನಿಗೆ ಎರಡು ತೋಳು ಉದಿಸಿತು. ಅವನು ತನ್ನ ಒಂದು ತೋಳಿನಿಂದ ಈ ಲೋಕಕ್ಕೆ –ಒಂದು ದೊಡ್ಡಾಟವನ್ನು ತೋರಲೆಂದು –ಜೀವನನ್ನು ಇಳಿಯಬಿಟ್ಟ. ಇನ್ನೊಂದು ತೋಳಿನಿಂದ –ಆ ಜೀವನು ಮತ್ತೆ ತನ್ನಲ್ಲಿಗೆ ಏರಿಬರಲು ಆಧಾರವಾಗಲೆಂದು -ಭಕ್ತಿಯನ್ನು ಇಳಿಯಬಿಟ್ಟ. ಹೃದಯದಿಂದ ಹೊರಟ ರಕ್ತ ಮೈಗೆಲ್ಲ ಕಸುವನ್ನು ತುಂಬಿಕೊಟ್ಟು ಮರಳಿ ಆ ಹೃದಯವನ್ನೇ ಸೇರುವಂತೆ -ಶಿವನ ಪ್ರಕೃತಿ(ಶಕ್ತಿ)ದ್ವಾರದಿಂದ ಹೊರಟು ವಿಶ್ವವಿಹಾರಿಯಾದ ಜೀವನು ವಿಶ್ವಕ್ಕೆಲ್ಲ ಒಂದು ಹೊಸ ಬದುಕಿನಂದವನ್ನು ಮನದಂದು ಭಕ್ತಿದ್ವಾರದಿಂದ ಮರಳಿ ಆ ಶಿವಹೃದಯಾರವಿಂದ ಮಕರಂದ ಬಿಂದುವಾಗಿ ವಿಶ್ರಮಿಸಿದ. ಇಲ್ಲಿ ಶಿವನ ಸಂಕಲ್ಪದ ಸಜ್ಜನ್ನೂ ಅದನ್ನು ಬಳಸಿಕೊಂಡು ಜೀವನು ಮಾಡಿದ ಸಾಹಸವನ್ನೂ ಅರ್ಥ ಮಾಡಿಕೊಳ್ಳಬೇಕಾದರೆ –ಇಂದಿನ ವಿಜ್ಞಾನಿಗಳು ಒಬ್ಬ ವೀರನನ್ನು ಗ್ರಹಾಂತರಕ್ಕೆ ಕಳಿಸಿ -ಅವನನ್ನು ಮತ್ತೆ ಕ್ಷೇಮವಾಗಿ ಭೂಮಿಗೆ ಕರೆಸಿಕೊಂಡುದನ್ನು ನೆನೆಯಬಹುದು. ಶಿವನು ಲಿಂಗವೆಂದು ಅಂಗವೆಂದು ಎರಡಾಗಿ –ಅಂದರೆ ಈ ಪ್ರಪಂಚವೆಂದು ಜೀವವೆಂದು ಎರಡಾಗಿ –ಅಲ್ಲಿ ತನ್ನೊಂದು ಅಂಶವಾದ ಜೀವನು ಏನೆಲ್ಲ ಅದ್ಭುತಗಳನ್ನು ಎಸಗಬಲ್ಲನೆಂಬುದನ್ನು ಎಲ್ಲರಿಗೂ ವ್ಯಕ್ತಪಡಿಸುತ್ತ–ಆ ಮೂಲಕವೆ ಆ ಜೀವದ ಘನತೆಯನ್ನೂ, ಒಡೆಯನಾದ ತನ್ನ ಅವಿರಳ ಘನತೆಯನ್ನೂ ಪ್ರಕಟಿಸುವುದೇ ಆ ಶಿವನ ಅರ್ಥಪೂರ್ಣವಾದೊಂದು ಲೀಲೆಯಾಗಿದೆ. ಶಿವ+ಶಕ್ತಿ ಲಿಂಗ ಅಂಗ 1 2 3 4 ಭಾವಲಿಂಗ + ಪ್ರಕಾಶನ ಶಕ್ತಿ ಯೋಗಾಂಗ + ವಿಶುದ್ಧಭಕ್ತಿ ಪ್ರಾಣಲಿಂಗ + ವಿಮರ್ಶನ ಶಕ್ತಿ ಭೋಗಾಂಗ + ವಿಚಾರಭಕ್ತಿ ಇಷ್ಟಲಿಂಗ + ಆಭಾಸನ ಶಕ್ತಿ ಭಕ್ತಾಂಗ + ಆಚಾರ ಭಕ್ತಿ 1. ಭಾವಲಿಂಗ: ಮಹಾಲಿಂಗ,ಪ್ರಸಾದಲಿಂಗ ಪ್ರಾಣಲಿಂಗ: ಜಂಗಮಲಿಂಗ,ಶಿವಲಿಂಗ ಇಷ್ಟಲಿಂಗ: ಗುರುಲಿಂಗ, ಆಚಾರಲಿಂಗ 2. ಪ್ರಕಾಶನ ಶಕ್ತಿ: ಚಿತ್ಶಕ್ತಿ, ಪರಾಶಕ್ತಿ ವಿಮರ್ಶನ ಶಕ್ತಿ: ಆದಿಶಕ್ತಿ,ಇಚ್ಛಾಶಕ್ತಿ ಆಭಾಸನ ಶಕ್ತಿ: ಜ್ಞಾನಶಕ್ತಿ,ಕ್ರಿಯಾಶಕ್ತಿ 3. ಯೋಗಾಂಗ: ಐಕ್ಯ,ಶರಣ ಭೋಗಾಂಗ: ಪ್ರಾಣಲಿಂಗ,ಪ್ರಸಾದಿ ತ್ಯಾಗಾಂಗ:ಮಾಹೇಶ್ವರ,ಭಕ್ತ 4. ವಿಶುದ್ಧಭಕ್ತಿ : ಆನಂದಭಕ್ತಿ, ಸಮರಸಭಕ್ತಿ ವಿಚಾರಭಕ್ತಿ: ಅವಧಾನಭಕ್ತಿ, ಅನುಭಾವಭಕ್ತಿ ಆಚಾರಭಕ್ತಿ: ಶ್ರದ್ಧಾಭಕ್ತಿ,ನಿಷ್ಠಾಭಕ್ತಿ ವಿ : ಲೀಲೆಗಾಗಿ ಶಿವನು ಲಿಂಗವೆಂದು ಅಂಗವೆಂದು ಎರಡಾದಾಗ ಶಿವನ ಶಕ್ತಿಯೂ ಆ ಲಿಂಗದ ಜೊತೆಯಲ್ಲೇ ಚಿದಾದಿಶಕ್ತಿಯಾಗಿ ಈ ಪ್ರಪಂಚೋತ್ಪತ್ತಿಗೆ ಕಾರಣವಾಗುವಳು. ಈ ಶಕ್ತಿಯೇ ಅಂಗ(ಜೀವ)ವನ್ನು ಪ್ರಪಂಚದಿಂದ ಉದ್ಧರಿಸಿ ಮರಳಿ ಲಿಂಗದಲ್ಲಿ ಸಮರಸಗೊಳಿಸಲು ಶ್ರದ್ಧಾದಿಭಕ್ತಿಯಾಗಿ ಆ ಜೀವನ ಜೊತೆಗೂಡುವಳು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು