ಐಕ್ಯನ ಪ್ರಾಣಲಿಂಗಿಸ್ಥಲ - ಶಿವಧ್ಯಾನ
ಕುರುಹಿಲ್ಲ, ಕುರುಹಿಲ್ಲ ಲಿಂಗವೆಂದೆಂಬರೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ!
ಇದೆ ನೋಡಾ ಶಿವಾಚಾರ, ಇದೆ ನೋಡಾ ಶಿವದೊಡಕು!
'ಆತ್ಮನಾಂ ಪ್ರಕೃತಿಃ ಸ್ವಭಾವ' ಎಂದುದಾಗಿ
ಮುಟ್ಟಬಾರದ ಠಾವ ಮರೆಗೊಂಡಿರ್ಪ
ಮಮಕರ್ತ ಕೂಡಲಸಂಗಮದೇವ.
Transliteration Kuruhilla, kuruhilla liṅgavendembare,
terahillana terahilla jaṅgamavendembare!
Ide nōḍā śivācāra, ide nōḍā śivadoḍaku!
'Ātmanāṁ prakr̥ti svabhāva' endu
muṭṭabārada ṭhāva maregoṇḍirpa
mamakarta kūḍalasaṅgamadēva.
Manuscript
English Translation 2 If you describe Him as the Liṅga ,
He has no outward form;
If you describe Him as Jaṅgama ,
He knows no space between!
Look, this is Śiva -discipline,
This is the Śiva -mystery!
He is the course and essence of all souls
So it is writ:
Lord Kūḍala Saṅgama, who made me,
Hides in an inacessible place!
Translated by: L M A Menezes, S M Angadi
Hindi Translation लिंग कहो, तो कोई चिन्ह नहीं,
जंगम कहो, तो कोई अंतर नहीं,
देखो यही शिवाचार है, शिव-रहस्य है ।
‘आत्मानां प्रकृतिःस्वभावः’ इस प्रकार
ममकर्ता कूडलसंगमदेव अगम्य स्थान में छिपे हैं ॥
Translated by: Banakara K Gowdappa
Telugu Translation లేదు లేదు గురులింగమన భేదము
లేదు లేదు జంగమమన వేరు; శివాచారమిదేరా!
‘‘ఆత్మానాం ప్రకృతిః స్వభావ’ మన్నట్లు కర్త సంగమ దేవుడు
ముట్టరానిచోటు ముడుగుకొని యుండె.
Translated by: Dr. Badala Ramaiah
Marathi Translation
साकार नाही, साकार नाही लिंग म्हणण्यास,
अंतर नाही, अंतर नाही जंगम म्हणण्यास,
हाच पहा शिवाचार, हेच पहा शिवरहस्य.
`आत्म्यानां प्रकृतिः स्वभाव` म्हणूनी
अप्राप्य, अगम्य, तुम्ही माझे कर्ता कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಿಶ್ವಮಯವಾಗಿರುವ ಲಿಂಗಕ್ಕೆ ಪ್ರತ್ಯೇಕವಾದೊಂದು ಕುರುಹೆಲ್ಲಿದೆ ? ಈ ವಿಶ್ವದಲ್ಲಿ ಚೈತನ್ಯಾತ್ಮಕವಾದುದೆಲ್ಲಾ ಜಂಗಮವೆ ಆಗಿರುವಾಗ –ಇವನು ಜಂಗಮ. ಇದು ಜಂಗಮ, ಇವನು ಜಂಗಮನಲ್ಲ. ಇದು ಜಂಗಮವಲ್ಲ –ಎಂಬುದಕ್ಕೆ ಆಸ್ಪದವೆಲ್ಲಿದೆ ?
ಹೀಗೆ ಲಿಂಗವು ವಿಶ್ವಮಯ, ಜಂಗಮವು ಆ ವಿಶ್ವದ ಚೈತನ್ಯವೆಂದು ತಿಳಿದಾಚರಿಸುವುದೇ ಶಿವ(ಶರಣ) ಧರ್ಮದ ಗುಟ್ಟು ರಹಸ್ಯಮಯವಾದ ಈ ಶಿವತತ್ತ್ವದ ತೊಡಕನ್ನು ಬಿಡಿಸಲಾರದೆ ಗುಡಿಯ ಲಿಂಗವೆಂದೂ ಇಷ್ಟಲಿಂಗವೆಂದೂ ; ಜಂಗಮವೆಂದೂ, ಭಕ್ತನೆಂದೂ–ಅಜ್ಞಾನಿಗಳು ಗಳಹುತ್ತಿರುವರು.
ಲಿಂಗವೊಂದು ಕುರಿಯ ಹಿಕ್ಕೆಯಲ್ಲೂ ಇರುವುದು, ಬೇಡರ ಹಕ್ಕೆಯಲ್ಲೂ ಜಂಗಮವಿರುವುದು–ತಾಮಸಪ್ರಕೃತಿಯ ಶಿಷ್ಟರ ಕೈಗೆ ನಿಲುಕದೆಡೆಯಲ್ಲಿ ಆ ಲಿಂಗಜಂಗಮಗಳು ಗೋಪ್ಯವಾಗಿರುವವು.
ವಿ : ಜೀವನ್ಮುಕ್ತನಿಗೆ ವಿಶ್ವವೆಲ್ಲಾ ಲಿಂಗದಂತೆ ಪೂಜ್ಯವಾಗಿ, ಚೈತನ್ಯಾತ್ಮಕವಾದುದೆಲ್ಲಾ ಜಂಗಮದಂತೆ ಸೇವ್ಯವಾಗಿ ಕಂಗೊಳಿಸುವುದೆಂಬುದು ಈ ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು